Karnataka Times
Trending Stories, Viral News, Gossips & Everything in Kannada

Dinesh Gundu Rao: ಈ ಅಪರಾಧ ಜಾಲ ಹುಡುಕಿ ತಿಳಿಸಿದವರಿಗೆ ಸರ್ಕಾರದಿಂದ 1 ಲಕ್ಷ ರೂ. ಬಹುಮಾನ ಘೋಷಣೆ!

advertisement

ಭ್ರೂಣ ಲಿಂಗ ಪತ್ತೆ ಹಚ್ಚುವುದು ಭಾರತದಲ್ಲಿ ಅಪರಾಧ ಕೃತ್ಯ ಎಂಬುದು ಬಹುತೇಕರಿಗೆ ತಿಳಿದ ವಿಚಾರವಾಗಿದೆ. ವಿದೇಶದಲ್ಲಿ ಮಗು ಹುಟ್ಟುವುದಕ್ಕಿಂತಲೂ ಮುಂಚಿತವಾಗಿ ಮಗು ಹೆಣ್ಣು ಅಥವಾ ಗಂಡು ಎಂಬುದನ್ನು ತಿಳಿಯಲು ಈಗಲೂ ಸಮ್ಮತಿ ಇದೆ‌. ಅದನ್ನು ವಿದೇಶದಲ್ಲಿ ಜಂಡರ್ ರಿವಿಲ್ ಡೇ (Gender Reveal Day) ಎಂಬ ಸಂಭ್ರಮದ ಕಾರ್ಯಕ್ರಮ ನಡೆಸುವ ಮೂಲಕ ಆಚರಣೆ ಕೂಡ ಮಾಡುತ್ತಾರೆ ಆದರೆ ಭಾರತದಲ್ಲಿ ಹೆಣ್ಣು ಮಗು ಪತ್ತೆ ಆದಾಗ ಭ್ರೂಣ ಹತ್ಯೆ ಮಾಡುವ ಪ್ರಮಾಣ ಅಧಿಕವಾಗಿದ್ದ ಕಾರಣಕ್ಕೆ ಇಲ್ಲಿ ನಿಷೇಧ ಹೇರಲಾಗಿದೆ.

ಬಂಪರ್ ಗಿಫ್ಟ್:

ದೇಶದಲ್ಲಿ ಭ್ರೂಣ ಲಿಂಗ ಪತ್ತೆ (Fetal Gender Detection) ಅಪರಾಧ ಕೃತ್ಯವಾಗಿದ್ದು ತಿಳಿದಿದ್ದರು ಕೂಡ ಕರ್ನಾಟಕದಲ್ಲಿ ಇತ್ತೀಚೆಗೆ ಭ್ರೂಣ ಲಿಂಗ ಪತ್ತೆ ಮಾಡುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಬಗ್ಗೆ ತನಿಖೆ ನಡೆಸಿದ್ದು ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಸಂಬಂಧಿಸಿದ ಅಪಾರಾಧ ಎಸಗಿದ್ದ ಅನೇಕರನ್ನು ವಿಚಾರಣೆ ನಡೆಸಿ ಬಂದಿಸಲಾಗಿದೆ. ಅದೇ ರೀತಿ ಇಂತಹ ಅಕ್ರಮ ತಡೆಯಲು ಸಾರ್ವಜನಿಕರಿಗೆ ಒಂದು ಸದಾವಕಾಶ ನೀಡಿ ಮಾಹಿತಿ ನೀಡಿದವರಿಗೆ ರಾಜ್ಯ ಸರಕಾರದಿಂದ ಬಂಪರ್ ಗಿಫ್ಟ್ ಸಿಗಲಿದೆ.

ಆರೋಗ್ಯ ಸಚಿವರು ಹೇಳಿದ್ದೇನು?

 

 

advertisement

ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Dinesh Gundu Rao) ಅವರು ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಮಾಹಿತಿ ನೀಡಿದ್ದವರ ವಿಚಾರವನ್ನು ಗೌಪ್ಯವಾಗಿ ಕಾಪಾಡಲಾಗುವುದು, ರಾಜ್ಯದಲ್ಲಿ ಜಿಲ್ಲಾವಾರು ಟಾಸ್ಕ್ ಫೋರ್ಸ್ ಆಫೀಸರ್ಸ್ ಅನ್ನು ಏರ್ಪಡಿಸಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ.

ವಿಶೇಷ ದಳ ರಚನೆ:

ಭ್ರೂಣ ಲಿಂಗ ಹತ್ಯೆಗೆ ಸಂಬಂಧಿಸಿದಂತೆ ಸರ್ವರ ಸಹಕಾರ ಬಹಳ ಅಗತ್ಯ. ಇದಕ್ಕಾಗಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಮತ್ತು DYSP ಕೂಡ ಸಾಕಷ್ಟು ವಿಧದಲ್ಲಿ ತನಿಖೆಗೆ ಬೇಕಾದ ಸಹಕಾರ ನೀಡಲಿದ್ದಾರೆ. ಹಾಗಾಗಿ ಟಾಸ್ಕ್ ಫೋರ್ಸಿಗೂ ವಿಶೇಷ ದಳ ನಿರ್ಮಾಣ ಆಗಲಿದೆ‌ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಮಾಹಿತಿ ಗೌಪ್ಯ:

ಇಂತಹ ಅಕ್ರಮಗಳ ಬಗ್ಗೆ ಅನುಮಾನ ಅಥವಾ ದೃಢ ಮಾಹಿತಿ ಇದ್ದ ಪ್ರದೇಶಕ್ಕೆ ವಿಶೇಷ ತನಿಖಾ ದಳ ಪರೀಕ್ಷೆ ಮಾಡಲಿದೆ‌. ಲ್ಯಾಬ್ , ಆಸ್ಪತ್ರೆ ಇತರ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುವುದು. ಪ್ರತೀ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿದ್ದ ಸ್ಥಳ ಹಾಗೂ ಪರಿಶೀಲನೆ ಆದ ಸರ್ವ ರೀತಿಯ ಬಗ್ಗೆ ವರದಿ ಸಲ್ಲಿಸಲಾಗುವುದು. ಅದೇ ರೀತಿ ಜನರ ಸಹಕಾರ ಪಡೆಯುವ ಉದ್ದೇಶಕ್ಕಾಗಿದೆ ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಅವರು ನೀಡಿದ್ದ ಮಾಹಿತಿ ಮತ್ತು ಮಾಹಿತಿ ತಿಳಿದ ವ್ಯಕ್ತಿ ಬಗ್ಗೆ ವಿಚಾರ ಗೌಪ್ಯವಾಗಿ ಉಳಿಯಲಿದೆ ಎಂದು ಮಾಧ್ಯಮದ ಮುಂದೆ ಅವರು ಈ ಬಗ್ಗೆ ಮಾತಾಡಿದ್ದಾರೆ.

advertisement

Leave A Reply

Your email address will not be published.