Karnataka Times
Trending Stories, Viral News, Gossips & Everything in Kannada

Senior Citizen: ಈ ಬಾರಿಯ ಬಜೆಟ್‌ ಮೂಲಕ ಹಿರಿಯ ನಾಗರಿಕರಿಗೆ ಸಿಗಲಿದೆ ಗುಡ್ ನ್ಯೂಸ್, ಈ ಘೋಷಣೆ ಸಾಧ್ಯತೆ ಹೆಚ್ಚು!

advertisement

ವ್ಯಕ್ತಿಯ ಕೆಲಸದ ನಿವೃತ್ತಿಯ ನಂತರ ಅವರ ಅಗತ್ಯಗಳನ್ನು ಪೂರೈಸಲು NPS Scheme ಯನ್ನು ವಿಶೇಷವಾಗಿ ಜಾರಿಗೆ ತರಲಾಗಿದೆ. ನಿವೃತ್ತಿಯ ನಂತರ, ನಿಮ್ಮ ಕುಟುಂಬದ ಅಗತ್ಯತೆಗಳು ಮತ್ತು ವೆಚ್ಚಗಳನ್ನು ನಿರ್ವಹಿಸಲು ನೀವು ಈ ಯೋಜನೆಯಡಿ ಉಳಿತಾಯ ಮಾಡಬಹುದು. ಇದೀಗ ರಾಷ್ಟ್ರೀಯ Pension ವ್ಯವಸ್ಥೆಗೆ ಜನರನ್ನು ಆಕರ್ಷಿತರನ್ನಾಗಿ ಮಾಡಲು ಕೇಂದ್ರ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮ ಗಳನ್ನು ಜಾರಿಗೆ ತರುತ್ತಲೆ ಬಂದಿದೆ.‌ ಅದೇ ರೀತಿ ಈ ಬಾರಿಯ ಬಜೆಟ್ ಘೋಷಣೆ ಯಲ್ಲೂ ಹಿರಿಯ ನಾಗರಿಕರಿಗೆ (Senior Citizen) ಗುಡ್ ನ್ಯೂಸ್ ಸಿಗಲಿದೆ.

 

 

ತೆರಿಗೆ ರಿಯಾಯಿತಿ:

ಈ ವಿಚಾರವಾಗಿ ಇದೀಗ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಂದ (Senior Citizen) ಜಮಾ ಮಾಡ್ತಾ ಇರುವ ಮತ್ತು ಹಿಂಪಡೆಯುವ ಮೊತ್ತಗಳಿಗೆ ತೆರಿಗೆ ರಿಯಾಯಿತಿ ವಿಸ್ತರಣೆ ಮಾಡುವ ಅವಕಾಶ ‌ನೀಡಲಾಗುತ್ತದೆ ಎನ್ನಲಾಗಿದೆ.ಈ ಬಗ್ಗೆ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಪ್ರಸ್ತುತ ಪಡಿಸಲಿರುವ ಮಧ್ಯಂತರ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

advertisement

ಹೊಸ ರೂಪುರೇಷೆ:

ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಮೂಲಕ‌ ