Karnataka Times
Trending Stories, Viral News, Gossips & Everything in Kannada

FASTag: ಫಾಸ್ಟ್ ಟ್ಯಾಗ್ ಇದ್ರೂ ಪಾವತಿಸಬೇಕು ದಂಡ, ಹೊಸ ರೂಲ್ಸ್ ಜಾರಿಗೆ!

advertisement

ಇಂದು ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗ ಮೊದಲಿನಂತೆ ಟೋಲ್ ಪ್ಲಾಜದಲ್ಲಿ ಹೆಚ್ಚು ಸಮಯ ಕಳೆಯಬೇಕಿಲ್ಲ. ಕಾಯಬೇಕಿಲ್ಲ. ಕೆಲವು ಸೆಕೆಂಡ್ ಗಳಲ್ಲಿ ಟೋಲ್ ಪ್ಲಾಜಾ ದಿಂದ ಆಚೆ ಬರಬಹುದು ಹೇಗೆ ಅಂತೀರಾ? ಇಂದು ಪ್ರತಿಯೊಬ್ಬರು ವಾಹನ ಚಲಾಯಿಸುವಾಗ ಮುಖ್ಯವಾಗಿ ಫಾಸ್ಟ್ ಟ್ಯಾಗ್ ಬಳಸುತ್ತಾರೆ. ಹಾಗಾಗಿ ನಗದು ಹಣವನ್ನು ಕೊಟ್ಟು ಚೆಕಿಂಗ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಫಾಸ್ಟ್ ಟ್ಯಾಗ್ ಒಂದಿದ್ರೆ ತಕ್ಷಣಕ್ಕೆ ವಾಹನ ಚಲಾವಣೆ ಶುಲ್ಕ ನಿಮ್ಮ ಖಾತೆಯಿಂದ ನೇರವಾಗಿ ಕಟ್ಟಾಗುತ್ತದೆ.

ಫಾಸ್ಟ್ ಟ್ಯಾಗ್ ಬಳಸುತ್ತಿದ್ದರು ಪಾವತಿಸಬೇಕು. ದಂಡ ಯಾಕೆ ಗೊತ್ತಾ?

ಹೌದು, ಇತ್ತೀಚೆಗೆ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಇದು ದೊಡ್ಡ ತಲೆನೋವು ಆಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನಿಖೆ ನಡೆಸಿ ಯಾಕೆ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ (FASTag)ಇದ್ರು ಪಾವತಿಸಬೇಕು ದಂಡ, ಎಂಬುದಕ್ಕೆ ಕಾರಣ ಪತ್ತೆ ಮಾಡಿದೆ ಇನ್ನು ಮುಂದೆ ಚಾಲಕರು ಇಂತಹ ತಪ್ಪನ್ನು ಮಾಡದೇ ಇರುವಂತೆ ಎನ್ ಹೆಚ್ ಎ ಐ ಮನವಿ ಮಾಡಿಕೊಂಡಿದೆ.

ಫಾಸ್ಟ್ ಟ್ಯಾಗ್ ಇದ್ದರೂ ದಂಡ ಪಾವತಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಕಾರಣಗಳು!

ಮುಖ್ಯವಾಗಿ ಹೆದ್ದಾರಿಗಳಲ್ಲಿ ಬಹಳ ವಿರಳವಾಗಿ ಚಲಾಯಿಸುವ ವಾಹನಗಳು ಈ ಸಮಸ್ಯೆಯನ್ನು ಎದುರಿಸುವಂತೆ ಆಗಿದೆ. ಇಂಥವರು ಈ ಮೊದಲು ನಗದು ರೂಪದಲ್ಲಿ ಹಣವನ್ನು ಪಾವತಿ ಮಾಡುತ್ತಿದ್ದರು. ನಂತರ 2021 ಫೆಬ್ರುವರಿ ಇಂದ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ, ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದರು ಕೂಡ ದಂಡ ಪಾವತಿಸುವಂತೆ ಆಗಿದೆ. ಈಗಾಗಲೇ ಚಾಲಕರು ಸಾಕಷ್ಟು ಬಾರಿ ಟೋಲ್ ಪ್ಲಾಜಾ ದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಜೊತೆಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಟೋಲ್ ನೌಕರರಿಗೆ ಇದರ ಬಗ್ಗೆ ಕಾರಣ ತಿಳಿದಿಲ್ಲ.

