Karnataka Times
Trending Stories, Viral News, Gossips & Everything in Kannada

KSRTC: ಹಣ ಕೊಟ್ಟು KSRTC ಬಸ್ ಹತ್ತುವವರಿಗೆ ಕೋರ್ಟ್ ಗುಡ್ ನ್ಯೂಸ್! ಮಹತ್ವದ ತೀರ್ಪು

advertisement

ಬಸ್ ಎನ್ನುವುದು ಬಡವರ ಪಾಲಿನ ಅಂಬಾರಿ ಎಂದು ಹೇಳಬಹುದು.ಅದರಲ್ಲೂ ಸರಕಾರದ ಶಕ್ತಿ ಯೋಜನೆಯಂತು ಸ್ತ್ರೀಯರ ಪಾಲಿಗೆ ನಿತ್ಯ ಓಡಾಟಕ್ಕೆ ಸರಕಾರದ ಒಂದು ಅನುಕೂಲಕರ ಯೋಜನೆ ಎಂದರು ತಪ್ಪಾಗದು. ಬಸ್ ನಲ್ಲಿ ಇಂದು ಖಾಸಗಿ ಮತ್ತು ಸರಕಾರಿ ಎರಡಕ್ಕೂ ಕೂಡ ನಿತ್ಯ ಬೇಡಿಕೆ ಇದ್ದೇ ಇರಲಿದೆ. ಶಾಲೆ, ಕಚೇರಿ ಕೆಲಸ , ಕ್ಷೇತ್ರ ಪ್ರವಾಸ ಎಂದು ನಿತ್ಯ ಪ್ರಯಾಣ ಮಾಡುವವರ ಸಂಖ್ಯೆ ದಿನನಿತ್ಯ ಅಧಿಕ ಇದ್ದು ನಾವು ಇಂದು ನೀಡುವ ಮಾಹಿತಿ ಸಾರ್ವಜನಿಕರಿಗೆ ಬಹಳ ಅನುಕೂಲ ಆಗುತ್ತದೆ ಎಂದು ಹೇಳಬಹುದು.

WhatsApp Join Now
Telegram Join Now

ಬಸ್ ಬಂದಿಲ್ಲ ಎಂದು ಗಂಟೆ ಗಟ್ಟಲೆ ಕಾಯುವವರನ್ನು ನಾವು ಕಾಣಬಹುದು. ಬಸ್ ಬಂದು ಕೂಡ ರಶ್ ಇದೆ ಎಂದು ಬಸ್ ಹತ್ತುವ ಪ್ರಯಾಣಿಕರ ಸಂಖ್ಯೆ ಒಂದೆರೆಡು ಇದೆ ಎಂದು ಅಲ್ಲಿಯೇ ಬಿಟ್ಟು ಹೋಗುವವರನ್ನು ನಾವು ಕಾಣಬಹುದು. ಹಾಗಾಗಿ ಇನ್ನು ಮುಂದೆ ಪ್ರಯಾಣಿಕರು ಇದ್ದರು ಬಸ್ ಹತ್ತಿಸಿಕೊಳ್ಳದೆ ಬಿಟ್ಟು ಹೋದರೆ ಅಂತವರಿಗೆ ಇಂದು ನಾವು ಇಲ್ಲಿ ನೀಡುವ ಮಾಹಿತಿ ಬಹಳ ಉಪಯುಕ್ತ ಆಗಲಿದೆ ಎಂದು ಹೇಳಬಹುದು.

KSRTC ನಿರ್ಲಕ್ಷ್ಯ:

 

Image Source: Hindustan Times

 

KSRTC ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಸ್ತ್ರೀಯರಿಗೆ ಪ್ರಾಬಲ್ಯ ಹೆಚ್ಚಾಗಿದೆ. ಅನೇಕ ಕಡೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಾರೆ ಎಂದು ಬಸ್ ಸ್ಟಾಪ್ ಗೆ ಸ್ಟಾಪ್ ನೀಡದಿರುವುದನ್ನು ನಾವು ಕಂಡಿದ್ದೇವೆ ಇದೀಗ ಬೆಂಗಳೂರಿನಲ್ಲಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಹಿರಿಯ ನಾಗರಿಕರನ್ನು ಬಸ್ ಹತ್ತಿಸಿಕೊಳ್ಳದೇ ಅಲ್ಲಿಯೇ ಬಿಟ್ಟು ಬಂದ ಪ್ರಕರಣ ತಿಳಿದು ಬಂದಿದ್ದು KSRTC ಗೆ ಬೆಂಗಳೂರಿನ ಗ್ರಾಹಕ ಕೋರ್ಟ್ ಗೆ ದಂಡ ವಿಧಿಸಲಾಗಿದೆ.

advertisement

ಹಾಗಾಗಿ ಬಸ್ ಗಾಗಿ ಕಾಯುವವರನ್ನು ಹತ್ತಿಸಿಕೊಳ್ಳದಿರುವುದು KSRTC ಬಸ್ ಚಾಲಕ ಹಾಗೂ ನಿರ್ವಹಕರ ಹೊಣೆಯಾಗಿದ್ದು ಇಲ್ಲಿ ಅವರು ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಬಿಟ್ಟು‌ಹೋದ ಸ್ಥಳದಿಂದ ಆದ ಖರ್ಚು ಮತ್ತು ಟಿಕೇಟ್ ವೆಚ್ಚ ನೀಡಲು‌ ದಂಡ ಮೊತ್ತ ಹಾಕಿದೆ. ಈ‌ ಪ್ರಕರಣ ತಮಿಳುನಾಡಿನ ವ್ಯಾಪ್ತಿಗೆ ಬಂದಿದ್ದು ಕರ್ನಾಟಕದಲ್ಲೂ ಹೀಗೆ ಮಾಡಿದ್ರೆ ದಂಡ ಕಟ್ಟಿಟ್ಟ ಬುತ್ತಿ ಎನ್ನಬಹುದು.

