Karnataka Times
Trending Stories, Viral News, Gossips & Everything in Kannada

HSRP: HSRP ಅಳವಡಿಕೆಯಲ್ಲಿ ತೊಂದರೆಯಾಗುವವರಿಗೆ ಹೊಸ ಮಾರ್ಗ ಸೂಚಿಸಿದ ಸರ್ಕಾರ!

advertisement

ಪ್ರತಿನಿತ್ಯ ಓಡಾಟಕ್ಕೆ ಬಸ್ ಪ್ರಯಾಣ ಅವಲಂಬಿಗಳಾಗುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಇರುವುದನ್ನು ನಾವು ಕಾಣಬಹುದು. ಅದೇ ರೀತಿ ಕುಟುಂಬ ಓಡಾಟಕ್ಕಾಗಿ ಕಾರು ಕೊಂಡವರು ಅಧಿಕವೇ ಇದ್ದಾರೆ. ಅಷ್ಟು ಮಾತ್ರವಲ್ಲದೇ ವಾಣಿಜ್ಯ ಉದ್ದೇಶಕ್ಕಾಗಿ ವಾಹನ ಕೊಂಡವರು ಇದ್ದು ಹಳೆ ವಾಹನಕ್ಕಾಗಿ ಸರಕಾರ ಜಾರಿ ಮಾಡಿದ್ದ ನಿಯಮ ಎಲ್ಲರಿಗೂ ಶಾಖ್ ನೀಡಿತ್ತು. ಆದರೆ ಸರಕಾರದ ನೂತನ ಕ್ರಮವೊಂದು ವಾಹನ ಸವಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ವಾಹನಗಳಲ್ಲಿ ತೀರ ಹಳೆ ವಾಹನಗಳು ರಸ್ತೆಯಲ್ಲಿ ಓಡಾಡುವುದು ರಕ್ಷಣಾತ್ಮಕ ವಿಚಾರವಾಗಿ ತೊಂದರೆ ಉಂಟಾಗುವ ಸಾಧ್ಯತೆ ಅಧಿಕವಿದೆ‌. ಹಾಗಾಗಿ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ HSRP ನಂಬರ್ ಪ್ಲೇಟ್ ನೋಂದಣಿ ಕಡ್ಡಾಯ ಮಾಡಲಾಗಿದ್ದು ಫೆಬ್ರವರಿ 17 ರ ವರೆಗೆ ಇದಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಹಾಗಾಗಿ ವಾಹನ ನೋಂದಣಿಯನ್ನು HSRP ಮಾಡಿಸದೇ ಇದ್ದವರಿಗೆ ಮುಂದೇನು ಎಂಬ ಗೊಂದಲವು ಇತ್ತು. ಆದರೆ ಈಗ ಸರಕಾರ ವಾಹನ ಸವಾರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ.

HSRP ಎಂದರೇನು?

High security registration plate ಎನ್ನುವುದು ವಾಹನಗಳ ಸುರಕ್ಷತೆಗಾಗಿ ಜಾರಿಗೆ ತಂದ ಒಂದು ಕ್ರಮವಾಗಿದೆ. ಇದನ್ನು ಅತಿ ಸುರಕ್ಷತಾ ನೋಂದಣಿ ಫಲಕ ಎಂದು ಹೇಳಲಾಗುತ್ತದೆ. 2019ತಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಸಿದರೆ ಅವುಗಳನ್ನು ಸುಲಭಕ್ಕೆ ಗುರುತಿಸಬಹುದಾಗಿದೆ. ಕಾರು, ಬೈಕ್, ಆಟೋ, ಟಿಲ್ಲರ್, ಟ್ಯಾಕ್ಟರ್, ಇತರ ವಾಣಿಜ್ಯ ಮತ್ತು ದೈನಿಕ ಉಪಯೋಗಿಸಲ್ಪಡುವ ವಾಹನಕ್ಕೆ ಈ ನಿಯಮ ಅನ್ವಯವಾಗಲಿದೆ. ಹಾಗಾಗಿ ಎಚ್ ಎಸ್ ಆರ್ಪಿ ಯನ್ನು ಅಳವಡಿಸಿಕೊಳ್ಳಲೇ ಬೇಕಿದೆ.

advertisement

ಕಡೆಯ ದಿನ ವಿಸ್ತರಣೆ

HSRP ಅಳವಡಿಕೆ ಮಾಡಲು ಅನೇಕ ನೀತಿ ನಿಯಮಗಳಿವೆ. ಆನ್ಲೈನ್ ಮೂಲಕ HSRP ಪಡೆಯಲು ಕಾಲಾವಕಾಶ ವಿಸ್ತರಿಸಲಾಗಿದೆ. ಮೇ 31 ರ ವರೆಗೆ ಸಮಯಾವಕಾಶ ನೀಡಿದೆ. ಹಾಗಾಗಿ ಈ ಹೆಚ್ಚುವರಿ ಸಮಯ ವಾಹನ ಸವಾರರಿಗೆ ಭರ್ಜರಿ ಗಿಫ್ಟ್ ನೀಡಿದಂತಾಗಿದೆ. ಫೆಬ್ರವರಿ ಒಳಗೆ ಮಾಡಿಸದೆ ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.

ಹೇಗೆ ಮಾಡಿಸುವುದು?

HSRP ಮಾಡಿಸಲು ನೀವು https://transport.karnataka.gov.in ಕಚೇರಿಗೆ ಭೇಟಿ ನೀಡಿ. ಆಗ ಅದರಲ್ಲಿ ನಿಮ್ಮ ವಾಹನ, ಮಾಡೆಲ್ ಇತರ ವಿವರ ಕೆಳಲಾಗುವುದು ಅವುಗಳನ್ನು ಭರ್ತಿ ಮಾಡಿ. ಬಳಿಕ ಸಬ್ಮಿಟ್ ನೀಡಬೇಕು. ಹೀಗೆ ಮಾಡಿದರೆ ಮಾತ್ರವೇ ನಿಮಗೆ HSRP ನಂಬರ್ ಪ್ಲೇಟ್ ನೀಡಲಾಗುತ್ತದೆ. ನೀವು ಅಧಿಕೃತ ವೆಬ್‌ಸೈಟ್‌ನಲ್ಲಿ ನಲ್ಲಿಯೆ ನೋಂದಣಿ ಮಾಡಿಕೊಳ್ಳಿ ಇಲ್ಲವಾದರೆ ಅನಧಿಕೃತ ವಾಗಿ ನೋಂದಾಯಿಸಿದ್ದು ತಿಳಿದು ಬಂದರೆ ಸರಕಾರ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ HSRP ಅಳವಡಿಕೆ ದಿನಾಂಕ, ನೋಂದಣಿ ಕೇಂದ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಮುನ್ನಡೆಯಬೇಕು. ವಾಹನಕ್ಕೆ HSRP ಅಳವಡಿಸಲು ತೊಂದರೆಗಳು ಉಂಟಾದಲ್ಲಿ 94498 63429, 94498 63429 ನಂಬರ್ ಗೆ ಕಾಲ್ ಮಾಡಿ.

advertisement

Leave A Reply

Your email address will not be published.