Karnataka Times
Trending Stories, Viral News, Gossips & Everything in Kannada

Apaar Card: ಶಾಲಾ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ವಿದ್ಯಾರ್ಥಿಗಳಿಗೆ ಇನ್ಮುಂದೆ ಈ ಕಾರ್ಡ್ ಕಡ್ಡಾಯ!

advertisement

ಇಂದು ಪ್ರತಿಯೊಂದು ವ್ಯಕ್ತಿ ಗೆ ಆಧಾರ್ ಕಾರ್ಡ್ ಅನ್ನೋದು ಬಹಳ ಮುಖ್ಯ.ಈ ಕಾರ್ಡ್ ಇದ್ದರೆ ಮಾತ್ರ ಸರ್ಕಾರದ ಯಾವುದೇ ಸೌಲಭ್ಯ ಗಳನ್ನು ಪಡೆಯಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳಿಗೂ ಇಂದು ಅಧಾರ್ ಕಾರ್ಡ್ ಬಹು ಮುಖ್ಯ. ಇನ್ಮುಂದೆ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಜೊತೆ ಇನ್ನೊಂದು ಹೊಸ ಕಾರ್ಡ್ ಅನ್ನು ಪರಿಚಯಿಸಿದೆ‌. ಹೌದು ವಿದ್ಯಾರ್ಥಿಗಳಿಗೆ ಅಪಾರ್ ಕಾರ್ಡ್ (Apaar Card) ಎಂಬ ಗುರುತಿನ ಚೀಟಿ ಜಾರಿಗೆ ತರುತ್ತಿದ್ದು ಈ ಕಾರ್ಡ್ ನ ಮುಖ್ಯ ಉದ್ದೇಶ ಒಂದು ದೇಶ, ಒಂದು ವಿದ್ಯಾರ್ಥಿ ಪರಿಕಲ್ಪನೆಯಾಗಿದೆ.

ಉಪಯೋಗ ಏನು?

ಈ ಕಾರ್ಡ್ ವಿದ್ಯಾರ್ಥಿಗಳಿಗೆ ವಿವಿಧ ಕಡೆಗಳಲ್ಲಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಾಗ ಉಪಯುಕ್ತವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಇದು ಗುರುತಿನ ಚೀಟಿಯಾಗಿರಲಿದ್ದು ವಿದ್ಯಾರ್ಥಿಯ ಸಂಪೂರ್ಣ ಮಾಹಿತಿಯನ್ನ ಡಿಜಿಟಲ್ ರೂಪದಲ್ಲಿ ಈ ಅಪಾರ್ ಕಾರ್ಡ್ ನಲ್ಲಿ ದಾಖಲಾಗಿರುತ್ತದೆ‌.ಈ ಕಾರ್ಡ್ ನಲ್ಲಿ ವಿದ್ಯಾರ್ಥಿಗಳ ಪೂರ್ಣ ಹೆಸರು, ಪ್ರಸ್ತುತ ಇರುವ ವಿಳಾಸ, ಆಧಾರ್ ಕಾರ್ಡ್ ವಿವರ ಇತ್ಯಾದಿ ಮಾಹಿತಿಯನ್ನು ಈ ಕಾರ್ಡ್ ಹೊಂದಿರುತ್ತದೆ. 12 ಅಂಕಿಗಳ ಕಾರ್ಡ್ ಸಂಖ್ಯೆ ಇದರಲ್ಲಿದ್ದು ಕ್ಯೂಆರ್ ಕೋಡ್ ಇರುತ್ತದೆ.

advertisement

ಶೈಕ್ಷಣಿಕ ಮಾಹಿತಿ

ಈ ID ಕಾರ್ಡ್ ನ ಮೂಲಕ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಹಂತಗಳ ವಿವರ, ವಿದ್ಯಾರ್ಥಿಯ ಶೈಕ್ಷಣಿಕ ಹಂತ ಹೇಗಿದೆ ಎಂಬುದನ್ನು ಸೂಕ್ಷ್ಮವಾಗಿ ಮಾಹಿತಿ ಮಾಡಲು ಬಳಸಲಾಗುತ್ತದೆ. ಕೇಂದ್ರ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರಕಾರದ ಸಹಯೋಗದ ಮುಲಕ ಈ ಕಾರ್ಡ್ ಜಾರಿಗೆ ತರಲಾಗಿದ್ದು ವಿದ್ಯಾರ್ಥಿಗಳಿಗೆ ಬಹು ಸಹಾಯ ವಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು, ಪಠ್ಯೇತರ ಚಟುವಟಿಕೆಗಳು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವೂ ಇರಲಿದ್ದು ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಇದು ಅನುಕೂಲವಾಗಲಿದೆ.

ಕಾರ್ಡ್ ಪಡೆಯಿರಿ

ಈ ಕಾರ್ಡ್ ಪಡೆಯಲು ಅಪ್ಲಿಕೇಶನ್ ಫಿಲ್ ಮಾಡಿ ಅದರಲ್ಲಿ ನಿಮ್ಮ ಹೆಸರು , ವಿಳಾಸ ಹಾಗೂ ಆಧಾರ್ ಕಾರ್ಡ್ ಮಾಹಿತಿ ಸಲ್ಲಿಸಿ. ಅದೇ ರೀತಿ ವರ್ಗ, ಶಾಲೆ ಇತರ ಅಗತ್ಯ ಮಾಹಿತಿ ನೀಡಿ, ಮನೆಯ ಮೊಬೈಲ್ ನಂ ಮಾಹಿತಿ ನೀಡಿ, ನಂತರ 12ಅಂಕಿಯ ಅಪರ್ ಕಾರ್ಡ್ ಅನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.