Karnataka Times
Trending Stories, Viral News, Gossips & Everything in Kannada

Dowry: ಮದುವೆಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವವರು ಎಚ್ಚರ, ಹೀಗೆ ಮಾಡಿದ್ರೆ ಜೈಲು ಊಟ ಗ್ಯಾರಂಟಿ!

advertisement

ಭಾರತ ದೇಶದಲ್ಲಿ ವರದಕ್ಷಿಣೆ ಪದ್ಧತಿ ನಿರ್ಮೂಲನೆಗೆ ಪ್ರಯತ್ನಿಸಲಾಗುತ್ತಿದೆಯಾದರೂ ಸಂಪೂರ್ಣವಾಗಿ ಇದನ್ನ ಹೋಗಲಾಡಿಸಲು ಸಾಧ್ಯವಾಗಿಲ್ಲ. ನಮ್ಮ ದೇಶಕ್ಕೆ ಅಂಟಿರುವ ಶಾಪದಂತೆ ವರದಕ್ಷಿಣೆ ಸಮಸ್ಯೆ ಇಂದಿಗೂ ಉಳಿದಿದೆ. ವರದಕ್ಷಿಣೆಯ ಕಾರಣಕ್ಕೆ ಪ್ರತಿದಿನ ಕೊಲೆ ಸುಲಿಗೆ ಮುಂತಾದ ಅಮಾನವೀಯ ಕೃತ್ಯಗಳು ನಡೆಯುತ್ತಲೇ ಇವೆ.

ವರದಕ್ಷಿಣೆ (Dowry) ತೆಗೆದುಕೊಳ್ಳಬಾರದು ಇದು ಕಾನೂನುಬಾಹಿರ ಚಟುವಟಿಕೆ ಎಂದು ಈಗಾಗಲೇ ಸಾಕಷ್ಟು ಬಾರಿ ಕೆಲವು ಜಾಗೃತಿ ಅಭಿಯಾನಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ಇದೆ.

ಕೌಟುಂಬಿಕ ಹಿಂಸಾಚಾರದ ಕಾಯ್ದೆ ಅಥವಾ ಕೌಟುಂಬಿಕ ದೌರ್ಜನ್ಯ (Domestic Violence) ಕಾಯ್ದೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಯಾವುದೇ ವ್ಯಕ್ತಿ ಮದುವೆ ಆಗುವ ಹುಡುಗಿಯ ಕುಟುಂಬದವರ ಜೊತೆಗೆ ವರದಕ್ಷಿಣೆ ವ್ಯವಹಾರ ಮಾತನಾಡಿದರೆ ಅಂತವರನ್ನು ತಕ್ಷಣವೇ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇಷ್ಟಾಗಿಯೂ ನಮ್ಮ ದೇಶದಲ್ಲಿ ವರದಕ್ಷಿಣೆ ಪದ್ಧತಿ (Dowry System) ಸಂಪೂರ್ಣವಾಗಿ ನಿಷೇಧಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ವರದಕ್ಷಿಣೆ ಎನ್ನುವುದನ್ನು ಗೌರವಪೂರ್ವಕವಾಗಿ ನೀಡುವ ಗಿಫ್ಟ್ ಎನ್ನುವ ರೀತಿಯಲ್ಲಿ ಕೂಡ ಜನ ಯೋಚಿಸುತ್ತಾರೆ. ಹೀಗಾಗಿ ವರದಕ್ಷಿಣೆ ಎಲ್ಲರ ದೃಷ್ಟಿಯಲ್ಲಿಯೂ ಕಾನೂನುಬಾಹಿರ ಚಟುವಟಿಕೆಯಲ್ಲ.

Dowry ಕಾನೂನಿನ ಬಗ್ಗೆ ತಿಳಿದುಕೊಳ್ಳಿ:

 

advertisement

 

