Karnataka Times
Trending Stories, Viral News, Gossips & Everything in Kannada

Vehicle Tax: ವಾಹನ ಖರೀದಿಸುವವರಿಗೆ ಕಹಿಸುದ್ದಿ, ಈ ವಾಹನಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ ಸರ್ಕಾರ!

advertisement

ಕಾನೂನಿನ ಸಂಗತಿಗಳು ಪ್ರತಿ ನಿತ್ಯ ಜೀವನದಲ್ಲಿ ಅಡಕವಾಗಿರುವಂತದ್ದಾಗಿದ್ದು ಅದು ಆಗಾಗ ಬದಲಾಗುತ್ತಲೇ ಇದ್ದು ಅಂತಹ ಬದಲಾವಣೆಯಲ್ಲಿ ಕೆಲವೊಂದು ಖುಷಿ ಎನಿಸಿದರೆ ಇನ್ನೂ ಕೆಲವೊಂದು ಹೊರೆ ಎನಿಸುವುದು. ಈಗ ಇದೇ ರೀತಿಯ ಬೆಳವಣಿಗೆಯೊಂದು ಕರ್ನಾಟಕದಲ್ಲಿ ಸಹ ಆಗಿದ್ದು ಮೋಟಾರು ವಾಹನ ತಿದ್ದುಪಡಿ ಮುಖೇನ ವಾಹನಗಳ ಮೇಲಿನ ತೆರಿಗೆ (Vehicle Tax) ಹೊರೆ ಹೆಚ್ಚಿಸಲಾಗಿದೆ.

ಬೆಳಗಾವಿಯ ಸುವರ್ಣ ಸೌದದಲ್ಲಿ ಮೋಟಾರು ವಾಹನಗಳ ಮಸೂದೆ ವಿಚಾರ ಮತ್ತೆ ಪುನಃ ಮುನ್ನೆಲೆಗೆ ಬಂದಿದೆ. ಅದರಲ್ಲಿ ಕರ್ನಾಟಕ ಮೋಟಾರ್ ವಾಹನ (2ನೇ ತಿದ್ದುಪಡಿ) ಮಸೂದೆ, ಕರ್ನಾಟಕ ಹೈಕೋರ್ಟ್ (Karnataka High Court) ಮತ್ತು ಸಿವಿಲ್ ಕೋರ್ಟ್ (Civil Court) ಮಸೂದೆ 2023ರನ್ನು ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ ಮಂಡಿಸಲಾಯಿತು. 2019ರಲ್ಲಿ ಕೇಂದ್ರ ಸರಕಾರದ ಮೋಟಾರ್ ವಾಹನದ ಕಾಯ್ದೆ ಜಾರಿಗೊಂಡಿದ್ದು ಅದರ ತಿದ್ದುಪಡಿ ರೂಪವನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಯಿತು. ಈ ಮೂಲಕ ಶಾಲಾ ವಾಹನ (School Van), ಸರಕು ಸಾಗಾಟದ ಸೇವಾ ವಾಹನ, ಕ್ಯಾಬ್ (CAB) ಇತರ ವಾಹನದ ಮೇಲಿನ ತೆರಿಗೆ ಹೆಚ್ಚಿಸುವ ವಿಚಾರ ಬಡವರ್ಗದ ಪಾಲಿಗೆ ನುಂಗಲಾರದ ತುತ್ತಾಗಿದೆ.

ಎಷ್ಟೆಷ್ಟು ವಾಹನಗಳಿವೆ?

ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿ 50,165 ವಾಹನಗಳಿದೆ, 5,600 ಸರಕಿನ ವಾಹನಗಳಿವೆ, 2,000 ಎಲೆಕ್ಟ್ರಾನಿಕ್ ವಾಹನ (Electric Vehicle), 4050 ಕ್ಯಾಬ್ (CAB) ಇಂತಹ ವಾಹನಗಳ ವಿಭಾಗಾಧಾರಿತ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ 234.34 ಕೋಟಿ ರೂಪಾಯಿ ನಷ್ಟು ತೆರಿಗೆ ಹೆಚ್ಚಳವಾಗಲಿದೆ ಇದು ಆಡಳಿತ ವ್ಯವಸ್ಥೆಯಲ್ಲಿ ಸಹಕಾರ ವಾದರೂ ಜನರಿಗೆ ಮಾತ್ರ ಹೆಚ್ಚುವರಿ ತೆರಿಗೆ ಹೊರೆ ಬೀಳಲಿದೆ. ವಾಹನಗಳಲ್ಲಿಯೂ ವಿಭಾಗೀಯ ಕ್ರಮ ಅನುಸರಿಸಲಾಗಿದೆ. ವಾಹನದ ವೆಚ್ಚದ ಮೇಲೆ 13% ದಿಂದ 18%ದ ವರೆಗೆ ತೆರಿಗೆ ವಿಭಾಗ ಇರುವುದು ಕಾಣಬಹುದು.

