Karnataka Times
Trending Stories, Viral News, Gossips & Everything in Kannada

KSRTC: ಬಸ್ ಹತ್ತುವ ಪುರುಷರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ! ದೇಶದಲ್ಲೇ ಮೊದಲು

advertisement

ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆ ಆಗಿರುವಂತಹ ಕೆಎಸ್ಆರ್ಟಿಸಿ ಸಾಕಷ್ಟು ಮೊದಲುಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಬಹುದಾಗಿದೆ. ಕೆಲವು ಸಮಯಗಳ ಹಿಂದೆ ಅಷ್ಟೇ ಉತ್ತರ ಪ್ರದೇಶದ ಸಾರಿಗೆ ನಿಗಮದ ಅಧಿಕಾರಿಗಳು ಕೂಡ ಇಲ್ಲಿಗೆ ಬಂದು ಅಧ್ಯಯನ ಮಾಡಿಕೊಂಡು ಹೋಗಿದ್ದರು ಅಂದ್ರೆ ನಮ್ಮ ಸಾರಿಗೆ ಸಂಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡ್ತಾ ಇದೆ ಅನ್ನೋದನ್ನ ನೀವೇ ಅಂದಾಜು ಮಾಡಿಕೊಳ್ಳಬಹುದಾಗಿದೆ.

WhatsApp Join Now
Telegram Join Now

ಉಚಿತ ಬಸ್ ಪ್ರಯಾಣವನ್ನು (Free Bus Travel) ಮಹಿಳಾ ಪ್ರಯಾಣಿಕರಿಗೆ ಜಾರಿಗೆ ತಂದ ನಂತರ ಕೂಡ ಕೆಎಸ್ಆರ್ಟಿಸಿ (KSRTC) ನಿಗಮ ಸಲೀಸಾಗಿ ಕಾರ್ಯನಿರ್ವಹಿಸಿಕೊಂಡು ಹೋಗ್ತಾ ಇದೆ ಅಂದ್ರೆ ನಿಜಕ್ಕೂ ಕೂಡ ನಮ್ಮ ಕೆಎಸ್ಆರ್ಟಿಸಿಯ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರಿಗೆ ಮೆಚ್ಚುಗೆಯನ್ನು ನಾವು ಸೂಚಿಸಲೇಬೇಕಾಗುತ್ತದೆ.

ಮಹಿಳೆಯರಿಗೆ ಮಾತ್ರ ಅಲ್ಲ ಪುರುಷರಿಗೂ ಗುಡ್ ನ್ಯೂಸ್ ನೀಡಿದ ಕೆಎಸ್ಆರ್ಟಿಸಿ:

 

Image Source: Deccan Herald

 

advertisement

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಬಸ್ಸುಗಳಲ್ಲಿ ನೀಡಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ ಆದರೆ ಈಗ ಇಡೀ ದೇಶದಲ್ಲಿ ಮೊದಲ ಬಾರಿಗೆ ಕೆಎಸ್ಆರ್ಟಿಸಿ ನಿಗಮ ಪುರುಷರಿಗೂ ಕೂಡ 50 ಪ್ರತಿಶತ ಸೀಟ್ ಅನ್ನು ಬಸ್ಗಳಲ್ಲಿ ಮೀಸಲಿರಿಸಬೇಕು ಎನ್ನುವಂತಹ ಫಲಕವನ್ನು ಹಾಕುವಂತಹ ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.

ಈ ನಿಯಮವನ್ನ ಜಾರಿಗೆ ತರುವುದರ ಹಿಂದಿನ ಕಾರಣ ಕೂಡ ನಿಮ್ಮೆಲ್ಲರಿಗೂ ತಿಳಿದಿದೆ. ಈಗಾಗಲೇ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಮಹಿಳೆಯರಿಗೆ ನೀಡಿರುವ ಕಾರಣದಿಂದಾಗಿ ಪುರುಷರಿಗೆ ಸೀಟಿಂಗ್ ವ್ಯವಸ್ಥೆ ಇಲ್ಲ ಎನ್ನುವ ನಿಟ್ಟಿನಲ್ಲಿಯೇ ಈ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಲಾಗಿದೆ. ಇದು ಕೇವಲ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಾತ್ರ ಬಿ ಎಂ ಟಿ ಸಿ (BMTC) ಬಸ್ಸುಗಳಲ್ಲಿ ಅಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

 

Image Source: Deccan Herald

 

ಮಹಿಳೆಯರಷ್ಟೇ ಪುರುಷರಿಗೂ ಕೂಡ ಸೀಟಿನ ವ್ಯವಸ್ಥೆ ಸಮಾನವಾಗಿ ಬಸ್ಸಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ ಆದರೆ ಒಂದು ವೇಳೆ ಪುರುಷರು ಬಾರದೆ ಇದ್ದಲ್ಲಿ ಪುರುಷರ ಸೀಟ್ನಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳುವಂತಹ ಅವಕಾಶವನ್ನ ನೀಡಲಾಗುತ್ತದೆ. ಮಹಿಳೆಯರಿಗೆ ಸಾಮಾನ್ಯವಾಗಿ ಬಸ್ಸುಗಳ 30% ಆಸನದ ವ್ಯವಸ್ಥೆಯನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.

ಇರುವಂತಹ 49 ಸೀಟ್ಗಳಲ್ಲಿ 14 ಸೀಟ್ ಗಳನ್ನ ಮಹಿಳೆಯರಿಗೆ ಹಾಗೂ ವಿಕಲಾಂಗಡಿಗೆ ಮತ್ತು ಹಿರಿಯ ನಾಗರಿಕರಿಗೆ ತಲಾ ಮೂರು ಮೂರು ಸೀಟ್ ಗಳನ್ನ ಮೀಸಲಿರಿಸಲಾಗಿದೆ ಅನ್ನೋದನ್ನ ಕೂಡ ನೀವು ಈ ನಿಯಮಗಳಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಈ ಮೂಲಕ ಮಹಿಳೆಯರಷ್ಟೇ ಪುರುಷರಿಗೂ ಕೂಡ ಬಸ್ ಪ್ರಯಾಣದಲ್ಲಿ ಕನಿಷ್ಠಪಕ್ಷ ಸೀಟಿಂಗ್ ವ್ಯವಸ್ಥೆಯಲ್ಲಿ ಸಮಾನತೆ ಸಿಕ್ತಾ ಇದೆ ಅನ್ನೋದು ಸಂತೋಷ ಪಡಬೇಕಾಗಿರುವ ವಿಚಾರ ಎನ್ನುವುದಾಗಿ ಪುರುಷರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.