Karnataka Times
Trending Stories, Viral News, Gossips & Everything in Kannada

Pension Schemes: ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ವೃದ್ಧಾಪ್ಯದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ!

advertisement

ನಿವೃತ್ತಿಯ ನಂತರದ ಬದುಕು ಯಾವುದೇ ಕಾರಣಕ್ಕೂ ಆರ್ಥಿಕ ಸಮಸ್ಯೆ ಅನುಭವಿಸಬಾರದು ಎನ್ನುವ ಆಸಕ್ತಿ ಅಥವಾ ಅಭಿಲಾಷೆ ನಿಮ್ಮಲ್ಲಿಯೂ ಇದ್ದರೆ ತಕ್ಷಣವೇ ನೀವು ದುಡಿದ ಹಣದಲ್ಲಿ ಒಂದಷ್ಟು ಹಣವನ್ನು ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಆರಂಭಿಸಿ. ಯಾಕಂದ್ರೆ ಎಲ್ಲಾ ನೌಕರಿಯಲ್ಲಿ ಇರುವವರಿಗೆ ಪಿಂಚಣಿ ಹಣ (Pension Money) ಸಿಗುವುದಿಲ್ಲ. ಹಾಗಾಗಿ ನಾವು ನಿವೃತ್ತಿ ನಂತರದ ಜೀವನವನ್ನು ಸುಲಭವಾಗಿ ನಡೆಸಲು ನಮಗೆ ಪಿಂಚಣಿ (Pension) ಬರುವಂತೆ ಈಗಿನಿಂದಲೇ ಹಣ ಹೂಡಿಕೆ ಮಾಡಬೇಕು.

ವೃದ್ಧಾಪ್ಯದ ಸಮಯದಲ್ಲಿ ಹಣದ ಅವಶ್ಯಕತೆಯೂ ಜಾಸ್ತಿ. ಔಷಧ (Medicine) ಖರ್ಚಿಗಾಗಿ ಒಂದಷ್ಟು ಹಣ ಮೀಸಲಿಡಲೇಬೇಕು. ಇಂತಹ ಸಂದರ್ಭದಲ್ಲಿ ನೀವು ಉತ್ತಮ ಹೂಡಿಕೆ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಹಣ ಹೂಡಿಕೆ ಮಾಡುತ್ತೀರಿ ಎಂದರೆ ಭವಿಷ್ಯದಲ್ಲಿ ಹೆಚ್ಚು ಲಾಭವನ್ನು ಕೊಡುವ ಉಳಿತಾಯ ಯೋಜನೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಉತ್ತಮ ಬಡ್ಡಿ ದರ ಕೂಡ ಲಭ್ಯವಿದೆ. ಅಂತಹ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Senior Citizen Savings Scheme:

 

 

ಯೋಜನೆಯನ್ನು ಅಂಚೆ ಕಚೇರಿ (Post Office) ಯಲ್ಲಿ ನಿವೃತ್ತಿ ಹೊಂದಿದ ಹಿರಿಯ ನಾಗರಿಕರಿಗಾಗಿ ರೂಪಿಸಿರುವ ಯೋಜನೆ ಆಗಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ ಶೇಕಡ 8.2% ನಷ್ಟು ವಾರ್ಷಿಕ ಬಡ್ಡಿ ಲಭ್ಯವಾಗುತ್ತದೆ. ಹಾಗಾಗಿ ನಿವೃತ್ತಿಯ ಸಮಯದಲ್ಲಿ ಅತಿ ದೊಡ್ಡ ಮೊತ್ತವನ್ನು ಈ ಹೂಡಿಕೆಯಿಂದ ಪಡೆಯಬಹುದು.

Simple Pension Plan:

 

advertisement

 

ಎಲ್ಐಸಿ ಪ್ರೀಮಿಯಂ ಯೋಜನೆ (LIC Premium Plan) ಇದಾಗಿದ್ದು ಒಮ್ಮೆ ಹೂಡಿಕೆ ಮಾಡಿದರೆ ನೀವು ಕೆಲವು ವರ್ಷಗಳ ನಂತರ ಉತ್ತಮ ಆದಾಯ ಪಡೆದುಕೊಳ್ಳಲು ಸಾಧ್ಯವಿದೆ. ಇಲ್ಲಿ ನೀವು ಒಂದೇ ಪ್ರೀಮಿಯಂ ಪಾವತಿಸಬೇಕು ಅಂದರೆ ಈ ಯೋಜನೆಯಲ್ಲಿ ಒಂದು ಪ್ರೀಮಿಯಂ ಮಾತ್ರ ಪಾವತಿಸಲು ಇರುತ್ತದೆ ನೀವು ಒಟ್ಟಾರೆ ಹಣವನ್ನು ಒಂದೇ ಸಮಯಕ್ಕೆ ಡಿಪೋಸಿಟ್ (Deposit) ಇಡಬೇಕು. ಹೀಗೆ ಮಾಡಿದರೆ 40 ವರ್ಷಗಳ ಬಳಿಕ ಪ್ರತಿ ತಿಂಗಳು ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ. ಈ ಯೋಜನೆ ಕನಿಷ್ಠ 40 ವರ್ಷದಿಂದ ಗರಿಷ್ಠ 80 ವರ್ಷದ ಒಳಗಿನ ಯಾವುದೇ ವ್ಯಕ್ತಿ ಹೂಡಿಕೆ ಮಾಡಲು ಅವಕಾಶವಿದೆ.

Mutual Fund:

 

 

ಇದನ್ನು ನೀವು ಕೆಲಸಕ್ಕೆ ಸೇರಿದ ಆರಂಭದಲ್ಲಿಯೇ ಶುರು ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. SIP ನಲ್ಲಿ ಹೂಡಿಕೆ ಮಾಡಿದ್ದರೆ ಹೆಚ್ಚು ಲಾಭ ಸಿಗುತ್ತದೆ. ಆದರೆ ಇದು ಮಾರುಕಟ್ಟೆಯ ಅಪಾಯದಿಂದ ಹೊರಗುಳಿದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಈ ಯೋಜನೆಯಲ್ಲಿ ಬಡ್ಡಿ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ. ಸ್ಥಿರತೆ ಇರುವುದಿಲ್ಲ. ಆದರೂ ದೀರ್ಘಾವಧಿಯ ಹೂಡಿಕೆ ಇದು ಉತ್ತಮ ಆಯ್ಕೆಯಾಗಿದ್ದು ನೀವು ಹೂಡಿಕೆ ಮಾಡಿರುವ ಹಣಕ್ಕೆ ಅತಿ ಹೆಚ್ಚು ಲಾಭವನ್ನು ಪಡೆಯುತ್ತೀರಿ..

ದೇಶದಲ್ಲಿ ಸಾಕಷ್ಟು ಬೇರೆಬೇರೆ ರೀತಿಯ ಹೂಡಿಕೆ ಯೋಜನೆಗಳು ಇದೆ ಆದರೆ ಈ ಯೋಜನೆಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದಕ್ಕೂ ಮೊದಲು ಯೋಜನೆಯ ಬಗ್ಗೆ ಹಾಗೂ ಕಂಪನಿಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ ಇಲ್ಲವಾದರೆ ಬಾರಿ ನಷ್ಟ ಅನುಭವಿಸಬೇಕಾಗಬಹುದು.

advertisement

Leave A Reply

Your email address will not be published.