Karnataka Times
Trending Stories, Viral News, Gossips & Everything in Kannada

PM Kisan Mandhan: ರೈತರಿಗೆ ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 3,000ರೂಪಾಯಿ ಪಿಂಚಣಿ, ಯೋಜನೆಗೆ ಹೀಗೆ ಅಪ್ಲೈ ಮಾಡಿ!

advertisement

ರೈತರು ದೇಶದ ಬೆನ್ನೆಲುಬು ಹಾಗಾಗಿ ರೈತರ ಅಭಿವೃದ್ಧಿಗೆ ಹಲವರು ಯೋಜನೆಗಳನ್ನು ರೂಪಿಸಲಾಗುತ್ತಿದೆ.ದೇಶದ ರೈತರನ್ನು ಸ್ವಾವಲಂಬಿಗಳಾಗಿಸಬೇಕು ಹಾಗೂ ಆರ್ಥಿಕವಾಗಿ ಅವರಿಗೂ ಭದ್ರತೆಯನ್ನೊದಗಿಸಬೇಕು ಎಂಬ ನಿಟ್ಟಿನಲ್ಲಿ ಕೇಂದ್ರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹುದೇ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಮನಧನ್ ಯೋಜನೆ ಒಂದಾಗಿದ್ದು ಈ ಯೋಜನೆಯಡಿಯಲ್ಲಿ ದೇಶದ ರೈತರಿಗೆ ಮಾಸಿಕ ರೂ 3,000 ಪಿಂಚಣಿಯನ್ನೊದಗಿಸಲಾಗುತ್ತಿದೆ.

ಪ್ರಧಾನಮಂತ್ರಿ ಕಿಸಾನ್ ಮನಧನ್ (PM Kisan Mandhan) ಯೋಜನೆ ಎಂದರೇನು?

ರೈತರ ಅನುಕೂಲಕ್ಕಾಗಿ ಕೇಂದ್ರವು ನಡೆಸುತ್ತಿರುವ ಹಲವಾರು ಯೋಜನೆಗಳಲ್ಲಿ ಇದು ಒಂದಾಗಿದ್ದು, ಈ ಯೋಜನೆಯಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರು ಆರ್ಥಿಕ ನೆರವು ಪಡೆಯಬಹುದಾಗಿದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿರುವ ರೈತರಿಗಾಗಿಯೇ ಈ ಯೋಜನೆಯನ್ನು ಅನುಷ್ಟಾನ್ಕಕೆ ತರಲಾಗಿದ್ದು, ಇತರರ ಮೇಲೆ ವೃದ್ಧ ರೈತರು ಅವಲಂಬಿತರಾಗಿರಬಾರದು ಎಂಬ ಕಾರಣಕ್ಕೆ ಈ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ವೃದ್ಧ ರೈತರಿಗೆ ಆರ್ಥಿಕ ನೆರವು, ಭದ್ರತೆ, ಸಹಾಯವನ್ನೊದಗಿಸುವ ನಿಟ್ಟಿನಲ್ಲಿ ಕೇಂದ್ರವು ಕಿಸಾನ್ ಮನಧನ್ ಯೋಜನೆ (PM Kisan Mandhan) ಯನ್ನು ಜಾರಿಗೆ ತಂದಿತು.

ರೈತರಿಗೆ ತಿಂಗಳಿಗೆ ಎಷ್ಟು ಹಣ ಸಿಗುತ್ತದೆ!

ಈ ಯೋಜನೆಯಡಿ ರೈತರಿಗೆ ಮಾಸಿಕ 3 ಸಾವಿರ ರೂ.ವನ್ನು ವಿತರಿಸಲಾಗುತ್ತಿದೆ. ಇನ್ನು ಒಂದು ವೇಳೆ ಫಲಾನುಭವಿ ರೈತ ಮೃತಪಟ್ಟಲ್ಲಿ ಅವರ ಪತ್ನಿಗೆ ಮಾಸಿಕ ರೂ 1500 ಅನ್ನು ವಿತರಿಸುವ ನಿಯಮವೂ ಈ ಯೋಜನೆಯಲ್ಲಿದೆ.

