Karnataka Times
Trending Stories, Viral News, Gossips & Everything in Kannada

E-Shram Card: ಇ – ಶ್ರಮ್ ಕಾರ್ಡ್ ಇದ್ರೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ಲಾಭ, ಹೀಗೆ ಪಡೆಯಿರಿ.

advertisement

ಭಾರತದಲ್ಲಿ ಸ್ವ-ಉದ್ಯೋಗಿಗಳು ಮತ್ತು ಅಸಂಘಟಿತ ಕಾರ್ಮಿಕರ ದೊಡ್ಡ ಜನಸಂಖ್ಯೆ ಇದೆ. ಇವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಹಾಗೂ ಇವರ ಬದುಕನ್ನು ಕೂಡ ಸುರಕ್ಷಿತಗೊಳಿಸಬೇಕು ಎನ್ನುವ ಆಶಯದೊಂದಿಗೆ ಆಗಸ್ಟ್ 2021 ರಲ್ಲಿ ಇ – ಶ್ರಮ್ ಪೋರ್ಟಲ್ ಅನ್ನು ಆರಂಭಿಸಲಾಯಿತು. ಈ ಪೋರ್ಟಲ್ ನಲ್ಲಿ ಭಾರತದಾತ್ಯಂತ ಇರುವ ಅಸಂಘಟಿತ ಕ್ಷೇತ್ರದ ಎಲ್ಲಾ ಕಾರ್ಮಿಕರು ಕೂಡ ರಿಜಿಸ್ಟರ್ ಆಗಬಹುದು. ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಪ್ಲಾಟ್ಫಾರ್ಮ್ ಕಾರ್ಮಿಕರು, ಬೀದಿಬದಿಯಲ್ಲಿ ತರಕಾರಿ ಮಾರುವವರು, ಹಣ್ಣು ಹಂಪಲುಗಳನ್ನು ಮಾರುವವರು ಕೂಡ ಈ ಪೋರ್ಟಲ್ ನಲ್ಲಿ ರಿಜಿಸ್ಟರ್ ಆಗಬಹುದು. ಈ ಪೋರ್ಟಲ್ ಆರಂಭವಾದ ಕೂಡಲೇ 28,60,20,000 ಇ – ಶ್ರಮ್ ಕಾರ್ಡ್ (E-Shram Card)  ಗಳು ರಿಜಿಸ್ಟರ್ ಆಗಿದ್ದವು. ಈ ಸಂಖ್ಯೆಯನ್ನು ನೋಡಿದಾಗಲೇ ಭಾರತದಲ್ಲಿ ಅಸಂಘಟಿತ ಕಾರ್ಮಿಕರ ಎಷ್ಟು ದೊಡ್ಡ ಜನಸಂಖ್ಯೆ ಇದೆ ಎಂದು ನಮಗೆ ತಿಳಿಯುತ್ತದೆ.

ಇ ಶ್ರಮ್ ರೆಜಿಸ್ಟರ್ ಆದವರಿಗೆ ಸಿಗಲಿರುವ ಲಾಭಗಳು

ಇದರಲ್ಲಿ ರಿಜಿಸ್ಟರ್ ಆದ ಕಾರ್ಮಿಕರ ಸಾಮಾಜಿಕ ಭದ್ರತೆ ಉತ್ತಮಗೊಳ್ಳುತ್ತದೆ. ಇದರ ಜೊತೆಗೆ ಕಾರ್ಮಿಕ ಇಲಾಖೆ ಮತ್ತು ಇತರ ಸಚಿವಾಲಯಗಳ ಸ್ಕೀಮ್ ಗಳು ಅಥವಾ ಉಪಯೋಗಗಳು ಇವರಿಗೆ ಆದ್ಯತೆಯ ಮೇರೆಗೆ ಸಿಗಲಿವೆ. ಈ ಅವಕಾಶಗಳು ಇಂತಹ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸಿಕ್ಕಾಗ ಅವರ ಬದುಕು ಸುರಕ್ಷಿತಗೊಳ್ಳುತ್ತದೆ. ಇದರ ಜೊತೆಗೆ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ – ಧನ್ ಯೋಜನೆ ಮತ್ತು ನ್ಯಾಷನಲ್ ಪೆನ್ಷನ್ ಸ್ಕೀಮ್ ಫಾರ್ ಟ್ರೇಡರ್ಸ್ (National Pension Scheme for Traders) ಅಡಿಯಲ್ಲಿ ಬರುವ ಪೆನ್ಷನ್ ಸ್ಕೀಮ್ ಗಳು ಕೂಡ ಸಿಗಲಿದೆ.

