Karnataka Times
Trending Stories, Viral News, Gossips & Everything in Kannada

Income Tax Raid: ಇಂತಹ ಸಂದರ್ಭದಲ್ಲಿ ಯಾರೇ ಆಗಿದ್ದರು ಆತನ ಮೇಲೆ ಇನ್ಕಮ್ ಟ್ಯಾಕ್ಸ್ ರೇಡ್ ಗ್ಯಾರಂಟಿ! ಬಂತು ಹೊಸ ರೂಲ್ಸ್

advertisement

ಇನ್ಕಮ್ ಟ್ಯಾಕ್ಸ್ ರೈಡ್ ಎನ್ನುವಂತಹ ವಿಚಾರದ ಬಗ್ಗೆ ನಾವು ಸಾಮಾನ್ಯವಾಗಿ ಟಿವಿ ಮಾಧ್ಯಮಗಳ ಮೂಲಕ ಸಿನಿಮಾದಲ್ಲಿ ಆಗೋದನ್ನ ನೋಡಿದ್ದೇವೆ ಇಲ್ಲವಾದಲ್ಲಿ ಯಾವುದಾದರೂ ರಾಜಕಾರಣಿ ಅಥವಾ ಮನೆಯ ಮೇಲೆ ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ಆಗಿದೆ ಅನ್ನೋ ವಿಚಾರವನ್ನು ಪೇಪರ್ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನೋಡಿರಬಹುದು. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಯಾವ ಸಂದರ್ಭಗಳಲ್ಲಿ ಈ ರೀತಿ ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ಆಗುತ್ತದೆ ಅನ್ನೋದರ ಬಗ್ಗೆ.

WhatsApp Join Now
Telegram Join Now

ಸಾಮಾನ್ಯವಾಗಿ ಈ ರೀತಿಯ ಇನ್ಕಮ್ ಟ್ಯಾಕ್ಸ್ ರೇಡ್ಡ್ಗಳು ಒಂದು ವೇಳೆ ಯಾರಾದರೂ ಟ್ಯಾಕ್ಸ್ ಕಟ್ಟದೇ ಇರುವಂತಹ ಹಣವನ್ನು ಹೊಂದಿದ್ದರೆ ಅಥವಾ ಬ್ಲಾಕ್ ಮನಿ ಹೊಂದಿದ್ರೆ ಮಾತ್ರ ರೇಡ್ ಮಾಡ್ತಾರೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

 

advertisement

Image Source: iPleaders

 

  • ಮೊದಲಿಗೆ ತೆರಿಗೆ ಕಟ್ಟುವುದರಲ್ಲಿ ವಂಚನೆ ಮಾಡಿದರೆ ಆ ಸಂದರ್ಭದಲ್ಲಿ ಈ ರೀತಿಯ ಕ್ರಮಗಳನ್ನು ಆದಾಯ ತೆರಿಗೆ ಇಲಾಖೆಯಿಂದ ಕೈಗೊಳ್ಳಲಾಗುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಇದನ್ನ ಮೊದಲಿಗೆ ಬೇರೆ ಬೇರೆ ಗವರ್ನಮೆಂಟ್ ಏಜೆನ್ಸಿಗಳ ಮುಖಾಂತರ ಹಾಗೂ ಫೈನಾನ್ಸಿಯಲ್ ಸಂಸ್ಥೆಗಳ ಮುಖಾಂತರ ಅಧ್ಯಯನ ಮಾಡಿ ನಂತರವಷ್ಟೇ ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ಮಾಡುತ್ತಾರೆ.
  • ಕೆಲವರು ತಮ್ಮ ಆಸ್ತಿ ಇಂತಿಷ್ಟು ಎಂಬುದಾಗಿ ಡಿಕ್ಲೇರ್ ಮಾಡಿಕೊಂಡಿರುತ್ತಾರೆ ಆದರೆ ಅದಕ್ಕಿಂತಲೂ ಹೆಚ್ಚಿನ ಖರ್ಚನ್ನು ಹಾಗೂ ಜೀವನವನ್ನು ನಡೆಸುತ್ತಿದ್ದರೆ ಅದರ ಬಗ್ಗೆ ಕೂಡ ಒಂದು ವೇಳೆ ಸಂಸ್ಥೆಗೆ ಅನುಮಾನ ಬಂದು ತನಿಖೆ ನಡೆಸಿದ ನಂತರ ಅವರ ವಿರುದ್ಧ ಸಾಕ್ಷಾಧಾರಗಳು ಲಭಿಸಿದರೆ ಆ ಸಂದರ್ಭದಲ್ಲಿ ಕೂಡ ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ.
  • ಇನ್ನು ಒಂದು ವೇಳೆ ಅನಿರೀಕ್ಷಿತವಾಗಿ ಒಬ್ಬ ವ್ಯಕ್ತಿ ದೊಡ್ಡಮಟ್ಟದ ಹಣದ ಟ್ರಾನ್ಸಾಕ್ಷನ್ ಅನ್ನು ಮಾಡಿದ್ರೆ ಅಥವಾ ಅದನ್ನ ಆತ ಸರಿಯಾದ ರೀತಿಯಲ್ಲಿ ವಿವರಿಸಲು ಸಾಧ್ಯವಾಗದೆ ಹೋದಲ್ಲಿ ಇಂತಹ ಟ್ರಾನ್ಸಾಕ್ಷನ್ ಗಳು ಕೂಡ ಆದಾಯ ಇಲಾಖೆಯ ಮುಂಭಾಗಕ್ಕೆ ಬರುತ್ತದೆ ಹಾಗೂ ಇದನ್ನು ತನಿಖೆ ನಡೆಸಿದ ನಂತರ ಅಲ್ಲಿ ಲೋಪದೋಷಗಳು ಕಂಡು ಬಂದರೆ ಕೂಡಲೇ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರು ರೇಡ್ ಮಾಡುತ್ತಾರೆ.
  • ಕೆಲವೊಮ್ಮೆ ಬೇರೆ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಸಂದರ್ಭದಲ್ಲಿ ಯಾರಾದರೂ ಅದರಲ್ಲಿ ಆರ್ಥಿಕವಾಗಿ ಅನಧಿಕೃತವಾಗಿ ನಡೆದುಕೊಂಡಿದ್ದರೆ ಆ ಸಂದರ್ಭದಲ್ಲಿ ಕೂಡ ಅಂಥವರ ಮೇಲೆ ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ನಡೆಯುತ್ತದೆ ಅನ್ನೋದನ್ನ ಕೂಡ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇನ್ಕಮ್ ಟ್ಯಾಕ್ಸ್ ರೇಡ್ (Income Tax Raid) ಅನ್ನು ಇನ್ಕಮ್ ಟ್ಯಾಕ್ಸ್ ಆಕ್ಟ್ 1961ರ ಪ್ರಕಾರ ಮಾಡಲಾಗುತ್ತದೆ. ಯಾವುದೇ ಸರಿಯಾದ ಸಬೂತು ಇಲ್ಲದೆ ಯಾವುದೇ ಕಾರಣಕ್ಕೂ ಕೂಡ ಇನ್ಕಮ್ ಟ್ಯಾಕ್ಸ್ ಇಲಾಖೆಯ ಅಧಿಕಾರಿಗಳು ರೇಡ್ ಮಾಡುವುದಿಲ್ಲ. ಸಾಕಷ್ಟು ಸಮಯಗಳ ಕಾಲ ಹೋಂವರ್ಕ್ ನಡೆಸಿಕೊಂಡೆ ಅವರು ರೇಡ್ ಮಾಡುತ್ತಾರೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.