Karnataka Times
Trending Stories, Viral News, Gossips & Everything in Kannada

Govt. Land: ಸರಕಾರಿ ಭೂಮಿ ಒತ್ತುವರಿ ಪಡೆದವರಿಗೆ ಎಚ್ಚರಿಕೆ ಕೊಟ್ಟ ಸರ್ಕಾರ, ತಪ್ಪು ಮಾಡಿದ್ರೆ ಕಠಿಣ ಕ್ರಮ ಜಾರಿ!

advertisement

ಸರಕಾರಿ ಜಮೀನು (Govt. Land) ಒತ್ತುವರಿ ಮಾಡುವ ಪ್ರಮಾಣ ಇತ್ತೀಚೆಗೆ ಅಧಿಕವಾಗುತ್ತಿದೆ. ಭೂ ಮಾಫಿಯಾ ಪ್ರಮಾಣ ಹೆಚ್ಚಾಗುತ್ತಿದ್ದು ಇದಕ್ಕೆ ಸಹಕಾರ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮತ್ತು ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ರಾಜ್ಯದ ಸಮಸ್ಯೆ:

ಇತ್ತೀಚೆಗೆ ವಿಧಾನಪರಿಷತ್ ನ ಸಭೆಯಲ್ಲಿ ಸರಕಾರಿ ಜಮೀನಿನ ಒತ್ತುವರಿ (Govt. Land Encroachment) ವಿರುದ್ಧ ಸರಕಾರ ಕೈಗೊಂಡ ಕ್ರಮದ ಬಗ್ಗೆ ವೈ ಎ ನಾರಾಯಣ ಸ್ವಾಮಿ (Y. A. Narayanaswamy) ಅವರು ಪ್ರಶ್ನೆ ಮಾಡಿದ್ದು ಕಂದಾಯ ಸಚಿವರು ಸೂಕ್ತ ಉತ್ತರವನ್ನು ನೀಡಿ ಈ ಬಗ್ಗೆ ಮಾತನಾಡಿದ್ದಾರೆ. ಸರಕಾರಿ ಭೂಮಿಯ ಒತ್ತುವರಿ ಇಡೀ ರಾಜ್ಯದಲ್ಲೇ ಕಂಡು ಬಂದ ಸಮಸ್ಯೆಯಾಗಿದ್ದು ಇದಕ್ಕೆ ಸರಕಾರಿ ಅಧಿಕಾರಿಗಳು ಕೈ ಜೋಡಿಸಿರುವುದು ದುಃಖದ ಸಂಗತಿಯಾಗಿದೆ.

FIR ದಾಖಲೆ:

ಜಮೀನು ಮತ್ತು ಒತ್ತುವರಿ ಪಡೆದ ಭೂಮಿಯನ್ನು ಖಾಸಗಿಯಾಗಿ ಜನರಿಗೆ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ ಹಾಗಾಗಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ಸಹ ದಾಖಲಿಸ ಲಾಗುವುದು. ಸರಕಾರಿ ಭೂಮಿ (Govt. Land) ಒತ್ತುವರಿ ಪಡೆದು ಬೆಂಗಳೂರಿನಲ್ಲಿ ಉಪವಿಭಾಗಾಧಿಕಾರಿ ಮಾರಾಟಮಾಡಿದ್ದು ತಿಳಿದುಬಂದಿದೆ. ಅವರ ವಿರುದ್ಧ FIR ಸಹ ದಾಖಲಿಸಲಾಗಿದೆ. ಇಂತಹ ಕೆಲಸ ಮಾಡಿದ್ದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

 

advertisement

ಆದೇಶ ಜಾರಿ:

ಬಳಿಕ ಮಾತನಾಡಿ ಇದು ಬರೀ ಬೆಂಗಳೂರಿನ ಕಥೆಯಲ್ಲ ಬದಲಿಗೆ ರಾಜ್ಯದಲ್ಲಿ ನಾನಾ ಜಿಲ್ಲೆಯಲ್ಲಿ ಇದೇ ಸಮಸ್ಯೆ ಇದೆ. ಹಾಗಾಗಿ ಯಾವ ಭಾಗದಲ್ಲಿ ಎಷ್ಟು ಜಾಗ ಹಿಂದೆ ದಾಖಲಿತ್ತು ಈಗ ಎಷ್ಟಿದೆ ಎಷ್ಟು ಅಕ್ರಮ ಒತ್ತುವರಿ ಆಗಿದೆ ಎಂಬ ಅಷ್ಟು ಮಾಹಿತಿಯನ್ನು ನೀಡುವಂತೆ ಆಯಾ ಜಿಲ್ಲೆಯ ಕಂದಾಯ ಇಲಾಖೆಗೆ ಆದೇಶ ಹೋಗಿದೆ. ಈ ಒಂದು ಆದೇಶದನ್ವಯ ಅಕ್ರಮ ಕಂಡು ಬಂದ ಪ್ರದೇಶಗಳನ್ನು ತೆರವು ಮಾಡಲಾಗುತ್ತಿದೆ. ಈ ಅಕ್ರಮ ಒತ್ತುವರಿ ವಾಪಾಸ್ಸು ಪಡೆಯುವ ಸರ್ವ ಪ್ರಯತ್ನ ನಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಖಾಲಿ ಜಾಗಕ್ಕೆ ಭೇಟಿ:

ಒಟ್ಟಾರೆಯಾಗಿ ಜಮೀನು ರಕ್ಷಣೆಗೆ ಸರಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಸರಕಾರಿ ಜಮೀನಿನ ದಾಖಲೆ ಮಾಹಿತಿಯನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಲಾಗುತ್ತಿದೆ. ಖಾಲಿ ಜಾಗದಲ್ಲೂ ಜಿಪಿಎಸ್ ಲೊಕೇಶನ್ ಮಾರ್ಕ್ ಕೂಡ ತೋರಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಭೇಟಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

advertisement

Leave A Reply

Your email address will not be published.