Karnataka Times
Trending Stories, Viral News, Gossips & Everything in Kannada

Bank Loan: ನಿಮಗೆ ಸಾಲ ಕೊಡಲು ಬ್ಯಾಂಕ್ ನಿರಾಕರಿಸಿದರೆ ಏನು ಮಾಡಬೇಕು ಗೊತ್ತಾ?

advertisement

ನಾವು ಎಷ್ಟೇ ದುಡಿದರು ಕೂಡ ಕೆಲವೊಮ್ಮೆ ಸಾಲ ಪಡೆದುಕೊಳ್ಳುವಂತಹ ಅನಿವಾರ್ಯತೆ ಬರುತ್ತದೆ. ಅದು ಸಣ್ಣ ಮೊತ್ತದ ಹಣ ಇರಬಹುದು ಅಥವಾ ದೊಡ್ಡ ಮೊತ್ತದ ಹಣವಿರಬಹುದು, ನಾವು ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುತ್ತೇವೆ. ಆದರೆ ಎಷ್ಟೋ ಬಾರಿ ಸಾಲದ ಅರ್ಜಿಯನ್ನು ಬ್ಯಾಂಕುಗಳು ತಿರಸ್ಕರಿಸುತ್ತವೆ. ಹೀಗೆ ಅರ್ಜಿ ಸಲ್ಲಿಸಿದ ನಂತರ ಸಾಲ ಕೊಡದೆ, ಬ್ಯಾಂಕುಗಳು ಅರ್ಜಿಯನ್ನ ತಿರಸ್ಕರಿಸಲು ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಬ್ಯಾಂಕ್ ಸಾಲ (Bank Loan)ದ ಅರ್ಜಿಯನ್ನು ತಿರಸ್ಕರಿಸಲು ಕಾರಣಗಳೇನು?

ಕೆಲವು ಸಣ್ಣಪುಟ್ಟ ತಪ್ಪುಗಳಿಂದಾಗಿ ಬ್ಯಾಂಕ್ ನಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸುವಂತೆ ಆಗಬಹುದು. ಹಾಗಾಗಿ ಮೊದಲು ಈ ಕಾರಣಗಳನ್ನು ತಿಳಿದುಕೊಂಡು ನಂತರ ಮುಂದಿನ ಪ್ರಕ್ರಿಯೆ ಮುಂದುವರಿಸಿ.

ಕ್ರೆಡಿಟ್ ಸ್ಕೋರ್!

ಇಂದು ಅದೆಷ್ಟೋ ಬ್ಯಾಂಕುಗಳು ಯಾವುದೇ ಅಡಮಾನವನ್ನು ಇಟ್ಟುಕೊಳ್ಳದೆ ಸಾಲ ಸೌಲಭ್ಯ ನೀಡುತ್ತವೆ. ಆದರೆ ಈ ರೀತಿ ಸಾಲ ಪಡೆದುಕೊಳ್ಳುವುದಕ್ಕೆ ವ್ಯಕ್ತಿಯು ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿ ಸಾಲವನ್ನು ಮರುಪಾವತಿ ಮಾಡಲು ಸಾಮರ್ಥ್ಯ ಹೊಂದಿದ್ದಾನೆಯೇ ಇಲ್ಲವೇ ಎನ್ನುವುದನ್ನು ಆತನ ಕ್ರೆಡಿಟ್ ಸ್ಕೋರ್ (Credit Score) ಮೂಲಕವೇ ಬ್ಯಾಂಕ್ ನಿರ್ಧರಿಸುತ್ತದೆ. ಹಾಗಾಗಿ ಕನಿಷ್ಠ 750 ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

ಇದರ ಜೊತೆಗೆ ಕ್ರೆಡಿಟ್ ಶ್ರೇಯಾಂಕವು ಕೂಡ ಮುಖ್ಯವಾಗಿರುತ್ತದೆ. 1ರಿಂದ 10ರ ನಡುವಿನ ಸ್ಕೋರ್ ಇದಾಗಿದ್ದು, ಇದನ್ನು ಕಂಪನಿ ಕ್ರೆಡಿಟ್ ರೆಕಾರ್ಡ್ ಎನ್ನಲಾಗುತ್ತದೆ.

