Karnataka Times
Trending Stories, Viral News, Gossips & Everything in Kannada

Asha Kirana Scheme: ಜನರಿಗೆ ಮತ್ತೊಂದು ಹೊಸ ಯೋಜನೆ ಘೋಷಣೆ ಮಾಡಿದ ಸಿದ್ದು ಸರ್ಕಾರ, ಈ ಸಲ ಮನೆ ಬಾಗಿಲಿಗೆ ಸೇವೆ ಸೌಲಭ್ಯ!

advertisement

ಕಣ್ಣು ಮಾನವನಿಗೆ ಅತೀ ಅಗತ್ಯ. ಕಣ್ಣು ಅತೀ ಸೂಕ್ಷ್ಮ ಭಾಗವಾಗಿದ್ದು ಅದರ ಆರೈಕೆ ನಮಗೆ ಅತೀ ಪ್ರಧಾನವಾಗುತ್ತದೆ. ಕಣ್ಣಿನ ಭಾಗಕ್ಕೆ ಏನಾದರು ಆದರೆ ಅಥವಾ ದೃಷ್ಟಿ ದೋಷ ಸಂಭವಿಸಿದರೆ ಅದರ ಆರೈಕೆಗಾಗಿ ಪ್ರಯತ್ನ ಪಡುತ್ತಲೇ ಇರಬೇಕಾಗುತ್ತದೆ. ಮಧ್ಯಮ ವರ್ಗ ಮತ್ತು ಶ್ರೀಮಂತರಿಗೆ ಕಣ್ಣಿನ ಆರೈಕೆಗೆ ಖಾಸಗಿ ಕ್ಲೀನಿಕ್ ಗಳ ಮೊರೆ ಹೋಗಬಹುದು ಆದರೆ ತೀರ ಬಡವರ್ಗದವರಿದ್ದರೆ ಅಂತವರಿಗೆ ಕಣ್ಣಿನ ಸಮಸ್ಯೆ ದೊಡ್ಡ ಮಟ್ಟದ್ದು ಎಂದರೂ ತಪ್ಪಲ್ಲ. ಆದರೆ ಕಣ್ಣಿನ ವೈದ್ಯಕೀಯ ಸೌಲಭ್ಯಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಸರಕಾರ ವಿನೂತನ ಕ್ರಮ ಪರಿಚಯಿಸಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಣ್ಣಿನ ಪೊರೆ ಚಿಕಿತ್ಸೆ, ದೃಷ್ಟಿ ಸಮಸ್ಯೆ, ಲೇಸರ್, ರೆಟಿನಾ ಚಿಕಿತ್ಸೆ ಎಂಬ ಅನೇಕತರದ ಪ್ರಕಾರಗಳಿದ್ದು ಸರಕಾರಿ ಆಸ್ಪತ್ರೆಯಲ್ಲಿ ಸಹ ಕಣ್ಣಿನ ಉಚಿತ ತಪಾಸಣೆ ಹಾಗೂ ಔಷಧ ನೀಡುತ್ತಾರೆ. ಆದರೆ ಬಹುತೇಕ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಲಭ್ಯ ಆಗುತ್ತಿಲ್ಲ. ಸಮಾಜದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಯಲ್ಲಿ ಫ್ರೀ ಕ್ಯಾಂಪೇನ್ ಸಹ ನೀಡುತ್ತಿದ್ದರು ಅವುಗಳ ಫಲಾನುಭವಿಗಳಾಗಲು ನಿರ್ದಿಷ್ಟ ದಿನದಂದೆ ತೆರಳಬೇಕು ಇದು ಸಾಧ್ಯವಾಗದೇ ಅನೇಕ ಬಡವರ್ಗದವರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಆದರೆ ಇದೀಗ ಜನರ ಕಷ್ಟಕ್ಕೆ ಸರಕಾರವೇ ದಾರಿ ಹುಡುಕುತ್ತಿದೆ.

ಹೊಸ ಯೋಜನೆ ಜಾರಿ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಜನರ ಕಣ್ಣಿನ ಆರೈಕೆಗೆ ಬೇಕಾದ ವೈದ್ಯಕೀಯ ಸೌಲಭ್ಯ ನೀಡುವ ಸಲುವಾಗಿ ವಿನೂತನ ಯೋಜನೆ ಪರಿಚಯಿಸುತ್ತಿದೆ. ಆ ಯೋಜನೆಯ ಹೆಸರು ಆಶಾ ಕಿರಣ ಎಂದಾಗಿದ್ದು ಜನರ ಮನೆ ಬಾಗಿಲಿಗೆ ಈ ಯೋಜನೆ ನೀಡಲಾಗುವುದು. ಈ ಮೂಲಕ ಕಣ್ಣಿನ ಸಮಸ್ಯೆಗಳನ್ನು ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ನಿವಾರಿಸಿ ಕೊಳ್ಳಬಹುದಾಗಿದೆ.

advertisement

Asha Kirana Scheme ಉದ್ದೇಶ ಏನು?

ಈ ಯೋಜನೆಯು ಜನರಿಗೆ ಕಣ್ಣಿನ ಆರೈಕೆಗೆ ಸರಕಾರ ನೆರವಾಗುವ ಮೂಲಕ ಪ್ರತೀ ಕುಟುಂಬದ ಸದಸ್ಯರಿಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಮೂಲಕ ನೆರವಾಗುವ ಉದ್ದೇಶ ಹೊಂದಿದೆ. ಇದರಲ್ಲಿ ಕಣ್ಷಿನ ತಪಾಸಣೆ ಹಾಗೂ ಕನ್ನಡಕ ವಿತರಣೆ, ಪೊರೆಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗೂ ನೆರವಾಗುವ ಮೂಲಕ ಜನರಿಗೆ ಈ ಯೋಜನೆ ಉಪಯೋಗಕ ರವಾಗಲಿದೆ.

Asha Kirana Scheme ಯಾವಾಗ ಬರುತ್ತದೆ?

ಸಿಎಂ ಅವರು ಆಶಾ ಕಿರಣ ಯೋಜನೆ (Asha Kirana Scheme)  ಘೋಷಣೆ ಮಾಡಿದ್ದು ಇದು ಇನ್ನೇನು ಕೆಲವೇ ದಿನದಲ್ಲೊ ಕಾರ್ಯ ರೂಪಕ್ಕೆ ಬರಲಿದೆ. ಮೊದಲ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ಚಾಮರಾಜನಗರ, ಹಾವೇರಿ, ಕಲಬುರ್ಗಿ ಯಲ್ಲಿ ಆರಂಭ ಆಗಲಿದ್ದು ಬಳಿಕ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಆಗಲಿದೆ. ಹೀಗಾಗಿ ಬಡವರ್ಗದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಗುಣಮಟ್ಟದ ವೈದ್ಯಕೀಯ ತಪಾಸಣೆ ಹಾಗೂ ಹೆಚ್ಚಿನ ಅಗತ್ಯ ವಿದ್ದ ಸಂದರ್ಭದಲ್ಲಿ ಆಸ್ಪತ್ರೆ ಚಿಕಿತ್ಸೆ ಸಹ ನೀಡಲಾಗುವುದು.

advertisement

Leave A Reply

Your email address will not be published.