Karnataka Times
Trending Stories, Viral News, Gossips & Everything in Kannada

Overdraft: ಉಳಿತಾಯ ಖಾತೆಯಲ್ಲಿ ಹಣ ಇಲ್ಲದಿದ್ರು 10 ಸಾವಿರ ರೂಪಾಯಿ ಶೀಘ್ರ ಪಡೆಯಬಹುದು, ಇಲ್ಲಿದೆ ಸುಲಭ ಮಾರ್ಗ!

advertisement

ತಿಂಗಳ ಸಂಬಂಳಕ್ಕಾಗಿ ದುಡಿಯುವವರ ಸಂಖ್ಯೆ ಇತ್ತೀಚೆಗೆ ಅಧಿಕವಾಗಿದೆ. ತಿಂಗಳು ಆರಂಭ ವಾಗುತ್ತಿದ್ದಂತೆ ಕೈ ತುಂಬಾ ಇರುವ ಹಣ ಕೊನೆ ಕೊನೆಗೆ ಖಾಲಿಯಾಗಿ ಬಿಡುತ್ತದೆ. ತಿಂಗಳು ಮುಗಿಯುವ ಮುನ್ನವೇ ಕೊನೆ ವಾರದಲ್ಲಿ ಕೆಲವೊಂದು ಅಗತ್ಯತೆಗೆ ಹಣ ಬೇಕೆ ಬೇಕಾಗುತ್ತದೆ. ಹಾಗಾಗಿ ಹಣ ಖಾಲಿ ಆಗಿದೆ ಏನು ಮಾಡೋದು ಸಾಲ ಪಡಿಯೋದ ಎಂದು ಚಿಂತೆ ಮಾಡುವ ಬದಲು ನಿಮ್ಮ ಉಳಿತಾಯ ಖಾತೆ ಯಿಂದಲೇ ಹಣ ಕಡಿಮೆ ಇದ್ದು ನಿಮಗೆ ಹತ್ತು ಸಾವಿರ ರೂಪಾಯಿ ವರೆಗೆ ಹೆಚ್ಚುವರಿ ಹಣ ಬ್ಯಾಂಕ್ ನಿಂದ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈ ವ್ಯವಸ್ಥೆ

ಬಹುತೇಕ ಬ್ಯಾಂಕ್ ಗಳು ಉಳಿತಾಯ ಖಾತೆಯಲ್ಲಿ ಓವರ್ ಡ್ರಾಫ್ಟ್ ನೀಡುವ ಯೋಜನೆ ಪರಿಚಯಿಸುತ್ತಲೇ ಬಂದಿದೆ. ಹೊಸದಾಗಿ ಬ್ಯಾಂಕ್ ಖಾತೆ ಓಪನ್ ಮಾಡೋರಿಗೆ ಆರಂಭದಲ್ಲೇ ಈ ಸೌಲಭ್ಯ ಸಿಗಲಿದ್ದು ಈಗಾಗಲೇ ಇದ್ದ ಬ್ಯಾಂಕ್ ಖಾತೆ ಅವರು ಬ್ಯಾಂಕ್ ಮೂಲಕ ಸಹಾಯ ಕೇಳಬಹುದು. ಹಾಗಾಗಿ ನೀವು ಎಟಿಎಂ ಮೂಲಕವೇ ಹೆಚ್ಚುವರಿ ಮೊತ್ತ ಪಡೆಯಬಹುದು ಆದರೆ ಅದಕ್ಕೆ ಬಡ್ಡಿ ನಿಯಮ ಕೂಡ ಅನ್ವಯವಾಗಲಿದೆ.

ಓವರ್ ಡ್ರಾಫ್ಟ್ (Overdraft) ಎಂದರೇನು?

ಓವರ್ ಡ್ರಾಫ್ಟ್ (Overdraft) ಎಂದರೆ ಬ್ಯಾಂಕ್ ನಿಂದ ಪಡೆಯುವ ಒಂದು ವಿಧವಾದ ಸಾಲ ಎನ್ನಬಹುದು. ಆದರೆ ಈ ಸಾಲ ಪಡೆಯಲು ಬ್ಯಾಂಕ್ ಗೆ ಹೋಗಿ ಕಾಯುವ , ಫಾರ್ಮ್ ಭರ್ತಿ ಮಾಡಿ ಅಲೆಯುವ ಯಾವುದೇ ಪ್ರಮೇಯ ಬರದು. ಎಟಿಎಂ ನಿಂದಲೇ ಸಾಲವನ್ನು ಪಡೆಯಬಹುದು. ಹಾಗಾಗಿ ತ್ವರಿತ ಗತಿಯಲ್ಲಿ ಪಡೆಯುವ ಸಾಲ ಎಂದು ಇದನ್ನು ಹೇಳಬಹುದು. ಇದನ್ನು OD ಸೌಲಭ್ಯ ಎಂದು ಕೂಡ ಕರೆಯುತ್ತಾರೆ. ಜನ್ ಧನ್ ಖಾತೆ ಹೊಂದಿರುವವರಿಗೆ ಕೂಡ ಈ ಸೌಲಭ್ಯ ಸಿಗಲಿದೆ.