 

Image Source: ThePrint

 

ಬೆಂಗಳೂರಿನಲ್ಲಿ ಈ ವಿಚಾರಕ್ಕೆ ಕೋರ್ಟ್ ನಿಂದ ಆದೇಶ ಬಂದಿದೆ ಎಂದು ಹೇಳಬಹುದು. ಬೆಂಗಳೂರಿನ ಬನಶಂಕರಿ ಮೂರನೇ ಹಂತದಲ್ಲಿ ಎಸ್. ಸಂಗಮೇಶ್ವರನ್ ಅವರು ತಮಿಳುನಾಡಿನ ತಿರುವಣ್ಣ ಮಲೈಗೆ ಹೋಗಿ ಆ ಬಳಿಕ ಅಲ್ಲಿಂದ ರಿಟರ್ನ್ ಬೆಂಗಳೂರಿಗೆ ಬರಲು ಆನ್ಲೈನ್ ಮೂಲಕ KSRTC ಕ್ಲಬ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ. 2019 ರಲ್ಲಿ ಈ ವ್ಯಕ್ತಿ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಕಾದರು ಕೂಡ ಬಸ್ ಬರಲಿಲ್ಲ ಬಳಿಕ ಕಂಡೆಕ್ಟರ್ ನಂಬರ್ ಗೆ ಕರೆ ಮಾಡಿದರೆ ಬಸ್ ನಿಲ್ದಾಣಕ್ಕೆ ಬರದೆ ಈಗಾಗಲೇ ಬೇರೆ ಕಡೆಯಿಂದ ಪ್ರಯಾಣ ಹೊರಟಿರಿವುದಾಗಿ ತಿಳಿಸಲಾಗಿದೆ. ಹಾಗಾಗಿ ವಯೋವೃದ್ಧ ಬೇರೆ ಬಸ್ ಹತ್ತಿ ಬೆಂಗಳೂರು ಸೇರಿ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ.

KSRTC ಪರ ವಾದ ಮಾಡುವ ವಕೀಲರು ಇದು ತಮಿಳುನಾಡಿನ ವ್ಯಾಪ್ತಿಗೆ ಬಂದಿದ್ದು ಅಲ್ಲಿನ ಸರಕಾರ ಜನಸಂದಣಿ ನಿಯಂತ್ರಣ ಮಾಡುವ ಉದ್ದೇಶದಿಂದ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಬರಲು ಅನುಮತಿಸಿಲ್ಲ ಬದಲಿಗೆ ಹೊರಗಿನಿಂದಲೆ ರಿಟರ್ನಿಂಗ್ ಮಾಡಿದ್ದು KSRTC ಸಿಬಂದಿ ಎಲ್ಲರಿಗೂ SMS ಕಳುಹಿಸಿ ಬಸ್ ನಿಲ್ಲುವ ಜಾಗ ಕೂಡ ತಿಳಿಸಿದ್ದರು ಉಳಿದ ಪ್ರಯಾಣಿಕರು ಅಲ್ಲಿಂದಲೇ ಹತ್ತಿದ್ದಾರೆ. ಈ ಪ್ರಕರಣ ಇಲ್ಲಿನ ವ್ಯಾಪ್ತಿಗೆ ಬರಲಾರದು.ಎಂಬ ಕಾರಣ ವಜಾ ಮಾಡಲು ಕೋರಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಇದಕ್ಕೆ KSRTC ಪರ ಯಾವುದೇ ದಾಖಲಾತಿ ಲಭ್ಯವಿರದೆ ಇರುವ ಕಾರಣಕ್ಕೆ KSRTC ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜನರಲ್ ಮ್ಯಾನೇಜರ್ ಸಂಬಂಧ ಪಟ್ಟ ವ್ಯಕ್ತಿಗೆ ಟಿಕೆಟ್ ಮೊತ್ತ ಹಾಗೂ ಪರ್ಯಾಯ ಬಸ್ ಪ್ರಯಾಣ ದರ ಕೂಡಲೇ ನೀಡಬೇಕು ಹಾಗೂ ಅನಗತ್ಯ ತೊಂದರೆ ಸೃಷ್ಟಿ ಮಾಡಿದ್ದಕ್ಕೆ ಹೆಚ್ಚುವರಿ 1000 ಮೊತ್ತ ನೀಡಬೇಕು ಎಂದು ಬೆಂಗಳೂರು ಹೈಕೋರ್ಟ್ KSRTC ನಿಗಮಕ್ಕೆ ಆದೇಶ ನೀಡಿದೆ.

advertisement

Leave A Reply

Your email address will not be published.