Karnataka Times
Trending Stories, Viral News, Gossips & Everything in Kannada

Railway Insurance: ರೈಲ್ವೆ ಪ್ರಯಾಣಿಕರಿಗೆ 10 ಲಕ್ಷ ರೂಪಾಯಿ ವಿಮಾ ಸೌಲಭ್ಯ, ಟಿಕೆಟ್ ಬುಕಿಂಗ್ ವೇಳೆ ಹೀಗೆ ಮಾಡಿ!

advertisement

ಭಾರತೀಯ ರೈಲ್ವೇ ವಿಶ್ವದ ಅತಿದೊಡ್ಡ ಸಾರ್ವಜನಿಕ ಸಾರಿಗೆಗಳಲ್ಲಿ ಒಂದಾಗಿದ್ದು, ಅಗ್ಗದ ಸಾರಿಗೆ (Cheaptest Transport) ಯಲ್ಲಿ ಈ ರೈಲ್ವೆ ಒಂದಾಗಿದೆ. ಹೀಗಾಗಿ ದೇಶದಲ್ಲಿ ಲಕ್ಷಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಅವಲಂಬಿಸಿಕೊಂಡಿರುತ್ತಾರೆ. ಅಗ್ಗದ ಪ್ರಯಾಣದ ಒಂದೆಡೆಯಾದರೆ, ಮತ್ತೊಂದೆಡೆ ರೈಲ್ವೆ ತನ್ನ ಪ್ರಯಾಣಿಕರಿಗಾಗಿ ರೈಲ್ವೇ ಟ್ರಾವೆಲ್ ಇನ್ಶೂರೆನ್ಸ್ (Railway Travel Insurance) ಹೆಸರಿನಲ್ಲಿ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಈ ಬಗ್ಗೆ ಅಷ್ಟಾಗಿ ಎಲ್ಲರಿಗೂ ಕೂಡ ಮಾಹಿತಿಯಿಲ್ಲ. ಅದಲ್ಲದೇ ಈ ಸೌಲಭ್ಯವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿಲ್ಲ. ಹಾಗಾದ್ರೆ ಈ ರೈಲ್ವೇಸ್ ಟ್ರಾವೆಲ್ ಇನ್ಶೂರೆನ್ಸ್ ಹೆಸರಿನಲ್ಲಿರುವ ವಿಮಾ (Insurance) ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

35 ಪೈಸೆ ಪ್ರೀಮಿಯಂಗೆ ರೈಲ್ವೆ ವಿಮೆ ಸೌಲಭ್ಯ:

ರೈಲು ಅಪಘಾತ (Railway Accident) ದ ಸಂದರ್ಭದಲ್ಲಿ, ಪ್ರಯಾಣಿಕರು ವಿಮಾ (Railway Insurance) ಕಂಪನಿಯಿಂದ ಪರಿಹಾರವನ್ನು ಪಡೆಯಲು ಸಾಧ್ಯವಾಗಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಿದಾಗ, ವೆಬ್‌ಸೈಟ್‌ನಲ್ಲಿ ರೈಲ್ವೆ ಪ್ರಯಾಣ ವಿಮೆ ಆಯ್ಕೆಯು ಲಭ್ಯವಿದೆ. ಈ ವಿಮೆಯ ಪ್ರೀಮಿಯಂ ಮೊತ್ತವು 35 ಪೈಸೆ ಮಾತ್ರವಾಗಿದ್ದು, ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಇಲ್ಲಿ ಮುಖ್ಯವಾಗಿ ರೈಲು ಟಿಕೆಟ್ ದರಕ್ಕೆ ವಿಮಾ ಹಣವನ್ನು ಸೇರಿಸಲಾಗುತ್ತದೆ.

 

advertisement

 

ವಿಮಾ ಆಯ್ಕೆಯನ್ನು ಆಯ್ಕೆ ಮಾಡಿ ಟಿಕೆಟ್ ಬುಕ್ (Ticket Book) ಮಾಡಿದ ಬಳಿಕ ಇ-ಮೇಲ್ ಐಡಿ (Email ID) ಮತ್ತು ಮೊಬೈಲ್ ಸಂಖ್ಯೆ (Mobile Number) ಗೆ ವಿಮಾ ಕಂಪನಿಯಿಂದ ಲಿಂಕ್ ಬರುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ ಮತ್ತು ನಾಮಿನಿ (Nominee) ವಿವರಗಳನ್ನು ಸೇರಿಸಬೇಕು. ವಿಮಾ ಪಾಲಿಸಿಯಲ್ಲಿ ನಾಮಿನಿ ಇದ್ದರೆ ಮಾತ್ರ ವಿಮಾ ಕ್ಲೈಮ್ (Insurance Claim) ಸಾಧ್ಯವಾಗಿದೆ. ಹೀಗಾಗಿ ವಿಮಾ ಕಂಪನಿಗೆ ವಿಮಾ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ವಿಮೆಯಲ್ಲಿ ವಿಮಾದಾರನಿಗೆ ಸಿಗುವ ಮೊತ್ತವೆಷ್ಟು?

ರೈಲ್ವೇ ಪ್ರಯಾಣಿಕರು ರೈಲು ಅಪಘಾತದಲ್ಲಿ ಮೃತಪಟ್ಟರೆ ವಿಮೆ ಕಂಪೆನಿಯು ನಾಮಿನಿಗೆ 10 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. ಮೃತ ರೈಲು ಪ್ರಯಾಣಿಕರ ದೇಹವನ್ನು ಸ್ಥಳಾಂತರಿಸಲು ಹೆಚ್ಚುವರಿ ಮೊತ್ತ 10,000 ರೂಪಾಯಿ ಸಿಗುತ್ತದೆ. ವಿಮೆ ಹೊಂದಿದವನು ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಹೊಂದಿದರೆ ರೂ.10 ಲಕ್ಷ ಪಡೆಯಬಹುದು. ಸ್ವಲ್ಪ ಮಟ್ಟಿಗಿನ ಅಂಗವೈಕಲ್ಯ ಹೊಂದಿದರೆ 7.5 ಲಕ್ಷ ರೂಪಾಯಿ ಸಿಗುತ್ತದೆ. ರೈಲ್ವೆ ಪ್ರಯಾಣಿಕರು ಗಾಯಗೊಂಡರೆ ಆಸ್ಪತ್ರೆ ವೆಚ್ಚವನ್ನು ಭರಿಸಲು 2 ಲಕ್ಷ ರೂಪಾಯಿ ಸಿಗುತ್ತದೆ. ಈ ವಿಮೆಯನ್ನು ರೈಲು ಅಪಘಾತವಾದ 4 ತಿಂಗಳೊಳಗೆ ಕ್ಲೈಮ್ ಮಾಡಲು ಸಾಧ್ಯ.

advertisement

Leave A Reply

Your email address will not be published.