2 ಲಕ್ಷ ರೂಪಾಯಿಗಳ ವಿಮೆ

advertisement

ಇಲ್ಲಿ ನೋಂದಾವಣೆ ಮಾಡಿದ ಕಾರ್ಮಿಕರಿಗೆ ಮುಖ್ಯವಾಗಿ ದೊರಕುವ ಇನ್ನೊಂದು ಪ್ರಯೋಜನ ಎಂದರೆ ಎರಡು ಲಕ್ಷದ ತನಕದ ಆಕ್ಸಿಡೆಂಟಲ್ ಇನ್ಸೂರೆನ್ಸ್. ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನಾ ಅಡಿಯಲ್ಲಿ ಬರುವ ಇನ್ಶುರೆನ್ಸ್ ಸ್ಕೀಮ್ ಅನ್ನು ಇ – ಶ್ರಮ್ ಅಡಿಯಲ್ಲಿ ನೋಂದಾವಣೆ ಮಾಡಿದ ಎಲ್ಲರಿಗೂ ಸಿಗಲಿದೆ. ಕೆಲಸದ ಸಮಯದಲ್ಲಿ ಯಾವುದೇ ಅವಘಡಕ್ಕೆ ಒಳಗಾಗಿ ಕಾರ್ಮಿಕರು ಜೀವ ಕಳೆದುಕೊಂಡಾಗ ಅವರ ಕುಟುಂಬದವರಿಗೆ ನೆರವಾಗಲಿ ಎಂದು ಈ ಬೀಮಾ ಯೋಜನೆಯನ್ನು ಆರಂಭಿಸಲಾಗಿದೆ.

ಯಾರೆಲ್ಲಾ ರೆಜಿಸ್ಟರ್ ಆಗಬಹುದು ?

ಸ್ವಯಂ ಉದ್ಯೋಗಿಗಳು, ಅಸಂಘಟಿತ ಕಾರ್ಮಿಕರ ಜೊತೆಗೆ ಇ ಪಿ ಎಫ್ ಓ (EPFO) ಮತ್ತು ಇ ಎಸ್ ಐ ಸಿ (ESIC) ಇಲ್ಲದ ಸಂಘಟಿತ ಕಾರ್ಮಿಕರು ಕೂಡ ಇಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು. ನೊಂದಾವಣೆ ಮಾಡುವ ವಯೋಮಿತಿ 15 ವರ್ಷದಿಂದ 59 ವರ್ಷಗಳಾಗಿವೆ.

ಎಲ್ಲಿ ರೆಜಿಸ್ಟರ್ ಮಾಡಬೇಕು ?

ಸರ್ಕಾರದ ಇ ಶ್ರಮ್ ಪೋರ್ಟಲ್ ಗೆ ಭೇಟಿ ನೀಡಿ, ರಿಜಿಸ್ಟರ್ ಇ ಶ್ರಮ್ ಆಯ್ಕೆಯ ಮೂಲಕ ಅಲ್ಲಿ ಕೇಳುವ ದಾಖಲೆಗಳನ್ನು ನೀಡಿದಾಗ ನಮ್ಮ ರಿಜಿಸ್ಟರ್ ನಂಬರ್ ಗೆ ಓಟಿಪಿ ಬರುತ್ತದೆ ಈ ಓಟಿಪಿಯನ್ನು ನೋಂದಾವಣೆ ಮಾಡಿದಾಗ ನಿಮ್ಮ ರಿಜಿಸ್ಟ್ರೇಷನ್ ಸಂಪೂರ್ಣ ಆಗುತ್ತದೆ ಮತ್ತು 12 ಡಿಜಿಟ್ ಗಳ ಯು ಎ ಎನ್ (UIN) ಸಂಖ್ಯೆ ಸಿಗಲಿದೆ.

advertisement

Leave A Reply

Your email address will not be published.