Karnataka Times
Trending Stories, Viral News, Gossips & Everything in Kannada

Gruhalakshmi-Annabhagya Scheme: ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡಿಸದಿದ್ದರೆ ಗೃಹಲಕ್ಷ್ಮೀ, ಅನ್ನಭಾಗ್ಯ ಎರಡು ಯೋಜನೆ ಸಿಗಲಾರದು

advertisement

ರಾಜ್ಯದಲ್ಲಿ ಪಡಿತರ ವಿತರಣೆಗೆ ಅಗತ್ಯವಾಗಿ ರೇಶನ್ ಕಾರ್ಡ್ (Ration Card) ಬೇಕೆ ಬೇಕು. ಸರಕಾರದಿಂದ ಲಭ್ಯ ಆಗುವ ಆಹಾರ ಸಾಮಾಗ್ರಿ ಹೊರತು ಪಡಿಸಿ ಉಳಿದ ಸರಕಾರಿ ಸೌಲಭ್ಯಕ್ಕೆ ಅರ್ಹರಾಗಲು ಕೂಡ ಇಂದು ಪ್ರತೀ ಹಂತದಲ್ಲಿ ರೇಶನ್ ಕಾರ್ಡ್ ಅನ್ನು ಕೇಳಲಾಗುತ್ತಿದೆ. ಕರ್ನಾಟಕದಲ್ಲಿ ರೇಶನ್ ಕಾರ್ಡ್ ಹೊಂದಿದ್ದವರಿಗೆ ಮಾತ್ರವೇ ಮನೆ ಹಿರಿಯ ಮಹಿಳೆಗೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣಕಾಸು ಸೌಲಭ್ಯ ಸಿಗುತ್ತಿದ್ದು ಈ ಒಂದು ಕೆಲಸವನ್ನು ನೀವು ಮಾಡದೇ ಹೋದರೆ ಬರುವ ಹಣ ಕೂಡ ನಿಲ್ಲುವ ಸಾಧ್ಯತೆ ಇದೆ.

ಸರಕಾರಿ ಸೌಲಭ್ಯ

ರೇಶನ್ ಕಾರ್ಡ್ ಅನ್ನು ಬಡತನದ ಆಧಾರದ ಮೇಲೆ ವಿಭಾಗಿಸಲಾಗುತ್ತಿದ್ದು APL, BPL, ಅಂತ್ಯೋದಯ ಎಂದು ವಿಭಾಗ ಮಾಡಲಾಗಿದ್ದು ಇದರ ಕಾರ್ಡ್ ಆಧಾರ ಮೇಲೆ ಸೇವೆ ಸಹ ಸಿಗಲಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಸರಕಾರಿ ಸೌಲಭ್ಯಗಳು ಸಿಗಲು ಬಿಪಿಎಲ್ ಕಾರ್ಡ್ (BPL Card) ಸಾಕಷ್ಟು ಸಹಕಾರಿ ಆಗಿದ್ದು ಸರಕಾರದ ಅನೇಕ ಯೋಜನೆ ಪ್ರಯೋಜನ ಪಡೆಯಲು ರೇಶನ್ ಕಾರ್ಡ್ ಅಗತ್ಯ ದಾಖಲೆಯಲ್ಲಿ ಒಂದು ಎಂಬ ಸ್ಥಾನ ಪಡೆದಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅತ್ಯವಶ್ಯಕವಾಗಿದೆ.

advertisement

e-KYC ಕಡ್ಡಾಯ

e-KYC ಎನ್ನುವುದು ನಮ್ಮ ಗ್ರಾಹಕರನ್ನು ಯಾರೆಂದು ತಿಳಿಸುವ ವಿಧಾನ ಆಗಿದ್ದು (Know Your Customer) ಎಂದು ತಿಳಿಸಲಾಗುತ್ತದೆ. ರೇಶನ್ ಕಾರ್ಡ್ ನಲ್ಲಿದ್ದರೆ ಅಕ್ರಮಗಳ ತಡೆಗೆ ಇದೊಂದು ಉಪಯುಕ್ತವಾಗಿದೆ.
ಇಂದು ಆರ್ಥಿಕ , ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಎಂಬ ಹಲವು ಆಯಾಮದಿಂದ ರೇಶನ್ ಕಾರ್ಡ್ ಬಹಳ ಉಪಯುಕ್ತ ಸಾಧನವಾಗುತ್ತಿದ್ದು ಕಾರ್ಡ್ ಹೊಂದಿರದೇ ಇದ್ದವರು ಅರ್ಜಿ ಹಾಕಿ ಹೇಗಾದರೂ ಒಂದು ಕಾರ್ಡ್ ಮಾಡಿಕೊಳ್ಳಬೇಕೆಂದು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಕಾರ್ಡ್ ಹೊಂದಿರುವವರು ಕೆಲ ನಿರ್ಲಕ್ಷ್ಯ ಧೋರಣೆ ತಾಳಿ ಅನೇಕ ಇಕ್ಕಟ್ಟಿಗೆ ಸಿಲುಕುವ ಉದಾಹರಣೆ ಸಹ ಕಾಣ ಬಹುದು. ರೇಶನ್ ಕಾರ್ಡ್ ಹೊಂದಿರುವರು ಕಡ್ಡಾಯವಾಗಿ EKYC ಮಾಡಿಸಬೇಕು ಎಂಬ ನಿಯಮ ಇದ್ದು ಮಾಡಿಸದೇ ಇದ್ದವರು ಸರಕಾರಿ ಯೋಜನೆಯಿಂದ ಹೊರಗುಳಿಯಲಿದ್ದಾರೆ.

ಕೊನೆಯ ದಿನಾಂಕ

ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಆಗ ಪಡಿತರ ಕಾರ್ಡ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ಆಗ ರೇಶನ್ ಕಾರ್ಡ್ ಪಟ್ಟಿಯಿಂದ ನಿಮ್ಮ ರೇಶನ್ ಕಾರ್ಡ್ ಹೊರಗೆ ಉಳಿಯಲಿದ್ದು ನಿಮಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ಡಿಸೆಂಬರ್ 31ರ ಒಳಗಾಗಿ ನೀವು e-KYC ಮಾಡಿಸದೇ ಇದ್ದಲ್ಲಿ ಗೃಹಲಕ್ಷ್ಮೀ ಹಾಗೂ ಅನ್ನ ಭಾಗ್ಯ ಯೋಜನೆಗೆ (Gruhalakshmi-Annabhagya Scheme) ತೊಡಕಾಗುವ ಸಾಧ್ಯತೆ ಇದೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ (Gruhalakshmi) ಯೋಜನೆ ಫಲಾನುಭವಿಗಳಲ್ಲದಿದ್ದರೂ e-KYC ಮಾಡಿಸುವುದು ಕಡ್ಡಾಯವೇ ಆಗಿದೆ.

advertisement

Leave A Reply

Your email address will not be published.