Karnataka Times
Trending Stories, Viral News, Gossips & Everything in Kannada

PM Kisan Maandhan: ರೈತರಿಗೆ ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು 3,000ರೂ. ಸಿಗಲಿದೆ, ನೋಂದಣಿ ಮಾಡುವ ಸುಲಭ ವಿಧಾನ ಇಲ್ಲಿದೆ.

advertisement

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆ  ಸೇರಿದಂತೆ ಸರ್ಕಾರ ರೈತರಿಗೆಂದು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಿಎಂ ಕಿಸಾನ್ ಮನ್ ಧನ್ (PM Kisan Maandhan)ಯೋಜನೆಯೂ ಒಂದು. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿಎಂ ಕಿಸಾನ್ ಮಾನಧನ್ ಯೋಜನೆ ಎರಡೂ ಕೂಡ ಭಿನ್ನವಾಗಿದ್ದರೂ 2019ರಲ್ಲೇ ಎರಡೂ ಆರಂಭವಾಗಿರುವುದು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ವ್ಯವಸಾಯಕ್ಕೆಂದು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ಆದರೆ, ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ ಸಣ್ಣ ರೈತರಿಗೆ ಮಾಸಿಕ 3,000 ರೂ ಪಿಂಚಣಿ ಕಲ್ಪಿಸಲಾಗುತ್ತದೆ ಈಗಾಗಲೇ 19 ಲಕ್ಷಕ್ಕೂ ಹೆಚ್ಚು ರೈತರು ನೊಂದಣಿ ಮಾಡ್ತಿದ್ದಾರೆ.

ಏನಿದು ಪಿಎಂ ಕಿಸಾನ್ ಮಾನ್‌ಧನ್ ಯೋಜನೆ?

ದೇಶದ ಸಣ್ಣ ಮತ್ತು ಕಡಿಮೆ ವ್ಯವಸಾಯ ಹೊಂದಿರುವ ರೈತರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಮಾನ್‌ ಧನ್‌ ಯೋಜನೆ ಆರಂಭಿಸಲಾಗಿದೆ. ಇದರ ಅಡಿಯಲ್ಲಿ 60 ವರ್ಷದ ನಂತರ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿಯಾಗಿ 3,000 ರೂ.ಯಂತೆ ರೈತರಿಗೆ ವಾರ್ಷಿಕ 36 ಸಾವಿರ ರೂ. ಪಡೆಯಬಹುದು. 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ಪಿಂಚಣಿಗಾಗಿ ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

ಎಷ್ಟು ಪ್ರೀಮಿಯಂ ಪಾವತಿಸಬೇಕಾಗುತ್ತದೆ?

advertisement

ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ ಪಿಎಂ ಕಿಸಾನ್ ಮಾನ್‌ಧನ ಯೋಜನೆಯಲ್ಲಿ ನಿಮ್ಮ ನೋಂದಣಿ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಈ ಯೋಜನೆಯ ಪ್ರೀಮಿಯಂ ಸಮ್ಮಾನ್ ನಿಧಿ ಅಡಿಯಲ್ಲಿ ಪಡೆದ ಹಣದಿಂದ ಕಡಿತಗೊಳಿಸಲಾಗುತ್ತದೆ. ಆದರೆ ಇದಕ್ಕಾಗಿ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯ ಲಾಭ ಪಡೆಯಲು, ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪಡೆದ ಹಣದಲ್ಲಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರ ಪ್ರೀಮಿಯಂ ಮೊತ್ತ 55 ರಿಂದ 200 ರೂ. 60 ವರ್ಷವಾದ ನಂತರ, ಪ್ರೀಮಿಯಂ ಹಣ ಕಡಿತಗೊಳ್ಳುವುದನ್ನು ನಿಲ್ಲಿಸುತ್ತದೆ ಮತ್ತು ರೈತರು ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ಪಡೆಯಲು ಯೋಗ್ಯರಾಗಿರುತ್ತಾರೆ.

ಈ ಯೋಜನೆಯ ನೋಂದಣಿ ಪ್ರಕ್ರಿಯೆ ಹೇಗೆ?

ಪಿಎಂ ಕಿಸಾನ್ ಮಾನ್‌ ಧನ ಯೋಜನೆಗೆ ಹೆಸರನ್ನು ಸೇರಿಸಲು ನೀವು ಮೊದಲು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಣಿಯ ನಂತರ ನೀವು ಪಿಎಂ ಕಿಸಾನ್ ಮಾನ್‌ಧನ್‌ ಯೋಜನೆಗೆ ಹೆಸರನ್ನು ಸೇರಿಸಲು ಫಾರ್ಮ್ ಭರ್ತಿ ಮಾಡಿ ಅಗತ್ಯವಿರುವ ವಿವರಗಳನ್ನು ಹಾಗೂ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್‌ನ್ನು ನೀವು ಭರ್ತಿ ಮಾಡಿದ ತಕ್ಷಣ, ನಿಮ್ಮ ಕಂತುಗಳು ಮಾನ್‌ಧನ ಪಿಂಚಣಿ ಯೋಜನೆಗೆ ಪ್ರತಿ ತಿಂಗಳು ಕಡಿತಗೊಳ್ಳಲು ಈ ಯೋಜನೆ ಸಕ್ರಿಯಗೊಳ್ಳುತ್ತದೆ.

advertisement

Leave A Reply

Your email address will not be published.