Karnataka Times
Trending Stories, Viral News, Gossips & Everything in Kannada

Driving Training: ಇನ್ಮುಂದೆ ವಾಹನ ಚಾಲನಾ ತರಬೇತಿ ದುಬಾರಿ; ಜನವರಿ 1ರಿಂದ ಹೊಸ ದರ ಅನ್ವಯ!

advertisement

ಕರ್ನಾಟಕ ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್ಗಳಲ್ಲಿ (Driving School) ತರಬೇತಿ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇನ್ನು ವಾಹನ ಚಾಲನಾ (Driving Training) ತರಬೇತಿ 2024ರ ಜನವರಿ 1 ರಿಂದ ದುಬಾರಿಯಾಗಲಿದ್ದು, ಕಾರು ಚಾಲನೆ ಕಲಿಯಬೇಕೆಂದರೆ ಇನ್ನು ಮುಂದೆ 7 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದಾಗಿ 10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ. ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಕಾರು ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ.

ಹಾಗಿದ್ರೆ ಇನ್ನು ಮುಂದೆ ಕಾರ್ ಕಲಿಯಲು ಪಾವತಿಸಬೇಕಾದ ಹಣವೆಷ್ಟು?

ಇನ್ನು ಮುಂದೆ ಎಲ್ಎಲ್ಗೆ (Learning License) 350 ರೂ. ಹಾಗೂ ಡಿಎಲ್ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ (Driving) ಕಲಿತು ಲೈಸೆನ್ಸ್ (License) ಪಡೆಯಲು ಒಟ್ಟು 8350 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್ಗೆ (Driving Training) 4 ಸಾವಿರ ರೂಪಾಯಿ ಶುಲ್ಕ ಇದೆ. ಎಲ್ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್ಗಳು 8 ಸಾವಿರ ರೂಪಾಯಿಗಳವರೆಗೆ ಅಭ್ಯರ್ಥಿಯಿಂದ ಪಡೆಯುತ್ತಿರುವ ಬಗ್ಗೆ ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 4 ಸಾವಿರ ರೂ. ಸ್ವೀಕರಿಸುತ್ತಿದ್ದಾರೆ. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡದಂತೆ ಸಾರಿಗೆ ಇಲಾಖೆ ಎಚ್ಚರಿಕೆ ಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಶುಲ್ಕ ಏರಿಕೆ ಯಾಕೆ?

 

 

ಡ್ರೖೆವಿಂಗ್ ಸ್ಕೂಲ್ಗಳ (Driving School) ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್ (Damage), ಇನ್ಸುರೆನ್ಸ್ (Insurance), ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಪರಿಗಣಿಸಿ ತರಬೇತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ತಯಾರಿಸಿ 2 ವರ್ಷಗಳ ಹಿಂದೆಯೇ ಇಲಾಖೆಗೆ ಸಲ್ಲಿಸಿತ್ತು. ಈಗ ವರದಿ ಅಂಗೀಕರಿಸಿ ಇದೀಗ ಶುಲ್ಕ ಜಾಸ್ತಿ ಮಾಡಲಾಗಿದೆ.

ಎಷ್ಟು ಶುಲ್ಕ ಪರಿಷ್ಕರಣೆ ಆಗಿದೆ?

advertisement

ಮೋಟಾರು ಸೈಕಲ್: 2,200 ರೂಪಾಯಿ ಇಂದ 3000 ರೂಪಾಯಿ ಆಗಿರುತ್ತದೆ.

ಆಟೋರಿಕ್ಷಾ: 3,000 ರೂಪಾಯಿ ಇಂದ 4000 ರೂಪಾಯಿ ಆಗಿರುತ್ತದೆ.

ಕಾರುಗಳು: 4,000 ರೂಪಾಯಿ ಇಂದ 7000 ರೂಪಾಯಿ ಆಗಿರುತ್ತದೆ.

ಸಾರಿಗೆ ವಾಹನ: 6,000 ರೂಪಾಯಿ ಇಂದ 9000 ರೂಪಾಯಿ ಆಗಿರುತ್ತದೆ.