advertisement

ರಸ್ತೆ ಸಾರಿಗೆ ಸಚಿವಾಲಯ 2016 ನವೆಂಬರ್ ತಿಂಗಳಿನಿಂದ ಫಾಸ್ಟ್ ಟ್ಯಾಗ್ ಅನ್ನು ದೇಶಾದ್ಯಂತ ಪ್ರಾರಂಭಿಸಿತು. ನವೆಂಬರ್ ತಿಂಗಳಿನಿಂದ ಪ್ರತಿಯೊಂದು ವಾಹನಕ್ಕೂ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನವೆಂಬರ್ 2016ರಲ್ಲಿ ವಾಹನ ಖರೀದಿಸಿದರೆ ಅಂತವರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದರು ಕೂಡ ಟೋಲ್ ಪ್ಲಾಜಾ ದಲ್ಲಿ ಅದು ಕಾರ್ಯ ನಿರ್ವಹಿಸುವುದಿಲ್ಲ.

ಹಾಗಾಗಿ ಚಾಲಕರು ಹಳೆಯ ಫಾಸ್ಟ್ ಟ್ಯಾಗ್ ಅಂದರೆ 2016ರಲ್ಲಿ ಪಡೆದುಕೊಂಡ ಫಾಸ್ಟ್ ಟ್ಯಾಗ್ ಅನ್ನು ತೆಗೆದು ಹೊಸ ಫಾಸ್ಟ್ ಟ್ಯಾಗ್ ಪಡೆದುಕೊಳ್ಳಬೇಕಾಗುತ್ತದೆ. ನೀವು ಹಳೆಯ ಫಾಸ್ಟ್ ಟ್ಯಾಗ್ ಅನ್ನು ಬಳಸುತ್ತಿದ್ದು, ಅದು ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗಿದ್ದರೆ ನೀವು ಸಂಬಂಧ ಪಟ್ಟ ಬ್ಯಾಂಕ್ ಗೆ ಹೋಗಿ ಮತ್ತೊಂದು ಫಾಸ್ಟ್ ಟ್ಯಾಗ್ ಪಡೆದುಕೊಳ್ಳಬೇಕು. ಹಳೆಯ ಫಾಸ್ಟ್ ಟ್ಯಾಗ್ ನಲ್ಲಿ ಇರುವ ಹಣವನ್ನು ಹೊಸದಾಗಿ ಪಡೆದುಕೊಂಡ ಫಾಸ್ಟ್ ಟ್ಯಾಗ್ ಗೆ ವರ್ಗಾಯಿಸಿಕೊಳ್ಳಬಹುದು.

ಫಾಸ್ಟ್ ಟ್ಯಾಗ್ ನಲ್ಲಿ ಸಾಧನೆ ಮಾಡಿದ ಹೆದ್ದಾರಿ ಪ್ರಾಧಿಕಾರ!

ಇಂದು ದೇಶಾದ್ಯಂತ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ, ಸುಮಾರು 2000 ಟೋಲ್ ಪ್ಲಾಜಾ ಗಳಲ್ಲಿ ಫಾಸ್ಟ್ ಟ್ಯಾಗ್ ಅನ್ನು ಬಳಸಲಾಗುತ್ತದೆ. ನಮ್ಮ ದೇಶದಲ್ಲಿ 6.5 ಕೋಟಿಗೂ ಹೆಚ್ಚು ಫಾಸ್ಟ್ ಟ್ಯಾಗ್ ವಿತರಣೆ ಮಾಡಲಾಗಿದೆ. ಹಾಗಾಗಿ ಯಾರು ಟೋಲ್ ಪ್ಲಾಜಗಳಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಹೆಚ್ಚುವರಿ ದಂಡ ಪಾವತಿಸುತ್ತಿದ್ದೀರೋ ಅಂತವರು ತಕ್ಷಣ ಹಳೆ ಫಾಸ್ಟ್ ಟ್ಯಾಗ್ ಬದಲಿಗೆ ಹೊಸ ಫಾಸ್ಟ್ ಟ್ಯಾಗ್ ಪಡೆದುಕೊಳ್ಳಿ.

advertisement

Leave A Reply

Your email address will not be published.