Karnataka Times
Trending Stories, Viral News, Gossips & Everything in Kannada

AnnaBhagya Scheme: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಇನ್ಮುಂದೆ ಯಾರಿಗೂ ಹಣ ಸಿಗಲ್ಲ.

advertisement

ರಾಜ್ಯದಲ್ಲಿ ಅನ್ನಭಾಗ್ಯ (AnnaBhagya Scheme) ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಜನರಿಗೆ ಹಸಿವು ನೀಗಿಸುವ ಸಲುವಾಗಿ ಕಡಿಮೆ ದರಕ್ಕೆ ಅಕ್ಕಿ ಪೂರೈಕೆ ಲಭ್ಯವಾಗಿತ್ತು ರಾಷ್ಟ್ರೀಯ ಮಟ್ಟದಲ್ಲಿ ಬಡತನ ನಿರ್ಮೂಲನೆ ಹಸಿವು ಮುಕ್ತ ಭಾರತದ ಒಂದಂಶವಾದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿವಿಧ ಪರಿಕರವನ್ನು ಉಚಿತ ಮತ್ರು ಅತೀ ಕಡಿಮೆ ಬೆಲೆಗೆ ನೀಡುವ ಮೂಲಕ ಬಡವರ್ಗದ ಜನ ಸಮೂಹದ ಸಂಕಷ್ಟಕ್ಕೆ ನೆರವಾಗಿತ್ತು.

ಬಳಿಕ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಆದರೆ ಕೇಂದ್ರ ಸರಕಾರದ ಸಹಕಾರ ಇಲ್ಲದೇ ಮತ್ತು ಅಕ್ಕಿ ಪೂರೈಕೆ ಸಮಸ್ಯೆ ಹಿನ್ನೆಲೆಯಲ್ಲಿ ಐದು ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿಗೆ ಬದಲಿಗೆ ಹಣ ನೀಡುವ ವ್ಯವಸ್ಥೆ ಜಾರಿಗೆ ಬಂದಿತ್ತು. ಈ ವ್ಯವಸ್ಥೆ ಜನತೆಗೆ ಖುಷಿ ತರಿಸಿದ್ದರೂ ಕೂಡ ಆಡಳಿತ ಪಕ್ಷ ಮಾತ್ರ ವಿರೋಧ ಪಕ್ಷದ ಟೀಕೆಗೆ ಗುರಿಯಾಗಬೇಕಾಯಿತು. ಹಾಗಾಗಿ ಈ ಬಗ್ಗೆ ಸಚಿವರು ಮಾಧ್ಯಮದ ಮುಂದೆ ಮುಂದಿನ ನಡೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಶೀಘ್ರ ಕ್ರಮ?

ಅಕ್ಕಿಯ ಬದಲು ಹಣ ನೀಡುವ ವ್ಯವಸ್ಥೆ ಬದಲಿಸಿ ಹತ್ತು ಕೆಜಿ ಅಕ್ಕಿಯನ್ನೇ ನೀಡಬೇಕು ಎಂಬ ಬಗ್ಗೆ ವಿರೋಧ ಪಕ್ಷ ತಕರಾರು ಎತ್ತಿದ್ದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ (KH Muniyappa) ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಪ್ರಸ್ತುತ 5kg ಅಕ್ಕಿ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.16ಕೋಟಿ ಪಡಿತರ ಕಾರ್ಡ್ ದಾರರಿದ್ದು 4ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ತೆಲಂಗಾಣ, ಛತ್ತೀಸ್ಗಢ, ಆಂಧ್ರಪ್ರದೇಶ ಅಕ್ಕಿ ಖರೀದಿಗೆ ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರವೇ ಹಣದ ಬದಲು ಪೂರ್ತಿ ಅಕ್ಕಿಯನ್ನೇ ನೀಡುವ ವ್ಯಚಸ್ಥೆ ಮಾಡ್ತೇವೆ ಎಂದು ಅವರು ಹೇಳಿದರು.

advertisement

ಹೊಸ ಅರ್ಜಿ ಸಂಖ್ಯೆ ಹೆಚ್ಚಳ

ರೇಶನ್ ಕಾರ್ಡ್ (Ration Card)ನಿಂದ ಇರುವ ಅನೇಕ ಪ್ರಯೋಜನಕ್ಕಾಗಿಯೇ ರೇಶನ್ ಕಾರ್ಡ್ ಪ್ರತ್ಯೇಕವಾಗಿ ಮಾಡುವ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ವಿಶೇಷ ಸೌಲಭ್ಯ ನೀಡಿದ್ದ ಹಿನ್ನೆಲೆ ಅರ್ಜಿ ಬರುವ ಪ್ರಮಾಣ ಈ ಹಿಂದಿಗಿಂತಲೂ ಅಧಿಕವಾಗಿದೆ. ಜಿಲ್ಲಾವರು 12 ಸಾವಿರ ಅರ್ಜಿಗಳು ಬಂದಿದ್ದು ಅದರಲ್ಲಿ 2.95 ಲಕ್ಷ ಅರ್ಜಿ ಬಾಕಿ ಉಳಿದಿದೆ. ಇನ್ನು 15 ದಿನದ ಒಳಗೆ ಅರ್ಜಿ ಪರಿಶೀಲನೆ ಮಾಡಿ ಶೀಘ್ರವೇ ಅರ್ಜಿ ಸಲ್ಲಿಸಿದ್ದವರಿಗೆ ಕಾರ್ಡ್ ವಿತರಣೆ ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಹಣ ಬರದೇ ಸಮಸ್ಯೆ

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬರದೇ ಅನೇಕರಿಗೆ ಸಮಸ್ಯೆ ಆಗಿದ್ದ ಬಗ್ಗೆ ಕೂಡ ಸಚಿವರು ಧ್ವನಿ ಎತ್ತಿದ್ದಾರೆ. ಸರಕಾರದಿಂದ ಈ ತಿಂಗಳು ಪಡಿತರರಿಗೆ 680ಕೋಟಿ ರೂಪಾಯಿ ವರೆಗೆ ನೀಡಬೇಕಿತ್ತು ಅದರಲ್ಲಿ 644 ಕೋಟಿ ರೂಪಾಯಿ ಮಂಜೂರಾಗಿದೆ. ಖಾತೆಗೆ ಹಣ ಬರುತ್ತಿಲ್ಲ ಎಂಬ ದೂರು ಸಹ ಕೇಳಿಬಂದಿದ್ದು ಬ್ಯಾಂಕ್ ಖಾತೆ ದೋಷ ಪೂರಿತವಾಗಿದ್ದರೆ ಮತ್ತು ತಾಂತ್ರಿಕ ಸಮಸ್ಯೆ ಇದ್ದರೆ ಹಣ ಜಮೆ ಆಗಲು ಸಮಸ್ಯೆ ಆಗಲಿದೆ ಈ ಬಗ್ಗೆ ಗಮನಿಸಬೇಕಾದ್ದು ಅಗತ್ಯವಾಗಿದೆ ಎಂದು ಸಚಿವ ಕೆ. ಎಚ್. ಮುನಿಯಪ್ಪ ಅವರು ಹೇಳಿದರು.

advertisement

Leave A Reply

Your email address will not be published.