Karnataka Times
Trending Stories, Viral News, Gossips & Everything in Kannada

Shabarimale: ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗೆ ಕಹಿಸುದ್ದಿ, ಹೋಗುವ ಮುನ್ನ ಎಚ್ಚರವಾಗಿರಿ!

advertisement

ಶಬರಿಮಲೆ ದೇವಾಲಯ (Shabarimale Temple) ಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಹೀಗಾಗಿ ಅಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರನ್ನು ನಿಯಂತ್ರಿಸುವುದು ಕಷ್ಟವಾಗಿದ್ದು ನೂಕುನುಗ್ಗುಲು ಆಗುತ್ತಿದೆ. ಇನ್ನೊಂದೆಡೆ ಆಂಧ್ರ ಪ್ರದೇಶ, ತಮಿಳುನಾಡು, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಮುಂತಾದ ಸ್ಥಳಗಳ ಕೆಲವು ಭಕ್ತರು ಶಬರಿಮಲೆಯಲ್ಲಿ ಜನಸಂದಣಿ ಹೆಚ್ಚಾಗಿದೆ ಎಂದು ಅಯ್ಯಪ್ಪನ ದರ್ಶನ ಮಾಡದೇ ಹಿಂದಿರುಗಿದ್ದಾರೆ. ಅದಲ್ಲದೇ ಬಂದ ಭಕ್ತಾಧಿಗಳಿಗೆ ಮೂಲಸೌಕರ್ಯ (Basic Facilities) ಗಳ ಕೊರತೆ ಉಂಟಾಗಿದ್ದು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿದೆ.

ಬಿಜೆಪಿ ಯುವ ಮೋರ್ಚಾರಿಂದ ಶಬರಿಮಲೆಯಲ್ಲಿ ಪ್ರತಿಭಟನೆ

advertisement

ಅಯ್ಯಪ್ಪನ ದರ್ಶನ ಪಡೆಯುವ ಭಕ್ತಾಧಿಗಳಿಗೆ ಮೂಲಸೌಕರ್ಯಗಳ ಕೊರತೆ ಉಂಟಾಗಿರುವ ಕಾರಣ, ಇದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಬರಿಮಲೆಯ ಸೆಕ್ರೆಟರಿಯೇಟ್ ಮುಂದೆ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಆ ಬಳಿಕ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ (Kummanam Rajashekharan) ಮಾತನಾಡಿದ್ದು,’ ಇಂತಹ ಜನಸಂದಣಿಯನ್ನು ತಾವು ನಿರೀಕ್ಷಿಸಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಯಾತ್ರಾರ್ಥಿಗಳು ಅನ್ನ, ನೀರು ಮತ್ತು ಮೂಲಭೂತ ಅವಶ್ಯಕತೆಗಳಿಲ್ಲದೆ ಬಳಲುತ್ತಿದ್ದಾರೆ, ಶಬರಿಮಲೆಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಜಾಗವನ್ನು ಹೇಗೆ ಬಳಸಿಕೊಳ್ಳಬೇಕೆಂದು ಸರ್ಕಾರಕ್ಕೆ ತಿಳಿದಿಲ್ಲ. ನೀವು ತಿರುಪತಿ ದೇವಸ್ಥಾನವನ್ನು ನೋಡಿರುತ್ತೀರಿ, ಅಲ್ಲಿ ಎಲ್ಲವೂ ಕ್ರಮದಲ್ಲಿದ್ದು, ಅಲ್ಲಿಯ ಹಾಗೆ ಇಲ್ಲಿಯೂ ವ್ಯವಸ್ಥೆ ಮಾಡಿ’ ಎಂದಿದ್ದಾರೆ.

ಸರ್ಕಾರಕ್ಕೆ ಸೂಚನೆ ನೀಡಿದ ಕೇರಳ ಹೈಕೋರ್ಟ್

48 ದಿನಗಳ ಕಾಲ ವೃತ ಆಚರೀಸಿಕೊಂಡು ಶಬರಿಮಲೆ ಗೆ ಬರುವ ಭಕ್ತಾಧಿಗಳು ಮೂಲ ಸೌಕರ್ಯಗಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್‌ (Kerala Highcourt) ಕೇರಳ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ ಶಬರಿಮಲೆಗೆ ಭೇಟಿ ನೀಡುವವರಿಗೆ ಅಗತ್ಯ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

advertisement

Leave A Reply

Your email address will not be published.