advertisement

ಮಿನಿಮಮ್ ಬ್ಯಾಲೆನ್ಸ್ (Minimum Balance) ಅಗತ್ಯ

ನೀವು ಒಡಿ (Overdraft) ಸೌಲಭ್ಯವನ್ನು ಯಾವ ಬ್ಯಾಂಕ್ ನಿಂದ ಕೂಡ ಪಡೆಯಬಹುದು. ಆದರೆ ಅದಕ್ಕೆ ಮೊದಲು ನಿಮ್ಮ ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು. ಅದೇ ರೀತಿ ಒಡಿ ಯನ್ನು ಜನ್ ಧನ್ ಖಾತೆಗೆ ಸಹ ನೀಡಲಾಗಿದ್ದು ನಿಮ್ಮ ಅಕೌಂಟ್ ನಲ್ಲಿ ಕಡಿಮೆ ಹಣ ಇದ್ದರೂ 10 ಸಾವಿರ ರೂಪಾಯಿ ವರೆಗೆ ಒಡಿ ಸೌಲಭ್ಯ ನಿಮಗೆ ಸಿಗಲಿದೆ. ಒಡಿ ಸೌಲಭ್ಯ ನಿಮ್ಮ ತ್ವರಿತ ಅಗತ್ಯ ಪೂರೈಕೆಗೆ ದೊಡ್ಡ ಮಟ್ಟದ ಸಹಕಾರ ನೀಡಲಿದೆ. ಈ ಹಣವನ್ನು ನೀವು ಹಿಂದಿರುಗಿಸುವಾಗ ಅದಕ್ಕೆ ನಿಗಧಿತ ಪ್ರಮಾಣದ ಬಡ್ಡಿ ಪಾವತಿ ಮಾಡಬೇಕಾಗುತ್ತದೆ.

ಇಷ್ಟು ಪ್ರಮಾಣದ ಬಡ್ಡಿ ಇರಲಿದೆ

ಒಡಿ ಸೌಲಭ್ಯ ಪಡೆಯುವವರಿಗೆ ಹಣವನ್ನು ಬ್ಯಾಂಕ್ ಗೆ ಹಿಂದಿರುಗಿಸುವಾಗ ಬಡ್ಡಿದರ ನಿಯಮ ಅನ್ವಯವಾಗಲಿದೆ. ಬ್ಯಾಂಕ್ ನಿಂದ ನೀವು ಪಡೆದ ಮೊತ್ತದ ಆಧಾರದ ಮೇಲೆ 2% ನಿಂದ 12% ವರೆಗೆ ಬಡ್ಡಿ ಸೌಲಭ್ಯ ಇರಲಿದೆ. ಕೆಲ ಬ್ಯಾಂಕ್ ನಲ್ಲಿ 50,000 ರೂಪಾಯಿ ವರೆಗೆ ಓವರ್ ಡ್ರಾಫ್ಟ್ ನೀಡಲಿದೆ. ಆದರೆ ಇನ್ನು ಕೆಲ ಬ್ಯಾಂಕ್ ನಲ್ಲಿ ಕಡಿಮೆ ಮೊತ್ತ ನೀಡಲಿದೆ. ನೀವು 10 ಸಾವಿರ ಪಡೆದರೆ ಅಷ್ಟು ಪ್ರಮಾಣದ ಬಡ್ಡಿ ಮಾತ್ರ ಕಟ್ಟ ಬೇಕಾಗುತ್ತದೆ. 50 ಸಾವಿರ ಮೊತ್ತ ಇದ್ದರೂ ನೀವು ಪೂರ್ತಿ ಹಣ ತೆಗೆಯುವ ತುರ್ತು ಪರಿಸ್ಥಿತಿ ಬಂದರೆ ಮಾತ್ರವೇ ಬಳಸುವಂತೆ ಕೂಡ ಬ್ಯಾಂಕ್ ನಿಂದ ಸಲಹೆ ಕೇಳಿ ಬರಲಿದೆ.

advertisement

Leave A Reply

Your email address will not be published.