 

advertisement

 

  • ಕ್ಯಾಬ್ (CAB) ಗಳನ್ನು ಅವುಗಳ ಖರೀದಿ ವೆಚ್ಚದ ಮೇಲೆ ಅಳೆಯಲಾಗುವುದು. 10-15 ಲಕ್ಷ ರೂಪಾಯಿ ಮತ್ತು 15ಲಕ್ಷಕ್ಕಿಂತ ಅಧಿಕ ಎಂಬ ಆಧಾರದ ಮೇಲೆ ತೆರಿಗೆ ಸಂಗ್ರಹ ಮಾಡಲಾಗುವುದು. ಈ ಪ್ರಕಾರ 9%ನಿಂದ 15 % ವರೆಗೆ ತೆರಿಗೆ ವಿಧಿಸಲಾಗುವುದು.
  • ಸರಕಿನ ವಾಹನಕ್ಕೆ ತೂಕ ಸಾಗಿಸುವ ವಿಧಾನದ ಮೂಲಕ ತೆರಿಗೆ ಹೆಚ್ಚು ಕಡಿಮೆ ಆಗಲಿದೆ. 1,500 ರಿಂದ 9,500 ರ ತೂಕ ಸಾಗಾಟದ ಮೇಲೆ 20,000ದಿಂದ 80,000ದ ವರೆಗೆ ತೆರಿಗೆ ವರ್ಗವಾಗಲಿದೆ.
  • ಖಾಸಗಿ ವಾಹನದ ವಿಚಾರಕ್ಕೆ ಬಂದರೆ 5ಲಕ್ಷ ರೂಪಾಯಿ ನಿಂದ 20ಲಕ್ಷ ರೂಪಾಯಿ ವರೆಗೆ ವಿವಿಧ ವರ್ಗವಾಗಿ ವಿಭಾಗಿಸಲಾಗಿದೆ.

ತೆರಿಗೆ ವಿನಾಯಿತಿಗೆ ನಿರ್ಧಾರ

ಈ ಬಾರಿ ನೋಂದಾವಣಿ ಆಗುವ ಹೊಸ ವಾಹನಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಾಗುವುದು. ಕ್ಯಾಬ್ ಮಾಲಿಕರು ಅನೇಕ ಭಾರಿ ವಿನಂತಿ ಮಾಡಕೊಂಡ ಕಾರಣ ಹಳೆ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲು ಸರಕಾರ ನಿರ್ಧರಿಸಿದೆ. ಕರ್ನಾಟಕದಲ್ಲಿ ಕಾನೂನು ಆಯುಕ್ತರ ಸಲಹೆ ಸೂಚನೆಯಂತೆ ಕೆಲವು ಪರಿಣಾಮಕಾರಿ ತಿದ್ದುಪಡಿ ಜಾರಿಗೆ ತರಲಾಗುವುದು ಈ ಮೂಲಕ ಬಗೆ ಹರಿಯದೇ ನಿಂತ ಕೆಲ ಮೋಟಾರ್ ವಾಹನಗಳ ಸಮಸ್ಯೆಗೆ ಕೂಡ ಕಾನೂನು ತಿದ್ದುಪಡಿ ಮೂಲಕ ಉತ್ತರ ಸಿಗಲಿದೆ ಎಂದು ಗೃಹ ಸಚಿವರಾದ ಜಿ. ಪರಮೇಶ್ವರ್ (G. Parameshwar) ಅವರು ಅಧಿವೇಶನದಲ್ಲಿ ಈ ಬಗ್ಗೆ ಹೇಳಿದ್ದಾರೆ.

advertisement

Leave A Reply

Your email address will not be published.