ಪ್ರೀಮಿಯಂ ತಿಂಗಳಿಗೆ 55 ರೂಪಾಯಿ ಸಿಗುತ್ತದೆ.

advertisement

18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು. ವಯಸ್ಸಿನ ನಿರ್ಬಂಧವಿಲ್ಲದೆ ಈ ಯೋಜನೆಯ ಭಾಗವಾಗಲು ಬಯಸುವ ರೈತರು ತಿಂಗಳಿಗೆ ರೂ 55 ರಿಂದ ರೂ 200 ವರೆಗೆ ಡಿಪಾಸಿಟ್ ಮಾಡಬೇಕಾಗುತ್ತದೆ.ಇದರ ನಂತರ ರೈತರು 60 ವರ್ಷ ವಯಸ್ಸು ದಾಟಿದಾಗ ಅವರಿಗೆ ತಿಂಗಳಿಗೆ ರೂ 3000 ದಂತೆ ಪಿಂಚಣಿಯನ್ನೊದಗಿಸಲಾಗುತ್ತದೆ ಇದರ ಮೂಲಕ ಅವರು ತಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ.

ಸಣ್ಣ ರೈತರಿಗೆ ಸಿಹಿ ಸುದ್ದಿ ಇದು!

ದೇಶದ ರೈತರು ಆರ್ಥಿಕವಾಗಿ ಕಂಗೆಟ್ಟಾಗ ಹಾಗೂ ಆತ್ಮಹತ್ಯೆಯಂತಹ ಕಟುನಿರ್ಧಾರಗಳನ್ನು ಕೈಗೊಳ್ಳುವಾಗ ಈ ಯೋಜನೆ ಅವರಿಗೆ ವರದಾನವಾಗಿ ಬರಲಿದೆ. ಈ ಯೋಜನೆ ರೈತ ಬಂಧುಗಳಿಗೆ ಲಾಭದಾಯಕ ಎಂದೆನಿಸಿದ್ದು, 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಮಾತ್ರ ಕಿಸಾನ್ ಮನಧನ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು.

ಯೋಜನೆಗೆ ಅಪ್ಲೈ ಮಾಡುವುದು ಬಲು ಸುಲಭ

  •  ಅರ್ಜಿ ಸಲ್ಲಿಸಲು ರೈತರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಫಾರ್ಮ್ ಖಾಸ್ರಾ ಖಾತೌನಿ (ಕೃಷಿ ಭೂಮಿ ಪ್ಲಾಟ್ ಸಂಖ್ಯೆ) ಮತ್ತು ಬ್ಯಾಂಕ್ ಖಾತೆ ಪಾಸ್‌ಬುಕ್ ಹೊಂದಿರುವುದು ಕಡ್ಡಾಯವಾಗಿದೆ.
  • ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತ ಬಂಧುಗಳು ಕಿಸಾನ್ ಮನಧನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಹೋಮ್‌ಪೇಜ್‌ಗೆ ಹೋಗಿ ಲಾಗಿನ್ ಮಾಡಬೇಕು. ಲಾಗಿನ್ ಆದ ನಂತರ ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಅದರ ನಂತರ, ಅದರಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ. ತದನಂತರ ಜನರೇಟ್ ಒಟಿಪಿ ಕ್ಲಿಕ್ ಮಾಡಬೇಕು.
  • ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನೀವಿಲ್ಲಿ ನಮೂದಿಸಬೇಕಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಸಲ್ಲಿಸಿ ಬಟನ್ ಕ್ಲಿಕ್ ಮಾಡಬೇಕು. ನೊಂದಣಿಯಾದ ಮೇಲೆ ನಿಮಗೆ ಈ ಯೋಜನೆಯು ಅಡಿಯಲ್ಲಿ ಹಣ ಕಟ್ಟಬಹುದು

advertisement

Leave A Reply

Your email address will not be published.