Karnataka Times
Trending Stories, Viral News, Gossips & Everything in Kannada

Traffic Rules: ವಾಹನ ಸವಾರರಿಗೆ ಗುಡ್ ನ್ಯೂಸ್, ಇನ್ಮುಂದೆ ಟ್ರಾಫೀಕ್ ಪೊಲೀಸ್ ರಿಗೆ ದಂಡ ಕಟ್ಟಬೇಕಾಗಿಲ್ಲ!

advertisement

ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಹಾಗಿದ್ದರೂ ಪಾಲನೆ ಮಾಡುವುದಕ್ಕಿಂತಲೂ ನಿಯಮ ಉಲ್ಲಂಘನೆ ಮಾಡುವವರ ಪ್ರಮಾಣ ಇತ್ತೀಚೆಗೆ ಗಣನೀಯವಾಗಿ ಏರುತ್ತಿದೆ. ಹಾಗಾಗಿ ಅವರಿಗೆ ದಂಡ ಸೇರಿದಂತೆ ಶಿಕ್ಷೆ ವಿಧಿಸುವ ಪ್ರಮಾಣ ಸಹ ಅಧಿಕವಾಗುತ್ತಿದೆ. ಟ್ರಾಫಿಕ್ ಪೊಲೀಸರು (Traffic Police) ದಂಡ ವಸೂಲಿ ಮಾಡುವ ಪ್ರಕ್ರಿಯೆ ಬಗ್ಗೆ ಇತ್ತೀಚೆಗೆ ಬೆಂಗಳೂರಿನ ಪ್ರಕರಣ ಒಂದರಲ್ಲಿ ಮಹತ್ವದ ಆದೇಶ ಹೊರಬಂದಿದೆ.

ಯಾವುದು ಈ ಪ್ರಕರಣ?

ಇತ್ತೀಚೆಗೆ ಸಂಚಾರಿ ನಿಯಮ (Traffic Rules) ಉಲ್ಲಂಘನೆ ಆಗುವುದು ಸಾಮಾನ್ಯ ಸಂಗತಿಯಾಗಿದ್ದು ಬೆಂಗಳೂರಿನ ಸುಭಾಷ್ ನಗರದ ನಿವಾಸಿ ಕೆ.ಟಿ. ನಾಗರಾಜು (KT Nagaraju) ಅವರು ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡಿದ್ದಾರೆ. ಹಾಗಾಗಿ ಅವರಿಗೆ ಫೈನ್ (Fine) ಕಟ್ಟಲು ತಿಳಿಸಲಾಗಿದೆ. ಸರಕಾರಿ ಅಧಿಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪ ಮತ್ತು ದಂಡ ಪಾವತಿಗೆ ವಿರೋಧ ಮಾಡಿದ್ದ ಹಿನ್ನೆಲೆ ಆತನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಬಿಡುಗಡೆ ಮಾಡಿ ನೊಟೀಸ್ ನೀಡಿದ್ದಾರೆ. ಅಷ್ಟು‌ ಮಾತ್ರವಲ್ಲದೆ ಪೊಲೀಸರು ಆತನ ಬೈಕ್ ಅನ್ನು ಸೀಸ್ ಮಾಡಿದ್ದರ ಜೊತೆಗೆ ಕೊಳ ಹಾಕಿ ಕರೆದೊಯ್ದ ಬಗ್ಗೆ ಆತನ ಪರ ವಕೀಲರು ಪೊಲೀಸರ ಈ ಕ್ರಮದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

 

 

advertisement

ದೋಷಾ ರೋಪ ಪಟ್ಟಿ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ನಟರಾಜ್ ಅವರ ಪರ ವಕೀಲರಾದ ಸಿ ಎನ್ ರಾಜು ಅವರು ಈ ಕೇಸ್ ಹಾಕಿದ್ದು ಸದ್ಯ ಪೊಲೀಸರ ಕರ್ತವ್ಯ ಲೋಪದ ಪ್ರಶ್ನೆ ಕೂಡ ಎದುರಾದಂತಿದೆ. ದಂಡ ಸಂಗ್ರಹ ಮಾಡುವ ಅಧಿಕಾರ ಮಿತಿ ಮತ್ತು ಆ ವ್ಯವಸ್ಥೆ ಬಗ್ಗೆ ಎಲ್ಲೆಡೆ ಗೊಂದಲ ಉಂಟಾಗಿದೆ‌. ಹಾಗಾಗಿ ಈ ಬಗ್ಗೆ ಹೈ ಕೋರ್ಟ್ (High Court) ಮಹತ್ವದ ಆದೇಶ ಹೊರಡಿಸಿದೆ.

High Court ಆದೇಶದಲ್ಲಿ ಏನಿದೆ?

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಜನರ ಬಗ್ಗೆ ನಿಗಾ ವಹಿಸಬೇಕು. ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರಿಕರಣ ಮಾಡಬೇಕು ಅದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದವರ ವಿರುದ್ಧ ದಂಡದ ಮೊತ್ತ ನಿರ್ಧಾರ ಮಾಡುವ ಮತ್ತು ಅದನ್ನು ಸಂಗ್ರಹ ಮಾಡುವ ಯಾವುದೇ ಅಧಿಕಾರ ಪೊಲೀಸಿನವರಿಗೆ ಇರಲಾರದು. ದಂಡದ ಮೊತ್ತ ನಿರ್ಣಯ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರವೇ ಇರಲಿದೆ.

ಪೊಲೀಸರ ಮೇಲೆ ವಾಹನ ಸವಾರರು ಹಲ್ಲೆ ಮಾಡಲು ಬಂದೆ ಅದನ್ನು ತಡೆಯಬೇಕು. ಬಳಿಕ ಅವರನ್ನು ವಶಕ್ಕೆ ಪಡೆಯಬೇಕು. ಆದರೆ ಆ ಸಂದರ್ಭ ದಂಡ ವಿಧಿಸಿ ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ಇರಲಾರದು ಅವೆಲ್ಲವೂ ನ್ಯಾಯಾಂಗ ಮುಖೇನ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ದಂಡ ಪಾವತಿ ಮಾಡದೆ ಇದ್ದ ವಾಹನ ಸವಾರರ ವಾಹನವನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಇರಲಾರದು ಎಂದು ಸ್ಪಷ್ಟೀಕರಿಸಿದೆ

advertisement

Leave A Reply

Your email address will not be published.