ಈಗಿನ ವಾಹನ ಚಾಲನೆ ಹಾಗೂ ಸಂಚಾರ ದಟ್ಟಣೆಯ ಸವಾಲುಗಳನ್ನು ಗಮನಿಸಿದರೆ ಡ್ರೖೆವಿಂಗ್ ಟ್ರೖೆನಿಂಗ್ನ (Driving Training) ಕೌಶಲ್ಯವೂ ಜಾಸ್ತಿಯಾಗಬೇಕು. ಅದರ ಜತೆಗೆ ಚಾಲನಾ ತರಬೇತಿ ಶುಲ್ಕವೂ ಹೆಚ್ಚಾಗಬೇಕು. ಎಂದು ಎಚ್.ರಾಜಣ್ಣ, ನಿವೃತ್ತ RTO, ಮತ್ತೂ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮೊದಲು 2013ರಲ್ಲಿ ಡ್ರೖೆವಿಂಗ್ ಶಾಲೆ (Driving School) ಗಳ ತರಬೇತಿ ಶುಲ್ಕ ಹೆಚ್ಚಿಸಲಾಗಿತ್ತು ಇನ್ನು ಈ ಕುರಿತಾಗಿ ದರ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪರಿಗಣಿಸಿರಲಿಲ್ಲ. ಈಗ ಹೆಚ್ಚಿಸಿರುವ ಶುಲ್ಕ ತೀರಾ ಕಡಿಮೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಇನ್ನಷ್ಟು ದರ ಹೆಚ್ಚಿಸುವಂತೆ ಸಾರಿಗೆ ಆಯುಕ್ತರು ಹಾಗೂ ಕಾರ್ಯದರ್ಶಿಗೆ ಮತ್ತೆ ಮನವಿ ಸಲ್ಲಿಸುತ್ತೇವೆ. ಎಂದು ಕೆ.ಸಿ. ಮಹದೇವಪ್ಪ (K.C. Mahadevappa), ರಾಜ್ಯ ಡ್ರೖೆವಿಂಗ್ ಸ್ಕೂಲ್ (Driving School) ಮಾಲೀಕರ ಸಂಘದ ಮಾಜಿ ಅಧ್ಯಕ್ಷರು ತಿಳಿಸಿದ್ದಾರೆ.

ಸ್ಕೂಲ್ಗಳಿಗೆ ನಿಬಂಧನೆ ಏನು?

  • ಪಠ್ಯಸೂಚಿಯಂತೆ ಅಭ್ಯರ್ಥಿ ಪೂರ್ಣ ತರಬೇತಿ ಪಡೆದಾಗಲೇ ನಮೂನೆ 5ರಲ್ಲಿ ಪತ್ರ ನೀಡಬೇಕು.
  • ಅಭ್ಯರ್ಥಿ ವಾಹನ ಚಾಲನೆ ಮಾಡಿದ ಸಮಯವನ್ನು ನಮೂನೆ-15ರಲ್ಲಿ ನಮೂದಿಸಬೇಕು.
  • ಅಧಿಕಾರಿಗಳು ಶಾಲೆಗೆ ತಪಾಸಣೆಗೆ ಬಂದಾಗ ಎಲ್ಲ ದಾಖಲೆಗಳನ್ನು ತಪ್ಪದೇ ಒದಗಿಸಬೇಕು.
  • ಶಾಲೆಯ ಪ್ರತಿನಿಧಿ ಆರ್ಟಿಒಗೆ ಬಂದಾಗ ಸಮವಸ್ತ್ರದಲ್ಲಿರಬೇಕು. ನಾಮಫಲಕ ಧರಿಸಿರಬೇಕು.
  • ಶಾಲೆಯ ಪ್ರತಿನಿಧಿ ಅಭ್ಯರ್ಥಿಯ/ಇನ್ನಿತರರ ಪರವಾಗಿ ಮಧ್ಯವರ್ತಿಯಾಗಿ ವರ್ತಿಸುವಂತಿಲ್ಲ.
  • ನಿಬಂಧನೆ ಉಲ್ಲಂಘಿಸಿದಲ್ಲಿ ಶಾಲೆಯ ಅನುಜ್ಞಾ ಪತ್ರ ಅಮಾನತು ಅಥವಾ ರದ್ದುಗೊಳ್ಳುತ್ತದೆ ಎಂದು ಹೇಳಲಾಗಿದೆ.

advertisement

Leave A Reply

Your email address will not be published.