Karnataka Times
Trending Stories, Viral News, Gossips & Everything in Kannada

Electric Bicycle: ದೇಶದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಸಿಕಲ್! ಒಂದು ಚಾರ್ಜ್ ನಲ್ಲಿ 105 ಕಿಮೀ ಪ್ರಯಾಣ!

advertisement

ನೀವು ಪರಿಸರ ಸ್ನೇಹಿ ಆಗಿರುವ, ಹಾಗೆ ನಿಮ್ಮ ಆರೋಗ್ಯಕ್ಕೂ ಹಾನಿಯಾಗದೆ ಇರುವಂತಹ ಬೈಸಿಕಲ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ಈ ಎಲೆಕ್ಟ್ರಿಕ್ ಬೈಸಿಕಲ್ (Electric Bicycle) ಖರೀದಿ ಮಾಡುವುದು ಸೂಕ್ತ. ದೇಶದ ಅತ್ಯಂತ ಅಗ್ಗದ ಉತ್ತಮವಾಗಿರುವ ಎಲೆಕ್ಟ್ರಿಕ್ ಬೈಸಿಕಲ್ (Electric Bicycle) ಬಿಡುಗಡೆಯಾಗಿದೆ.

ನೀವು ಕಡಿಮೆ ವೆಚ್ಚದಲ್ಲಿ ಪರಿಸರಕ್ಕೂ ಹಾನಿಯಾಗದಂತೆ, ನಿಮ್ಮ ಆರೋಗ್ಯಕ್ಕೂ ತೊಂದರೆ ಆಗದಂತೆ ಕೆಲವು ಉತ್ತಮ ಎಲೆಕ್ಟ್ರಿಕ್ ಬೈಸಿಕಲ್ ಖರೀದಿ ಮಾಡಬಹುದು. ದೇಶದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀವು ಕೂಡ ಸುಲಭವಾಗಿ ಇಂತಹ ಬೈಸಿಕಲ್ ಬೆಲೆಯಲ್ಲಿ ಖರೀದಿಸಬಹುದು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

Moto Volt Kivo 24:

 

 

ರೂಪಾಯಿ 29,774ಗಳಿಂದ ಈ Moto Volt Kivo 24 ಬೈಸಿಕಲ್ ಆರಂಭವಾಗುತ್ತದೆ. ಇದನ್ನು ನೀವು ರೂ. 42,159ಗಳಿಗೆ ಖರೀದಿಸಬಹುದು. ಈ ಬೈಸಿಕಲ್ ನ ಬ್ಯಾಟರಿ ಬಗ್ಗೆ ಹೇಳುವುದಾದರೆ 576wh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ ಎಲ್ಇಡಿ ಹಬ್ ಎಲೆಕ್ಟ್ರಿಕ್ ಮೋಟಾರ್ ಒದಗಿಸಲಾಗಿದ್ದು, 15 ರೂಪಾಂತರಗಳಲ್ಲಿ ಲಭ್ಯವಿದೆ. 70 ಕಿಲೋಮೀಟರ್ ವರೆಗೆ ಸುಲಭವಾಗಿ ಒಂದು ಚಾರ್ಜ್ ನಲ್ಲಿ ಓಡಿಸಬಹುದು.

Motovolt Hum:

 

 

ರೂ. 31,049 ನಿಂದ ಆರಂಭವಾಗುತ್ತದೆ. ರೂಪಾಯಿ 43,434ಗಳಿಗೆ ಖರೀದಿ ಮಾಡಬಹುದು. 0.476wh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಕೊಡಲಾಗಿದೆ. ಇದರಲ್ಲಿಯೂ 15 ರೂಪಾಂತರಗಳನ್ನು ಕೊಡಲಾಗಿದ್ದು, ಎಲ್ಇಡಿ ಹಬ್ ಒದಗಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಸುಲಭವಾಗಿ 105 km ವರೆಗೆ ಪ್ರಯಾಣಿಸಬಹುದು.

advertisement

Polarity Smart Executive:

 

 

80V, 5A ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರಲ್ಲಿ ಮೂರು ರೂಪಾಂತರಗಳನ್ನು ಕಾಣಬಹುದು. ಕೈಗೆಟುಕುವ ಬೆಲೆಯಲ್ಲಿ ಈ ಬೈಸಿಕಲ್ ಲಭ್ಯವಿದೆ. ಸಂಪೂರ್ಣ ಚಾರ್ಜ್ ಮಾಡಲು ನಾಲ್ಕು ಗಂಟೆಗಳ ಅವಧಿ ಬೇಕು. ಒಮ್ಮೆ ಚಾರ್ಜ್ ಮಾಡಿದರೆ 80 ಕಿಲೋ ಮೀಟರ್ ವರೆಗೆ ಪ್ರಯಾಣಿಸಬಹುದು. 2500W LCD ಹಬ್ ಎಲೆಕ್ಟ್ರಿಕ್ ಮೋಟರ್ ಕೊಡಲಾಗಿದೆ.

Hero Lectro Winn-X:

 

 

ಕಡಿಮೆ ಬೆಲೆಗೆ ಲಭ್ಯ ಇರುವ ಉತ್ತಮ ಶ್ರೇಣಿಯ ಬೈಸಿಕಲ್ ಇದಾಗಿದ್ದು ರೂಪಾಯಿ 44,419 ಕೆ ಖರೀದಿ ಮಾಡಬಹುದು. 36V, 14.5Ah ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಕೊಡಲಾಗಿದ್ದು, 250 ಎಲ್ಇಡಿ ಹಬ್ ಜೋಡಿಸಲಾಗಿದೆ. 7 ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಹಾಗೂ ಒಂದು ಚಾರ್ಜ್ ಗೆ 70km ವರೆಗೆ ಪ್ರಯಾಣಿಸಬಹುದು.

Nexzu Roadlark:

 

 

Nexzu Roadlark ಹಾಗೂ Nexzu Bazinga ಎರಡು ಎಲೆಕ್ಟ್ರಿಕ್ ಮೋಟಾರ್ ಬೈಸಿಕಲ್ ಅನ್ನು 47ರಿಂದ 48,000 ರೂಪಾಯಿಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು. Nexzu Roadlark 45, 999 ರೂ. ಗಳಿಗೆ ಲಭ್ಯವಿದ್ದರೆ, Nexzu Bazinga 48,999 ರೂಪಾಯಿಗಳಿಗೆ ಲಭ್ಯ. ಈ ಎಲೆಕ್ಟ್ರಿಕ್ ಬೈಸಿಕಲ್ ಗಳನ್ನು ಚಾರ್ಜ್ ಮಾಡಲು 5 ಗಂಟೆಗಳ ಅವಧಿ ಬೇಕು ಹಾಗೂ 70 ರಿಂದ 80 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು.

advertisement

Leave A Reply

Your email address will not be published.