Karnataka Times
Trending Stories, Viral News, Gossips & Everything in Kannada

Anna Bhagya Scheme: ಇನ್ನು ಮುಂದೆ ಅನ್ನಭಾಗ್ಯ ಯೋಜನೆಯಲ್ಲಿ ರೇಷನ್ ಕೊಡಲ್ಲ, ಮಹತ್ವದ ಬದಲಾವಣೆ ಮಾಡಿದ ಸರ್ಕಾರ!

advertisement

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರವು ಪ್ರತ್ಯಕ್ಷ ವಾಗಿ ಹಾಗೂ ಪರೋಕ್ಷ ವಾಗಿ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ತಿಳಿಸಿದಂತೆ ಚುನಾವಣೆ ನಂತರ ಗೆದ್ದು ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಯನ್ನ ಜಾರಿಗೆ ತಂದಿತ್ತು. ಈ ರೀತಿ ಜಾರಿಗೆ ತಂದ ಗ್ಯಾರಂಟಿಗಳಲ್ಲಿ ಅನ್ನಭಾಗ್ಯವೂ ಒಂದಾಗಿದೆ.

Anna Bhagya Scheme ಯಲ್ಲಿ ಬದಲಾವಣೆ:

 

 

ಅನ್ನಭಾಗ್ಯ ಘೋಷಣೆ ಮಾಡುವ ಮುನ್ನ ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿ ಪೂರೈಸಲಿದೆ ಎಂದು ಕಾಂಗ್ರೆಸ್ ಭಾವಿಸಿತ್ತು. ಆದರೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸಿದ ನಂತರ ರಾಜ್ಯ ಸರ್ಕಾರವು ದೇಶದ ವಿವಿಧ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಮಾತ್ರ ಸಿಗಲಿಲ್ಲ. ನಂತರ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಯ ಬದಲು ಹಣವನ್ನ ನೀಡುವ ತೀರ್ಮಾನಕ್ಕೆ ಬಂದಿತ್ತು. ಅದರಂತೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿಯ ಬದಲು 170 ರೂಪಾಯಿ ಹಣವನ್ನು ಪಡಿತರ ಚೀಟಿದಾರರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಇದೀಗ ಈ ವಿಚಾರಕ್ಕೆ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದು, ಅಕ್ಕಿಯನ್ನೇ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

advertisement

ಹಣದ ಬದಲು ಅಕ್ಕಿಯನ್ನೇ ಕೇಳಿದ ಮಹಿಳೆಯರು:

ರಾಜ್ಯ ಸರ್ಕಾರವು ಅಕ್ಕಿಯ ಬದಲು ಹಣ ನೀಡುವುದರಿಂದ ನಮಗೆ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ. ಆ ಹಣವನ್ನ ಬೇರೆ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಆದ್ದರಿಂದ ಹಣದ ಬದಲು ಅಕ್ಕಿಯನ್ನೇ ನೀಡುವಂತೆ ಮಹಿಳೆಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಅಕ್ಕಿ ಉತ್ಪಾದನೆಯು ಕುಂಠಿತವಾಗಿದೆ. ಇದರಿಂದ ಅಕ್ಕಿಯ ದರವೂ ಏರಿಕೆಯಾಗಿದೆ. ಹಾಗಾಗಿ ಅಕ್ಕಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಸರ್ವೆ ನಡೆಸಿದ ರಾಜ್ಯ ಸರ್ಕಾರ ಹೆಚ್ಚಿನ ಮಹಿಳೆಯರು ಹಣದ ಬದಲು ಅಕ್ಕಿಯನ್ನು ನೀಡಿ ಎಂದು ಆಗ್ರಹಿಸಿದ ನಂತರ ರಾಜ್ಯ ಸರ್ಕಾರವು ಎನ್‌ಜಿಒ ಒಂದರ ಮೂಲಕ ರಾಜ್ಯದಾದ್ಯಂತ ಸರ್ವೇ ನಡೆಸಿದೆ. ಈ ಸರ್ವೆಯಲ್ಲಿ ಶೇಕಡಾ 60 ಕ್ಕೂ ಅಧಿಕ ಮಹಿಳೆಯರು ಹಣದ ಬದಲು ಅಕ್ಕಿ ನೀಡುವುದು ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹೇಳಿದ್ದೇನು?

ಸರ್ಕಾರವು ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿಯಲ್ಲಿ ನೀಡುವ ಹಣವು ಬೇರೆ ಬೇರೆ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಅಕ್ಕಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರಾಜ್ಯದ ಶೇಕಡಾ ೭೦ ಕ್ಕೂ ಅಧಿಕ ಜನರು ಅಕ್ಕಿಯನ್ನೇ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ. ಹೌದು, ಸಚಿವರು ಈ ವಿಚಾರವಾಗಿ ಪ್ರತಿಕ್ರಿಯೆಯನ್ನ ನೀಡಿದ್ದು, ಅಕ್ಕಿ ನೀಡಬೇಕು ಎನ್ನುವ ವಿಚಾರ ರಾಜ್ಯ ಸರ್ಕಾರ ಮುಂದೆ ಇದೆ. ಇದರ ಬಗ್ಗೆ ಉತ್ತರ ಪ್ರದೇಶ, ತೆಲಂಗಾಣ ಸರ್ಕಾರಗಳ ನಡುವೆ ಮಾತುಕತೆ ನಡೆಸಲಾಗಿದೆ. ದರದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಆದಷ್ಟು ಬೇಗ ಅಕ್ಕಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಮಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.

advertisement

Leave A Reply

Your email address will not be published.