Karnataka Times
Trending Stories, Viral News, Gossips & Everything in Kannada

K Venkatesh: ಬರಗಾಲದಿಂದ ಕಂಗೆಟ್ಟ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ, ಉಚಿತವಾಗಿ ಸಿಗಲಿದೆ ಬೀಜದ ಕಿಟ್!

advertisement

ಈ ವರ್ಷದಂದು ಮಳೆ ಅಭಾವದಿಂದ ಸಾಮಾನ್ಯ ಜನರಿಗಿಂತಲೂ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು ರೈತರೆಂದು ಹೇಳಬಹುದು. ರೈತರಿಗೆ ಕೃಷಿ ಕಾರ್ಯ ಚಟುವಟಿಕೆಯಿಂದ ಹಿಡಿದು ಪ್ರತಿಯೊಂದು ಕೆಲಸ ಕಾರ್ಯಕ್ಕೂ ಕೂಡ ಅಡೆತಡೆ ಆಗಿದೆ. ಒಂದೆಡೆ ಬೆಳೆಯಬೇಕೆಂದಿದ್ದ ಬೆಳೆಗೆ ಮಳೆ ಬೀಳದೆ ಬರುಡಾಗಿತ್ತಿದ್ದರೆ ಇನ್ನೊಂದೆಡೆ ಜಾನುವಾರುಗಳಿಗೆ ಮೇವು ಕೂಡ ಸಿಗುತ್ತಿಲ್ಲ ಈ ಪರಿಸ್ಥಿತಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಬಗ್ಗೆ ನೂತನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿವೇಶನದಲ್ಲಿ ಚರ್ಚೆ:

ಮೇವಿನ ಸಮಸ್ಯೆ ಬಗ್ಗೆ ಇತ್ತೀಚೆಗೆ ಅಧಿವೇಶನದಲ್ಲಿ ಸಹ ಚರ್ಚೆಆಗಿದೆ. ಮೇವಿನ ಸಮಸ್ಯೆ ಜಾನುವಾರುಗಳಿಗೆ ಕಾಡಿದರೆ ಅದು ರೈತರಿಗೂ ಸಮಸ್ಯೆ ಆಗಲಿದೆ ಹಾಗಾಗಿ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುವುರಿ ಎಂದು ವಿಧಾನ ಪರಿಷತ್ ನಲ್ಲಿ ಶಾಸಕ ಮಾಧೆ ಗೌಡ ಅವರು ಪ್ರಶ್ನೆ ಮಾಡಿದ್ದು ಇದಕ್ಕೆ ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ (K Venkatesh) ಅವರು ಸೂಕ್ತ ಉತ್ತರವನ್ನೇ ನೀಡಿದ್ದಾರೆ.

ಮೇವಿನ ಬಿಜದ ಪೊಟ್ಟಣ ವಿತರಣೆ:

 

 

advertisement

ಉಚಿತವಾಗಿ ರೈತರಿಗೆ ಮೇವಿನ ಬೀಜದ ಕಿಟ್ (Forage Seed Kit) ವಿತರಣೆ ಮಾಡಲಾಗುವುದು. ಅದಕ್ಕಾಗಿ 22 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು. ಅದರಲ್ಲಿ ಮೇವು ಉತ್ಪಾದನೆ ಪ್ರೋತ್ಸಾಹಿಸಲು 8,17,42 ನಷ್ಟು ಮೇವಿನ ಬೀಜದ ಕಿರು ಪೊಟ್ಟಣ ಖರೀದಿ ಮಾಡಲಾಗುತ್ತದೆ. ಯಾವೆಲ್ಲ ತಾಲೂಕನ್ನು ಬರ ಘೋಷಣೆ ಎಂದು ಮಾಡಲಾಗಿದೆಯೊ ಅಲ್ಲಿಗೆ ಇದನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ (K Venkatesh) ಅವರು ತಿಳಿಸಿದ್ದಾರೆ.

ಪೂರ್ವ ಸಿದ್ಧತೆ:

ಈಗಾಗಲೇ ಬರಗಾಲದಿಂದ ಇಡೀ ರಾಜ್ಯ ಹೈರಾಣಾಗುತ್ತಿದೆ. ಪ್ರಸ್ತುತ ಸಂಗ್ರಹವಾಗಿರುವ ಮೇವು 26ವಾರಕ್ಕೆ ಸಾಕಾಗಲಿದ್ದು 142ಲಕ್ಷ ಟನ್ ಮೇವು ರಾಜ್ಯದ ರೈತರ ಬಳಿ ಲಭ್ಯವಿದೆ. ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಅದು ಎಲ್ಲ ಖಾಲಿ ಆಗುವ ಮೊದಲು ಮೇವಿನ ಪೊಟ್ಟಣದ ವಿತರಣೆ ಮತ್ತು ಎಲ್ಲ ಕಾರ್ಯವಿಧಾನದಿಂದ ಪರಿಸ್ಥಿತಿ ಸಮತೋಲನಕ್ಕೆ ತರಲಾಗುವುದು. ಪೂರ್ವ ಸಿದ್ಧತೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹೊರ ರಾಜ್ಯಕ್ಕೆ ಮೇವಿನ ಸಾಗಾಟ ಇಲ್ಲ:

ಮೇವು ಪೂರೈಕೆ ಕಡಿಮೆ ಇರುವ ಕಾರಣ ಅನ್ಯ ರಾಜ್ಯಕ್ಕೆ ಮೇವಿನ ರಫ್ತು ಮಾಡುವುದು ತಡೆ ಹಿಡಿಯಲಾಗಿದೆ. ನಮ್ಮಲ್ಲಿ ಕೊರತೆ ಇಲ್ಲದಾಗ ಈ ನಿರ್ಬಂಧ ಇರದು ಆದರೆ ಈಗ ನಮ್ಮ ರಾಜ್ಯಕ್ಕೆ ಕಡಿಮೆ ಮೇವು ಇರುವಾಗ ಅನ್ಯ ರಾಜ್ಯಕ್ಕೆ ಸಾಗಾಟ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲ ಜಿಲ್ಲಾವಾರು ಆದೇಶ ಹೊರಡಿಸಿರುವುದಾಗಿ ಪಶುಸಂಗೋಪನೆ ಅಭಿವೃದ್ಧಿ ಸಚಿವ ಕೆ. ವೆಂಕಟೇಶ್ ಅವರು ಹೇಳಿದ್ದಾರೆ.

advertisement

Leave A Reply

Your email address will not be published.