Karnataka Times
Trending Stories, Viral News, Gossips & Everything in Kannada

Ganga Kalyana: ಗಂಗಾ ಕಲ್ಯಾಣ ಯೋಜನೆಯಲ್ಲಿ ಉಚಿತ ಬೋರವೆಲ್ ಕೊರೆಯಲು 1.5 ಲಕ್ಷ ಸಹಾಯಧನ, ಈ ದಿನಾಂಕದವರೆಗೆ ಮಾತ್ರ ಅವಕಾಶ

advertisement

ಗ್ರಾಮೀಣ ಭಾಗದಲ್ಲಿನ ಸಣ್ಣ ಹಾಗೂ ಅತಿ ಸಣ್ಣ ರೈತರು ಉಚಿತವಾಗಿ ಕೊಳವೆ ಬಾವಿ/ ತೆರೆದ ಬಾವಿ ನಿರ್ಮಾಣಕ್ಕೆ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯಡಿ ಧನ ಸಹಾಯ ಪಡೆಯಬಹುದಾಗಿದೆ. ಹೀಗೆ ನೆರವಾಗುವ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರದ ಬಜೆಟ್ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ.

ಏನಿದು ಯೋಜನೆ?

 

 

ಬೋರ್ವೆಲ್ (Borewell) ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ (Ganga Kalyana Scheme). ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್-ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶವಾಗಿದೆ.

ಯಾವ್ಯಾವ ಜಿಲ್ಲೆ?

advertisement

ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು 2 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. 1.5 ಲಕ್ಷ ಸಹಾಯಧನವಾಗಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ.

ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಬೋರ್‌ವೆಲ್ ಕೊರೆಸುವುದು ಅಥವಾ ತೆರೆದ ಬಾವಿಗಳನ್ನು ತೋಡಿಸುವುದು. ತದನಂತರ ಅವುಗಳಿಗೆ ಪಂಪ್ ಸೆಟ್‌ಗಳು ಮತ್ತು ಇತರೆ ಸಾಮಗ್ರಿಗಳನ್ನು ಅಳವಡಿಸಲಾಗುತ್ತದೆ. ಒಂದು ವರ್ಷದಲ್ಲಿ ಎರಡು ಕಂತುಗಳಂತೆ ಒಟ್ಟು 12 ಕಂತುಗಳನ್ನು ಪಾವತಿ ಮಾಡಬೇಕಾಗುತ್ತದೆ.ಇದರ ಹೊರತಾಗಿ ಉಳಿದ ಹಣವು ಸರ್ಕಾರದಿಂದ ಫಲಾನುಭವಿಗಳಿಗೆ ನೀಡುವ ಸಹಾಯಧನ ಆಗುತ್ತದೆ.

Ganga Kalyana Scheme ಪಡೆಯಲು ಯಾರು ಅರ್ಹರು?

  • ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
  • ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
  • ಕನಿಷ್ಠ 1.20 ಎಕರೆ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
  • ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ ಇದ್ದರೆ ಸಾಕು.
  • ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು.
  • ಗ್ರಾಮೀಣ ಭಾಗದಲ್ಲಿ 81,000 ರೂಪಾಯಿ ಆದಾಯ ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ರೂಪಾಯಿ ಆದಾಯ ಮೀರಿರಬಾರದು.
  • ರಾಜ್ಯ ಕಾಯಂ ನಿವಾಸಿ ಆಗಿರಬೇಕು.

ಅಗತ್ಯ ದಾಖಲೆಗಳು ಯಾವವು?

  • ಯೋಜನೆಯ ವರದಿ (Scheme Report)
  • ಜಾತಿ ಪ್ರಮಾಣ ಪತ್ರ (Caste Certificate)
  • ಆದಾಯ ಪ್ರಮಾಣಪತ್ರ (Income Certificate)
  • ಆಧಾರ್ ಕಾರ್ಡ್ (Aadhaar Card)
  • ಬಿಪಿಎಲ್ ಕಾರ್ಡ್ (BPL Card)
  • ಇತ್ತೀಚಿನ RTC (Latest RTC)
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರಗಳು.
  • ಬ್ಯಾಂಕ್ ಪಾಸ್ ಬುಕ್ ನ ಪ್ರತಿ (Bank Pass Book Copy)
  • ಭೂ ಕಂದಾಯ ಪಾವತಿಸಿದ ರಸೀದಿ (Land Revenue Payment Receipt)
  • ಸ್ವಯಂ ಘೋಷಣಾ ಪತ್ರ (Self Declaration Letter)
  • ಜಾಮೀನುದಾರರಿಂದ ಸ್ವಯಂ ಘೋಷಣಾ ಪತ್ರ. (Self Declaration Letter from Guarantor)

advertisement

Leave A Reply

Your email address will not be published.