Karnataka Times
Trending Stories, Viral News, Gossips & Everything in Kannada

Narendra Modi: ಇನ್ನೊಂದು ಕಡತಕ್ಕೆ ಸಹಿ ಹಾಕಿದ ಮೋದಿ! ವಿಮಾನ ಏರುವ ಬಡವರಿಗೆ ಗುಡ್ ನ್ಯೂಸ್

advertisement

ಕೇಂದ್ರ ಸರಕಾರವು ಈಗಾಗಲೇ ಅನೇಕ ಯೋಜನೆಯನ್ನು ಜನರಿಗಾಗಿ ಜಾರಿಗೆ ತಂದಿದೆ. ಜನರ ಹಿತರಕ್ಷಣೆ ಜೊತೆಗೆ ಮಾದರಿ ದೇಶಕ್ಕಾಗಿ ಒಗ್ಗಟ್ಟಿನಲ್ಲಿ ಮೋದಿ 3.0 ಸರಕಾರ ಮುಂದಿನ ತಯಾರಿ ನಡೆಸುತ್ತಿದ್ದು ಈಗಾಗಲೇ ಮುಂದೆ ಯಾವೆಲ್ಲ ಯೋಜನೆ ಜಾರಿಗೆ ತರಬೇಕು ಎಂಬ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಒಂದೊಂದಾಗಿ ಹೊರ ಹೊಮ್ಮುತ್ತಿದೆ‌.

WhatsApp Join Now
Telegram Join Now

ಮೋದಿ ಸರಕಾರದಲ್ಲಿ (PM Narendra Modi) ಇರುವ ಎಲ್ಲ ಖಾತೆ ಹಂಚಿಕೆ ಆಗಿದ್ದು ಬಡವರಿಗಾಗಿ ಹೊಸ ಯೋಜನೆಯೊಂದು ಜಾರಿಗೆ ಬರಲು ಸಿದ್ಧವಾಗುತ್ತಿದೆ. ಹಾಗಾದರೆ ಆ ಹೊಸ ಯೋಜನೆ ಯಾವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಂದು ನಿಮಗೆ ತಿಳಿಸಲಿದ್ದು ಪೂರ್ತಿ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಬಡವರ್ಗದಲ್ಲಿ ಇರುವ ಜನರಿಗೆ ಇರುವ ಅನೇಕ ಕನಸ್ಸಿನಲ್ಲಿ ಜೀವನದಲ್ಲಿ ಒಮ್ಮೆ ಆದರೂ ವಿಮಾನ ಯಾನ ಮಾಡಬೇಕು ಎಂಬ ದೊಡ್ಡ ಕನಸ್ಸು ಇದ್ದೇ ಇರುತ್ತದೆ‌. ಖುಷಿಯಲ್ಲಿ ಈ ಕನಸ್ಸನ್ನು ನನಸು ಮಾಡುವ ಸಲುವಾಗಿ ವಿಮಾನ ಯಾನದ ಬೆಲೆ ಒಮ್ಮೆ ಪರಿಶೀಲನೆ ಮಡಲು ಹೋದರೆ ಬೆಲೆ ಕಂಡು ತತ್ತರಿಸುವಂತೆ ಆಗಲಿದೆ. ಆದರೆ ಇನ್ನು ಬಡವರಿಗೆ ಮೋದಿ ಸರಕಾರದಿಂದ ಈಗ ಬಂಪರ್ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ನಾಗರಿಕ ವಿಮಾನ ಯಾನದ ದರ ಇನ್ನು ಮುಂದೆ ಕಡಿಮೆ ಆಗಲಿದೆ.

