Karnataka Times
Trending Stories, Viral News, Gossips & Everything in Kannada

Pension: ಸರ್ಕಾರದಿಂದ ಪ್ರತಿ ತಿಂಗಳು ಸಿಗುತ್ತೆ 3000 ಪಿಂಚಣಿ; ಯಾರಿಗೆ ಈ ಯೋಜನೆ ಅಪ್ಲೈ ಆಗುತ್ತೆ ಗೊತ್ತಾ?

advertisement

ನಮ್ಮ ದೇಶದಲ್ಲಿ ಬೇರೆ ಬೇರೆ ವರ್ಗದಲ್ಲಿ ಬೇರೆ ಬೇರೆ ರೀತಿಯ ಕೆಲಸ ಮಾಡುವ ಕೋಟ್ಯಾಂತರ ಜನರಿದ್ದಾರೆ. ಕೆಲವರು ಕಂಪನಿ ಕೆಲಸಗಳಲ್ಲಿ ನಿರತರಾಗಿದ್ದರೆ ಇನ್ನೂ ಕೆಲವರು ತಮ್ಮದೇ ಆಗಿರುವ ಸ್ವಂತ ಉದ್ಯಮ ಮಾಡುತ್ತಿದ್ದಾರೆ. ಆದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಮಾತ್ರ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಕೂಲಿಕಾರ್ಮಿಕರು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಸಾಧಿಸಬೇಕು ಅದರಲ್ಲೂ ಪ್ರತಿದಿನದ ದುಡಿಮೆಯನ್ನು ನಂಬಿಕೊಂಡು ಇರುವ ಕೂಲಿ ಕಾರ್ಮಿಕರಿಗೆ ಭವಿಷ್ಯದ ಭದ್ರತೆ ಇರುವುದಿಲ್ಲ. ತಮಗೆ ಶಿಕ್ಷಣವಿಲ್ಲ ತಮ್ಮ ಮಕ್ಕಳಾದರೂ ಶಿಕ್ಷಣವಂತರಾಗಬೇಕು ಎಂದು ಅವರು ಬಯಸಿದರು ಕೂಡ ಮಕ್ಕಳ ಶಿಕ್ಷಣ ಹಾಗೂ ಮದುವೆ ಮೊದಲಾದ ವಿಷಯಗಳಿಗೆ ಹಣಕಾಸಿನ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ.

ಈ ಕಾರಣಕ್ಕಾಗಿ ಅಸಂಘಟಿತ ವಲಯದಲ್ಲಿಯೂ ಕೆಲಸ ಮಾಡುವವರಿಗಾಗಿ ಸರ್ಕಾರ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ಒಂದು ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ (PM Shram Yogi Mandhan Yojana). ಈ ಯೋಜನೆಯ ಮೂಲಕ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗದವರಿಗೆ ಕೇಂದ್ರ ಸರ್ಕಾರ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

PM Shram Yogi Mandhan Yojana:

 

 

ಸರ್ಕಾರದ ಈ ಯೋಜನೆಯ ಅಡಿಯಲ್ಲಿ 18ರಿಂದ 40 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಿ ಆರ್ಥಿಕ ಸಹಾಯವನ್ನು ಪಡೆಯಬಹುದು. ಆರಂಭದಿಂದಲೇ ಸ್ವಲ್ಪ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ 60 ವರ್ಷದ ವಯಸ್ಸಿನಲ್ಲಿ ಪ್ರತಿ ತಿಂಗಳು ಸರ್ಕಾರ ರೂ. 3000 ಪಿಂಚಣಿ (Pension) ಯನ್ನು ನೀಡುತ್ತದೆ.

ಎಷ್ಟು ಹೂಡಿಕೆ ಮಾಡಬೇಕು?

advertisement

ಸಣ್ಣ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ ನೀವು ಅತಿ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಬಹುದು. ಉದಾಹರಣೆಗೆ 18 ವರ್ಷದಲ್ಲಿ ಹೂಡಿಕೆ ಆರಂಭಿಸಿದರೆ, ಪ್ರತಿ ತಿಂಗಳು ಕೇವಲ 55 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು. ಅದೇ 40 ವರ್ಷ ವಯಸ್ಸಿನವರು ಪ್ರತಿ ತಿಂಗಳು 200 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಇಷ್ಟು ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಿನಲ್ಲಿ ಸರ್ಕಾರ ಮೂರು ಸಾವಿರ ರೂಪಾಯಿಗಳನ್ನು ಪಿಂಚಣಿ (Pension) ಯಾಗಿ ಜೀವಮಾನದ ಪರ್ಯಂತ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನಮಂತ್ರಿ ಶ್ರಮ ಯೋಗಿ ಮನು ಧನ್ ಯೋಜನೆ (PM Shram Yogi Mandhan Yojana) ಗೆ ಅರ್ಜಿ ಸಲ್ಲಿಸಲು ಬಯಸುವ ಕೂಲಿ ಕಾರ್ಮಿಕರು https://maandhan.in ನೇರ ಪ್ರತಿ ಸರ್ಕಾರದ ಈ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವೆಬ್ ಸೈಟ್ ಕ್ಲಿಕ್ ಮಾಡಿ ನಂತರ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • Labor Card
  • Aadhaar Card
  • Passport Size Photo
  • Income Certificate
  • Mobile Number
  • Address Proof
  • Identity Card

ಇಷ್ಟು ದಾಖಲೆಗಳನ್ನು ಸಲ್ಲಿಸಿ ಪ್ರಧಾನಮಂತ್ರಿ ಶ್ರಮ ಯೋಗಿ ಯೋಜನೆಯಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.