Karnataka Times
Trending Stories, Viral News, Gossips & Everything in Kannada

FASTag: ನೀವು ಈ ಕೆಲಸ ಮಾಡದಿದ್ದರೆ ಜನವರಿ 31 ರ ನಂತರ ನಿಮ್ಮ ಫಾಸ್ಟ್ಯಾಗ್ ಕಾರ್ಯ ನಿರ್ವಹಿಸುವುದಿಲ್ಲ!

advertisement

ಇಂದು ವಾಹನಗಳ ದಟ್ಟಣಿ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ಟ್ರಾಫಿಕ್ ನಿಯಮವನ್ನು ಸಹ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.‌ಅದೇ ರೀತಿ ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ನಿಮಮ ಜಾರಿಗೆ ತಂದಿರುವುದು ತಿಳಿದೆ ಇದೆ. ಈ ನಿಯಮವನ್ನು ವಾಹನ ಸವಾರರು ಪಾಲಿಸಲೇ ಬೇಕಿದೆ.‌ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಈ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ (FasTag) ಇಲ್ಲದೇ ಇದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ‌.

ಜನವರಿ 31 ರ ಒಳಗೆ‌ ಪೂರ್ಣಗೊಳಿಸಿ

ಒಂದು ವೇಳೆ ನಿಮ್ಮ ಫಾಸ್ಟ್ಯಾಗ್‌ನ KYC ಅಪೂರ್ಣವಾಗಿದ್ದರೆ, ಜನವರಿ 31 ರ ನಂತರ ಅದನ್ನು ನಿಷ್ಕ್ರಿಯಗೊಳಿಸುವುದು‌ ಪಕ್ಕಾ ಎನ್ನಲಾಗಿದೆ. ಜನವರಿ 31 ರೊಳಗೆ KYC ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಹಾಗಾಗಿ ಈ ಮೊದಲು ಈ ಕೆಲಸ ಮಾಡುವುದು ಕಡ್ಡಾಯ.

advertisement

ಡಬಲ್ ಟೋಲ್ ಟ್ಯಾಕ್ಸ್ ಕೂಡ ಕಟ್ಟಬೇಕಾಗುತ್ತದೆ

ಈಗಾಗಲೇ KYC ಅನ್ನು ಪೂರ್ಣಗೊಳಿಸಲು NHAI ಎಲ್ಲಾ ಫಾಸ್ಟ್ಯಾಗ್ ದಾರರಿಗೆ ಸೂಚನೆ ನೀಡಿದೆ. ಒಂದು ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಬಳಸುವವರು ಅನೇಕರಿದ್ದು ಅಂತವರಿಗೆ ಡಬಲ್ ಟೋಲ್ ಕಟ್ಟಬೇಕಾದ ಅನಿರ್ವಾಯ ಉಂಟಾಗಬಹುದು.

ಮತ್ತಷ್ಟು ಸುಲಭ ವ್ಯವಹಾರ

ಇಂದು ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿ ಮಾಡಲು ಸಹ ಅವಕಾಶ ಇದೆ.ನಿಮ್ಮ ಮೊಬೈಲ್‌ನಲ್ಲಿ ಫಾಸ್ಟ್ಯಾಗ್ ಅಪ್ಲಿಕೇಶನ್ ಅನ್ನು ತೆರೆದು ಅದರಲ್ಲಿ ನಿಮ್ಮ ವಾಹನದ ಮಾಹಿತಿ, ದಾಖಲೆಯನ್ನು ನಮೂದಿಸಬೇಕು. ನಂತರ ಅದನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕು. ನೀವು ಇದನ್ನು ಬ್ಯಾಂಕಿನ ಶಾಖೆಯ ಮೂಲಕವು ಮಾಡಬಹುದು. ನೀವು ‌UPI ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ನಿಮ್ಮ FASTag ಹಣವನ್ನು‌ ರೀಚಾರ್ಜ್ ಮಾಡಲು ಅವಕಾಶ ಇದೆ

advertisement

Leave A Reply

Your email address will not be published.