ನೂತನ ಸಚಿವರಿಂದ ತಿಳಿದು ಬಂತು ಗುಡ್ ನ್ಯೂಸ್:

 

advertisement

Image Source: Instagram

 

ಮೋದಿ (PM Narendra Modi) ಸರಕಾರದಿಂದ ನಾಗರಿಕ ವಿಮಾನಯಾನ ಸಚಿವ ಕಿಂಜರಾಂಪು ರಾಮ್ ಮೋಹನ್ ನಾಯ್ಡು (Kinjarapu Ram Mohan Naidu) ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ‌. ನಾಗರಿಕರ ವಿಮಾನ ಯಾನದ ಮೊತ್ತ ದುಬಾರಿ ಆಗಿದ್ದನ್ನು ಒಪ್ಪುವ ಸಂಗತಿಯೇ ಆಗಿದ್ದರೂ ಇನ್ನು ಮುಂದೆ ಟಿಕೆಟ್ ದರ (Flight Tickets) ಕಡಿಮೆ ಮಾಡುವ ಸರಕಾರ ತೀರ್ಮಾನಿಸುತ್ತಿದೆ. ಅದೇ ರೀತಿ ವಿಮಾನ ಯಾನ ಮಾಡುವ ಗ್ರಾಹಕರಿಗೆ ಅನುಭವ ಹಿತಕರ ಆಗಿಲ್ಲದಿದ್ದರೆ ಅಥವಾ ಇತರ ಸಮಸ್ಯೆ ಇದ್ದರೆ ಅದನ್ನು ಪರಿಹಾರ ಮಾಡಲು ಸರಕಾರ ಬದ್ಧವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬಳಿಕ ಮಾತನಾಡಿ ಸಾಮಾನ್ಯ ವರ್ಗದವರಿಗೂ ನಾಗರಿಕ ವಿಮಾನ ಯಾನ ಪ್ರಯಾಣ (Air Travel) ಮಾಡಬೇಕು ಎಂಬ ಆಸೆ ಕನಸ್ಸು ಇರಲಿದೆ ಅದಕ್ಕಾಗಿ ಸರಕಾರ ಸಹಕಾರ ನೀಡಲಿದೆ. ಸಾಮಾನ್ಯ ಜನರು ಬಸ್ , ರೈಲ್ವೇ ಪ್ರಯಾಣ ಮಾಡಿದಂತೆ ವಾಯುಯಾನದಲ್ಲಿ ಪ್ರಯಾಣ ಮಾಡುವಂತೆ ಮಾಡುವುದು ನಮ್ಮ ಸರಕಾರದ ಗುರಿಯಾಗಿದೆ. ಕೆಲ ತಿಂಗಳಿನಿಂದ ಅನೇಕ ಕಾರಣಕ್ಕಾಗಿ ವಿಮಾನ ಪ್ರಯಾಣ ದರ ತುಟ್ಟಿ ಆಗಿದೆ. ದುಬಾರಿ ಪ್ರಯಾಣ ಜನಸಾಮಾನ್ಯರಿಗೆ ಕಷ್ಟವಾಗಲಿದೆ.

 

Image Source: informalnewz

 

ವಿಮಾನ ಯಾನದ ದರ ಹೆಚ್ಚಾಗಿ ಇರುವ ಕಾರಣಕ್ಕೆ ಬಹುಸಂಖ್ಯಾತ ಜನರು ವಿಮಾನ ಯಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಪ್ರಯಾಣ ದರ ಕಡಿಮೆ ಮಾಡುವ ಯೋಜನೆಯತ್ತ ಸರಕಾರ ಚಿಂತನೆ ನಡೆಸುತ್ತಿರುವುದಾಗಿ ವಿಮಾನ ಯಾನ ಸಚಿವರು ಈ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಮಾಧ್ಯಮದವರ ಮುಂದೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದು ಸದ್ಯ ಈ ವಿಚಾರ ಬಡವರ ಪಾಲಿಗೆ ದೊಡ್ಡ ಬಂಪರ್ ಕೊಡುಗೆ ಕೂಡ ಆಗಲಿದೆ ಎನ್ನಬಹುದು.

advertisement

Leave A Reply

Your email address will not be published.