Karnataka Times
Trending Stories, Viral News, Gossips & Everything in Kannada

Pension: ಈ ಯೋಜನೆಯಲ್ಲಿ ದಿನಕ್ಕೆ 7 ರೂ. ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 5 ಸಾವಿರ ಪಿಂಚಣಿ ಪಡೆಯಿರಿ!

advertisement

ಇಂದು ಹೂಡಿಕೆ ಅನ್ನೋದು ಬಹುಮುಖ್ಯ ವಾದ ಅಂಶ. ಯಾಕಂದ್ರೆ ಕಷ್ಟ ಕಾಲದಲ್ಲಿ ಹಣವೇ ಇಲ್ಲ ಅಂದಾಗ ಉಪಯೋಗವಾಗುವ ಹಣವೇ ಅದು ಹೂಡಿಕೆ. ಇಂದು ಪ್ರತಿಯೊಬ್ಬರು ಹೂಡಿಕೆಗೆ ಬಹಳಷ್ಟು ಮಹತ್ವ ನೀಡುತ್ತಾರೆ. ಚಿನ್ನ (Gold), ಆಸ್ತಿ (Property), ಫಂಡ್ (Fund), ಪಿಂಚಣಿ (Pension) ಹೀಗೆ ಹಲವಾರು ವಿಧಗಳಲ್ಲಿ ವಸ್ತು ಅಥವಾ ಯೋಜನೆ ಮೂಲಕ ಹಣ ಹೂಡಿಕೆ ಮಾಡುತ್ತಾರೆ. ಅದೇ ರೀತಿ ಅಟಲ್ ಪಿಂಚಣಿ (Atal Pension Yojana) ಯನ್ನು ನೀವು ಕೇಳಿರಬಹುದು, ನೀವು ಈ ಯೋಜನೆಯ ಮೂಲಕ ಕಡಿಮೆ ಮೊತ್ತದ ಹಣವನ್ನಾದರೂ ಹೂಡಿಕೆ ಮಾಡಲು ಅವಕಾಶ ಇದೆ.

ಕನಿಷ್ಟ ಮೊತ್ತ ಹೂಡಿಕೆ:

ಈ ಯೋಜನೆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ಸರಿಯಾದ ಜೀವನ ಸಾಗಿಸಲು ಆಟಲ್ ಪಿಂಚಣಿ ಯೋಜನೆ (Atal Pension Yojana) ಯನ್ನು ಜಾರಿಗೆ ತರಲಾಗಿದೆ. ನೀವು ಸಣ್ಣ ವಯಸ್ಸಿನಲ್ಲಿಯೆ ಹೂಡಿಕೆ ಮಾಡಲು ಪ್ರಾರಂಭಿಸದರೆ ಬಹಳ ಒಳಿತು. ಇದು ದಿನಕ್ಕೆ ಕನಿಷ್ಠ ಮೊತ್ತ ಅಂದ್ರೆ ಕೇವಲ ರೂ 7 ಹೂಡಿಕೆಯೊಂದಿಗೆ ರೂ 5,000 ಮಾಸಿಕ ಪಿಂಚಣಿ ಪಡೆಯಲು ಸಹಾಯ ಮಾಡುತ್ತದೆ. ಹೌದು ನೀವು 18 ನೇ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆ ಪ್ರಾರಂಭಿಸಿದರೆ, 60 ನೇ ವಯಸ್ಸಿನಲ್ಲಿ ನೀವು ಮಾಸಿಕ 5,000 ರೂ.ಗಳ ಪಿಂಚಣಿ ಪಡೆಯಬಹುದು.

ಯಾವೆಲ್ಲ ಯೋಜನೆ ಇದೆ!

ಈ‌ ಯೋಜನೆ ಮೂಲಕ ಪತಿ ಮತ್ತು ಪತ್ನಿ ಹೂಡಿಕೆ ಮಾಡಿದ್ದರೆ ಇಬ್ಬರೂ ಸಹ ಪಿಂಚಣಿ (Pension) ಪಡೆಯಬಹುದು. ಅಂದರೆ ಗಂಡ ಹೆಂಡತಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ 1,20,000 ಮತ್ತು ಮಾಸಿಕ 10,000 ಪಿಂಚಣಿ ಇವರಿಗೆ ದೊರೆಯುತ್ತದೆ.

 

advertisement

 

ಅದೇ ರೀತಿ ನಿವೃತ್ತಿ ನಂತರ ಪ್ರತಿ ತಿಂಗಳು 5000 ರೂ. ಪಿಂಚಣಿ (Pension) ಪಡೆಯಬೇಕೆಂದರೆ 18 ವರ್ಷ ವಯಸ್ಸು ಇರುವಾಗಿನಿಂದ ಪ್ರತಿ ತಿಂಗಳು 210 ರೂ. ಪಾವತಿ ಮಾಡಿದ್ದರೆ ವೃದ್ಧಾಪ್ಯದ ಹಣ ದೊರೆಯುತ್ತದೆ. ಇನ್ನೂ ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ, ತೆರಿಗೆ ವಿನಾಯಿತಿ ಸಹ ಸಿಗಲಿದೆ.

ಅರ್ಹತೆ ಏನು?

ಅಟಲ್ ಪಿಂಚಣಿ ಯೋಜನೆ (Atal Pension Yojana) ಗೆ ಆಯ್ಕೆ ಯಾಗಬೇಕಾದರೆ ಅರ್ಜಿದಾರನು ಭಾರತದ ಪ್ರಜೆಯಾಗಿರಬೇಕು.ಇನ್ನೂ ಆಧಾರ್‌ಕಾರ್ಡ್ (Aadhaar Card) ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಈ ಯೋಜನೆಯ ಅರ್ಜಿ ನಮೂನೆಗಳು ಆನ್‌ಲೈನ್ ಮತ್ತು ಬ್ಯಾಂಕ್‌ನಲ್ಲಿ ಲಭ್ಯವಿದ್ದು ಅರ್ಜಿ ಸಲ್ಲಿಸಬಹುದಾಗಿದೆ.

ಈ ರೀತಿ ಅರ್ಜಿ ಸಲ್ಲಿಸಿ:

ನೀವು ಅಟಲ್ ಪಿಂಚಣಿ ಯೋಜನೆ (Atal Pension Yojana) ಗೆ ಅರ್ಜಿ ಸಲ್ಲಿಸುದಾದರೆ ಉಳಿತಾಯ ಖಾತೆಯನ್ನು ತೆರೆದು, ಅಟಲ್ ಖಾತೆ (Atal Account) ಯ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಇಲ್ಲಿ ನಿಮ್ಮ ಹೆಸರು (Name), ವಯಸ್ಸು (Age), ಮೊಬೈಲ್ ಸಂಖ್ಯೆ (Mobile Number), ಇತ್ಯಾದಿ ಅಗತ್ಯಮಾಹಿತಿ ಮತ್ತು ದಾಖಲೆಗಳನ್ನು ನೀಡಿ‌ ಬ್ಯಾಂಕ್‌ಗೆ ನೀಡಬಹುದು.

advertisement

Leave A Reply

Your email address will not be published.