Karnataka Times
Trending Stories, Viral News, Gossips & Everything in Kannada

HSRP: ವಾಹನಗಳಿಗೆ HSRP ಕಡ್ಡಾಯ, 2024ರ ಈ ದಿನಾಂಕದ ಒಳಗೆ ಅಳವಡಿಸಲೇ ಬೇಕು!

advertisement

ತೀರಾ ಹಳೆ ವಾಹವನವನ್ನು ಓಡಾಟಕ್ಕೆ ಬಳಸುವುದು ಅಪಾಯ ಆಗುವ ಸಾಧ್ಯತೆ ಇದೆ ಎಂದು ಮನಗಂಡ ಸರಕಾರ ಅಂತಹ ವಾಹನಗಳಲ್ಲಿ ಕೆಲವೊಂದನ್ನು ಓಡಾಟಕ್ಕೆ ನಿಷೇಧ ಹಾಗೂ ಇನ್ನು ಕೆಲವೊಂದನ್ನು ಓಡಾಟ ಮಾಡಲು ಕೂಡ ಕೆಲ ನಿರ್ದಿಷ್ಟ ಮಾನದಂಡ ತಿಳಿಸಲಾಗಿದ್ದು ಅಂತಹದರಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟರ್ ನಂಬರ್ ಪ್ಲೇಟ್ (High Security Registration Plate) ಸಿಸ್ಟಂ ಇಂದು ಕಡ್ಡಾಯ ಮಾಡಲಾಗಿದ್ದನ್ನು ನಾವು ಕಾಣಬಹುದಾಗಿದೆ.

HSRP ಕಡ್ಡಾಯ:

 

 

ಇತ್ತೀಚೆಗೆ ಈ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಕೂಡ ಚರ್ಚೆಯಾಗಿತ್ತು. ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ಲಿಖಿತ ರೂಪದ ಮೂಲಕ HSRP ಬಗ್ಗೆ ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ ಹಾಗಾಗಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಲಿಖಿತ ರೂಪದ ಮುಖೇನ ಪ್ರಶ್ನೆಗೆ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ. ಹಾಗಾಗಿ ಈ HSRP ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಏರ್ಪಡುತ್ತಿದೆ ಎಂದು ಹೇಳಬಹುದು.ಇದೀಗ ಇದು ಕಡ್ಡಾಯ ಎಂಬ ಮಾಹಿತಿ ಸಹ ಲಭಿಸಿದೆ.

advertisement

ಆದೇಶದಲ್ಲಿ ಇರುವುದೇನು?

ಕೇಂದ್ರ ಸರಕಾರದ ಆದೇಶದಂತೆ ರಾಜ್ಯದಲ್ಲಿ ಎಪ್ರಿಲ್ 1, 2019ರಬಳಿಕದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ‌. ಅದೇ ರೀತಿ ಹಳೆ ವಾಹನಗಳಿದ್ದರೆ ಅದರ ದುರಸ್ಥಿ, ಪ್ರಸ್ತುತ ಸ್ಥಿತಿ ಕಂಡು HSRP ನಂಬರ್ ಪ್ಲೇಟ್ ನೀಡಲಾಗುವುದು. ಹಾಗಾಗಿ ಹಳೆ ವಾಹನಗಳಿಗೆ ಈ HSRP ಅಳವಡಿಸಲು ಫೆಬ್ರವರಿ 17, 2024ರವರೆಗೆ ಸಮಯಾವಕಾಶ ನೀಡಲಾಗಿದೆ.

ವಿಶೇಷತೆ ಏನು?

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದರ ಬಗ್ಗೆ ಚರ್ಚೆ ಆಗುವ ಜೊತೆಗೆ ಇದರಲ್ಲಿ ಅಂತಹದ್ದೇನು ವಿಶೇಷತೆ ಇದೆ ಎಂಬ ವಿಚಾರ ಕೂಡ ಅಷ್ಟೇ ಮಟ್ಟಿಗೆ ಚರ್ಚೆ ಆಗುತ್ತಿದೆ. ಇದರಲ್ಲಿ ಟೈಮ್ ಪರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ನಂಬರ್ ಪ್ಲೇಟ್ ಅಳವಡಿಸಿದರೆ ಇದನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗಲಾರದು. ನಂಬರ್ ಪ್ಲೇಟ್ ಮೇಲೆ ಇಂಡಿಯಾ ಹಾಟ್ ಸ್ಟ್ಯಾಂಪ್ ಕೂಡ ಅಳವಡಿಸಲಾಗಿದೆ‌. ನಂಬರ್ ಪ್ಲೇಟ್ ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರ ಇರಲಿದ್ದು ಒಂದೇ ಬಣ್ಣದ ಅಕ್ಷರ ಮತ್ತು ವಿನ್ಯಾಸವನ್ನು ಒಳಗೊಂಡಿರಲಿದೆ.

ಇದರ ಬೆಲೆಯನ್ನು ಅಂದರೆ HSRP ನಂಬರ್ ಪ್ಲೇಟ್ ನ ದರವನ್ನು ಸರಕಾರ ನಿಗಧಿ ಮಾಡಲಾಗದೇ ಅದರ ಬದಲಿಗೆ ತಯಾರಿಕಾ ಕಂಪೆನಿ ನಿಗಧಿಮಾಡಲಾಗಿದೆ. ವಾಹನ ಯಾವುದು ಎಂಬ ಆಧಾರ ಮೇಲೆ ಅದರ ಬಣ್ಣ ಸಹ ನಿರ್ಧಾರವಾಗಲಿದ್ದು ಖಾಸಗಿ ವಾಹನಗಳಿಗೆ ಕಪ್ಪು ಬಣ್ಣ ಇರಲಿದೆ. ಹಾಗಾಗಿ ಹೈ ಸೆಕ್ಯುರಿಟಿ ನಂಬರ್ ಪ್ಲೆಟ್ ಅಳವಡಿಕೆ ಮಾಡಲು ನಿರ್ಧಾರ ಮಾಡಿದೆ.

advertisement

Leave A Reply

Your email address will not be published.