Karnataka Times
Trending Stories, Viral News, Gossips & Everything in Kannada

Traffic Rules: ಹೆಲ್ಮೆಟ್ ಹಾಕಿದ್ರೂ ಭಾರಿ ಪ್ರಮಾಣದಲ್ಲಿ ಕಟ್ಟಬೇಕು ದಂಡ, ಹೊಸ ನಿಯಮ ಜಾರಿಗೆ!

advertisement

ಪ್ರತಿಯೊಬ್ಬ ವಾಹನ ಚಾಲಕ ಕೂಡ ಟ್ರಾಫಿಕ್ ನಿಯಮಗಳನ್ನು (Traffic Rules) ಪಾಲಿಸಲೇಬೇಕು. ಒಂದು ವೇಳೆ ರಸ್ತೆ ನಿಯಮ ಅಥವಾ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿದೆ ವಾಹನ ಓಡಿಸಿದರೆ ಬಾರಿ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ.

ಇನ್ನು ಬಹಳ ಮುಖ್ಯವಾಗಿರುವ ವಿಚಾರ ಅಂದ್ರೆ, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. ಆದರೆ ರೂಲ್ಸ್ ಇಷ್ಟಕ್ಕೆ ನಿಂತಿಲ್ಲ. ನೀವು ಹೆಲ್ಮೆಟ್ (Helmet) ಧರಿಸಿದರೆ ಮಾತ್ರ ಸಾಕಾಗೋದಿಲ್ಲ. ಹೆಲ್ಮೆಟ್ ಧರಿಸುವುದಕ್ಕೂ ಇರುವ ನಿಯಮಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಈ ನಿಯಮ ಪಾಲಿಸದೆ ಇದ್ದಲ್ಲಿ ದೊಡ್ಡ ಮೊತ್ತದ ಚಲನ್ ಪಾವತಿ ಮಾಡಬೇಕು.

ಹೆಲ್ಮೆಟ್ ನಿಯಮ ತಿಳಿದುಕೊಳ್ಳಿ!

 

 

advertisement

  • ನೀವು ಹೆಲ್ಮೆಟ್ ಧರಿಸಬೇಕು ಎನ್ನುವ ಕಾರಣಕ್ಕೆ ಯಾವುದಾದರೂ ಲೋಕಲ್ ಬ್ರಾಂಡ್ ಹೆಲ್ಮೆಟ್ ಅನ್ನು ಇನ್ನು ಮುಂದೆ ಧರಿಸುವಂತಿಲ್ಲ. BIS ಪ್ರಮಾಣೀಕೃತ ಹೆಲ್ಮೆಟ್ ನ್ನೇ ಧರಿಸಬೇಕು. ಯಾವುದೇ ರೀತಿ ಮುಂಭಾಗದಲ್ಲಿ ತೆರೆದುಕೊಂಡಿರುವಂತಹ ಹೆಲ್ಮೆಟ್ ಧರಿಸುವಂತಿಲ್ಲ. ಸಂಪೂರ್ಣವಾಗಿ ತಲೆ ಹಾಗೂ ಮುಖ (ಕಣ್ಣುಗಳನ್ನು ಹೊರತುಪಡಿಸಿ) ಕವರ್ ಆಗುವಂತಹ ಹೆಲ್ಮೆಟ್ ಧರಿಸಬೇಕು.
  • ಇನ್ನು ಮುರಿದು ಹೋಗಿರುವ ಅಥವಾ ಸರಿ ಇಲ್ಲದೆ ಇರುವ ಹೆಲ್ಮೆಟ್ ಧರಿಸಿದರೂ ಕೂಡ ಚಲನ್ ಪಾವತಿಸಬೇಕು.
  • BIS ಪ್ರಾಮಾಣಿಕರಿತವಲ್ಲದ ಹೆಲ್ಮೆಟ್ ಮಾರಾಟ ಮಾಡುವುದು ಕೂಡ ಶಿಕ್ಷಣ ಅಪರಾಧವಾಗಿರುತ್ತದೆ. ಇದನ್ನು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ.
  • ನಾಲ್ಕು ವರ್ಷದೊಳಗಿನ ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವಾಗಲು ಹೆಲ್ಮೆಟ್ ಹಾಗೂ ಬೆಲ್ಟ್ ಕಡ್ಡಾಯ.

ಸಂಚಾರ ನಿಯಮಗಳು ಹಾಗೂ ದಂಡ!

ಸಂಚಾರಿ ನಿಯಮ ಉಲ್ಲಂಘನೆಗೆ 100 ರೂಪಾಯಿಗಳಿಂದ ರೂ.20,000 ವರೆಗೂ ಕೂಡ ದಂಡ ವಿಧಿಸಬಹುದು. ಸಿಗ್ನಲ್ ಜಂಪ್ ಮಾಡುವುದು, One Way ಅಲ್ಲಿ ಗಾಡಿ ಓಡಿಸುವುದು, ಪರಮಾನಿಗೆ ಇಲ್ಲದೆ ವಾಹನ ಚಲಾಯಿಸುವುದು, ಅತಿ ವೇಗದಲ್ಲಿ ವಾಹನ ಚಲಾವಣೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಈ ಎಲ್ಲವೂ ದಂಡಕ್ಕೆ ಕಾರಣವಾಗುತ್ತವೆ.

ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡಿದರೆ ಸಾವಿರ ರೂಪಾಯಿ ದಂಡ ಹಾಗೂ ಮೂರು ತಿಂಗಳವರೆಗೆ ಲೈಸೆನ್ಸ್ ರದ್ದುಪಡಿಸಲಾಗುತ್ತದೆ. echallan.parivahan.gov.in ಈ ವೆಬ್ ಸೈಟ್ ನಲ್ಲಿ ಈ – ಚಲನ್ ಸ್ಥಿತಿ ಪರಿಶೀಲಿಸಿಕೊಳ್ಳಿ.

advertisement

Leave A Reply

Your email address will not be published.