ವರದಕ್ಷಿಣೆ (Dowry) ಕಾರಣಗಳಿಗೆ ಇಂದು ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗಿದೆ. ಮಗಳನ್ನು ಮದುವೆ ಮಾಡಿ ಕೊಟ್ಟು ಗಂಡನ ಮನೆಯಲ್ಲಿ ಸುಖವಾಗಿ ಬಾಳುತ್ತಾಳೆ ಎಂದು ಭಾವಿಸಿದ ತಂದೆ ತಾಯಿ ಮಗಳ ಸಾವನ್ನು ಇದೆ ವರದಕ್ಷಿಣೆ ಕಾರಣಕ್ಕೆ ಎದುರಿಸಿದ್ದು ಇದೆ. ಇದನ್ನು ತಡೆಗಟ್ಟಲು ವರದಕ್ಷಿಣೆಯನ್ನು ಕೊನೆಗೊಳಿಸಲು ವರದಕ್ಷಿಣೆ ನಿಷೇಧ ಕಾಯ್ದೆ 1961 ಜಾರಿಗೆ ತರಲಾಯಿತು. ಈ ಕಾಯ್ದೆಯನ್ನು ಎರಡು ವಿಭಾಗ ಮಾಡಲಾಗಿದೆ ಸೆಕ್ಷನ್ 4, ಸೆಕ್ಷನ್ 5 ಈ ಎರಡು ಸೆಕ್ಷನ್ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಹಾಗೂ ಅಪರಾಧ ಎಸಗಿದವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 15,000 ದಂಡ ವಿಧಿಸಲಾಗುತ್ತದೆ. ಅದೇ ರೀತಿ ಸೆಕ್ಷನ್ 4ರ ಪ್ರಕಾರ ವರದಕ್ಷಿಣೆ ಬೇಕು ಎಂದು ಬೇಡಿಕೆ ಇಟ್ಟರೂ ಕೂಡ ಆರರಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕೌಟುಂಬಿಕ ಹಿಂಸೆ ಕಾಯ್ದೆ:

ಕೌಟುಂಬಿಕ ಹಿಂಸೆ ಕಾಯ್ದೆ ಅಥವಾ ಕೌಟುಂಬಿಕ ದೌರ್ಜನ್ಯ ಕಾಯ್ದೆ ಕೂಡ ವರದಕ್ಷಿಣೆಯನ್ನು ತಡೆಗಟ್ಟುವ ಸಲುವಾಗಿ ಇರುವ ಕಾಯ್ದೆಗಳಾಗಿವೆ. ಮಹಿಳೆಯರು ವರದಕ್ಷಿಣೆಯ ವಿರುದ್ಧ ಈ ಕಾಯ್ದೆಯ ಅಡಿಯಲ್ಲಿ ಧ್ವನಿ ಎತ್ತಲು ಅವಕಾಶ ಮಾಡಿಕೊಡಲಾಗಿದೆ. ಅಂದ್ರೆ ಯಾವುದೇ ರೀತಿಯ ವರದಕ್ಷಿಣೆ ಕಿರುಕುಳ ಅನುಭವಿಸಿದರೆ ಮಹಿಳೆ ದೂರು ನೀಡಬಹುದು. ಮೊದಲಿಗಿಂತಲೂ ವರದಕ್ಷಿಣೆ ಹಿಂಸಾಚಾರ ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿ ಇದ್ದರೂ ಕೂಡ ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ 2020ರಲ್ಲಿ ವರದಕ್ಷಿಣೆ ಸಲುವಾಗಿ 7 ಸಾವಿರ ಕೊಲೆಗಳು ನಡೆದಿವೆ. ಅಂದ್ರೆ ಪ್ರತಿದಿನ 19 ಮಹಿಳೆಯರನ್ನ ವರದಕ್ಷಿಣೆ ಸಲುವಾಗಿ ಹತ್ಯೆ ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ತಾಳಲಾರದೆ 1,700ಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವರದಕ್ಷಿಣೆ ಕಾನೂನುಬಾಹಿರ ಚಟುವಟಿಕೆ ಮಾತ್ರವಲ್ಲ ಹೆಣ್ಣು ಹೆತ್ತವರ ಕಣ್ಣೀರಿಗೆ ಕಾರಣವೂ ಹೌದು. ವರದಕ್ಷಿಣೆ ವಿಚಾರದಲ್ಲಿ ಕಾನೂನುಗಳು ಏನೇ ಇದ್ದರೂ ಕೂಡ ನಾವು ಸ್ವಲ್ಪ ಸ್ವಂತಿಕೆಯಿಂದ ವಿಚಾರ ಮಾಡಿ ವರದಕ್ಷಿಣೆ ತೆಗೆದುಕೊಳ್ಳುವುದು ಎಷ್ಟು ತಪ್ಪು ಎಂಬುದನ್ನು ಅರಿತುಕೊಳ್ಳಬೇಕು. ಹೀಗೆ ಪ್ರತಿಯೊಬ್ಬ ವ್ಯಕ್ತಿ ವರದಕ್ಷಿಣೆ ತಪ್ಪು ಎಂದು ತನ್ನ ಮನಸ್ಸಿನಲ್ಲಿಯೇ ಭಾವಿಸಿಕೊಂಡರೆ ವರದಕ್ಷಿಣೆ ಎನ್ನುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ.

advertisement

Leave A Reply

Your email address will not be published.