advertisement

ಕ್ರೆಡಿಟ್ ಶ್ರೇಯಾಂಕದ ಏಜೆನ್ಸಿ ಗಳು ನಿಮಗೆ ಶ್ರೇಯಾಂಕದ ಬಗ್ಗೆ ಮಾಹಿತಿಯನ್ನು ಕೊಡುತ್ತವೆ. ಒಂದು ವೇಳೆ ಲೆಕ್ಕಾಚಾರದಲ್ಲಿ ತಪ್ಪಾಗಿರಬಹುದು. ಹಾಗೆ ನಿಮಗೆ ಅನ್ನಿಸಿದರೆ ತಕ್ಷಣ ನಿಮ್ಮ ಕ್ರೆಡಿಟ್ ಶ್ರೇಯಾಂಕದ ಸ್ಕೋರ್ ತಿಳಿದುಕೊಳ್ಳಿ.

ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ!

ಇನ್ನು ನೀವು ಒಂದು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಅದು ತಿರಸ್ಕಾರಗೊಂಡರೆ ಬೇರೆ ಬ್ಯಾಂಕ್ ನಲ್ಲಿ ಮತ್ತೆ ಪ್ರಯತ್ನಿಸಬಹುದು. ಗ್ರಾಮೀಣ ಬ್ಯಾಂಕ್ ನಲ್ಲಿ ಹಾಗೂ ಪ್ರಾದೇಶಿಕ ಬ್ಯಾಂಕುಗಳಲ್ಲಿ ಶರತ್ತುಗಳು ಕಡಿಮೆ ಇರುವುದರಿಂದ ಸುಲಭ ಸಾಲ ಪಡೆಯಬಹುದು.

ಡೌನ್ ಪೇಮೆಂಟ್ ಮೊತ್ತ!

ನೀವು ಗೃಹ ಸಾಲ (Home Loan) ಅಥವಾ ಬೇರೆ ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವಾಗ, ಡೌನ್ ಪೇಮೆಂಟ್ ಮೊತ್ತವನ್ನು ಜಾಸ್ತಿ ಮಾಡಿದರೆ ಸಾಲ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹಳೆಯ ಸಾಲ ಮರುಪಾವತಿ!

ನಿಮ್ಮ ಹಳೆಯ ಸಾಲದ ಮೊತ್ತ ಅಧಿಕವಾಗಿದ್ದರೆ ಹೊಸ ಸಾಲ ಪಡೆದುಕೊಳ್ಳಲು ಕಷ್ಟವಾಗುತ್ತದೆ. ಯಾಕೆಂದರೆ ನಿಮ್ಮ ಆದಾಯದ 30% ನಷ್ಟು ಅನುಪಾತಕ್ಕೆ ಸಾಲವನ್ನು ಹೊಂದಿಸಲಾಗುತ್ತಿದೆ. 40,% ಗಿಂತ ಹೆಚ್ಚು DTI ಅಪಾಯದ ವರ್ಗದಲ್ಲಿ ಬರುತ್ತದೆ. ನಿಮ್ಮ ಹಳೆಯ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಪಾವತಿ ಗಮನದಲ್ಲಿ ಇಟ್ಟುಕೊಂಡು ಡಿಟಿಐ ಲೆಕ್ಕಾಚಾರ ಮಾಡಲಾಗುತ್ತದೆ.

ಈ ಎಲ್ಲಾ ಕಾರಣಗಳನ್ನು ಹೊರತುಪಡಿಸಿ ಸಾಲ ತೆಗೆದುಕೊಳ್ಳುವಾಗ ಸರಿಯಾದ ದಾಖಲೆ ನೀಡುವುದು ಕೂಡ ಅಷ್ಟೇ ಮುಖ್ಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿಳಾಸದ ಪ್ರೂಫ್ ಎಲ್ಲವೂ ಸರಿಯಾಗಿ ಇದ್ದರೆ ಸಾಲವನ್ನು ತ್ವರಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ. ಇದರ ಜೊತೆಗೆ ನೀವು ಬ್ಯಾಂಕ್ ನವರ ಬಳಿ ಕುಳಿತು ಮಾತನಾಡಿ ಸಾಲದ ಅಗತ್ಯತೆಗಳನ್ನು ತಿಳಿಸಿ ಅರ್ಜಿ ಸ್ವೀಕಾರಗೊಳ್ಳುವಂತೆ ಮಾಡಿಕೊಳ್ಳಬೇಕು.

advertisement

Leave A Reply

Your email address will not be published.