Karnataka Times
Trending Stories, Viral News, Gossips & Everything in Kannada

Pension: ಪಿಂಚಣಿದಾರರು ಈ ದಾಖಲೆಯನ್ನು ಮೊದಲು ಸಲ್ಲಿಸಿ, ಇಲ್ಲದಿದ್ದರೆ ಪಿಂಚಣಿ ನಿಲ್ಲುತ್ತೆ!

advertisement

ಇಂದು ಹಣವನ್ನು ಸೇವಿಂಗ್ ಮಾಡಿ ಇಡುವುದು ಕೂಡ ಅಷ್ಟೆ ಮುಖ್ಯವಾಗುತ್ತದೆ. ಕಷ್ಟದ ಸಮಯದಲ್ಲಾದರೂ ಈ ಹಣ ಬಳಕೆಗೆ ಬರುತ್ತದೆ. ಹೆಚ್ಚಿನ ಜನರು ಇಂದು ಪಿಂಚಣಿ (Pension) ಮೂಲಕ ಹಣ ಸೇವ್ ಮಾಡುತ್ತಾರೆ. ಅದರೆ ಇದರ ನಿಯಮಗಳನ್ನು ಸರಿಯಾಗಿ ಅರಿತು ಕೊಳ್ಳುವುದು ಸಹ ಮುಖ್ಯವಾಗುತ್ತದೆ. ಅದೇ ರೀತಿ EPS 1995ರ ಪಿಂಚಣಿದಾರರು (Pensioners) ಜೀವನ್ ಪ್ರಮಾಣ್ ಪತ್ರ (Jeevan Pramaan Patra) ವನ್ನು ಸಲ್ಲಿಸುವುದು ಕಡ್ಡಾಯ ಎಂದಿದೆ.

ಪ್ರಮಾಣ ಪತ್ರ ಸಲ್ಲಿಸಿ:

ಪಿಂಚಣಿದಾರರು (Pensioners) ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಜೀವನ್ ಪ್ರಮಾಣ್ ಪತ್ರವನ್ನು ಸಲ್ಲಿಸುವುದು ಸಹ ಕಡ್ಡಾಯ ವಾಗುತ್ತದೆ. ಜೀವನ್ ಪ್ರಮಾಣ ಪತ್ರದ ಸಲ್ಲಿಕೆ ವಿಳಂಬ ಆದರೆ ಪಿಂಚಣಿ ಹಣ (Pension Money) ನಿಲ್ಲಬಹುದು. ಈ ಹಿಂದೆ ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿತ್ತು. ಆದರೆ ಈಗ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಿದ ದಿನಾಂಕದಿಂದ ಹನ್ನೆರಡು ತಿಂಗಳಿಗೊಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕಡ್ಡಾಯ ಮಾಡಿದೆ.

 

 

ಮನೆಯಿಂದಲೇ ಅವಕಾಶ:

advertisement

ಈಗ ಪಿಂಚಣಿದಾರರು ಮನೆಯಿಂದಲೆ ಜೀವನ್‌ ಪ್ರಮಾಣ್‌ ಪತ್ರ ಸಲ್ಲಿಸಲು ಅವಕಾಶ ಇದೆ. ಈ ಹಿಂದೆ ಪಾವತಿ ಮಾಡಲು ಬ್ಯಾಂಕ್‌ (Bank) ಅಥವಾ ಅಂಚೆ ಕಚೇರಿಗೆ (Post Office) ತೆರಳಬೇಕಾಗುತ್ತಿತ್ತು. ಆದರೆ ಈಗ ಮನೆಯಿಂದಲೇ ಸಲ್ಲಿಸಬಹುದು. ನೌಕರರ ಪಿಂಚಣಿ ಯೋಜನೆ (Employees’ Pension Scheme) 1995 ರ ಬಳಕೆದಾರರು ಈಗ UIDAI ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (Authentication Technology) ಬಳಸಿಕೊಂಡು ಡಿಜಿಟಲ್ ಪ್ರಮಾಣಪತ್ರವನ್ನು ಸಲ್ಲಿಸಲು ಅವಕಾಶ ಇದೆ.

ಹೀಗೆ ಸಲ್ಲಿಸಿ:

ಪಿಂಚಣಿದಾರರು ಈಗ ಮೊಬೈಲ್‌ ಆ್ಯಪ್‌ (Mobile App), ಟೋಲ್‌-ಫ್ರೀ ನಂ (Toll Free No.) ಮೂಲಕ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆಯನ್ನು ಬುಕ್‌ ಮಾಡಲು ಅವಕಾಶ ಕೂಡ‌ಇದೆ. ಪಿಂಚಣಿದಾರರು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೂಲಕ ಅಥವಾ ಅಂಚೆ ಇಲಾಖೆಯ ಸೇವೆಯನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸ ಬಹುದಾಗಿದೆ.

ಯಾಕೆ ಕಡ್ಡಾಯ:

 

 

ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿದೆ. ಪಿಂಚಣಿದಾರ ಮೃತರಾಗಿದ್ದಾರೆಯೇ ಇಲ್ಲವೇ ಎಂಬ ಆಧಾರವನ್ನು ಈ ಪ್ರಮಾಣಪತ್ರ ತಿಳಿಸುತ್ತದೆ. ಇನ್ನೂ ಪಿಂಚಣಿದಾರರು ತಮ್ಮ 3 ವರ್ಷಗಳಿಗಿಂತ ಹೆಚ್ಚಿನ ಸಮಯ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದರೆ ನಂತರ ಪಿಪಿಓ ರದ್ದತಿ ಮಾಡಲಾಗುತ್ತದೆ. ಹಾಗಾಗಿ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿ ಬಳಕೆದಾರರು ಅದನ್ನು ಸಲ್ಲಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಈಗಾಗಲೇ ತಿಳಿಸಿದ್ದಾರೆ.

advertisement

Leave A Reply

Your email address will not be published.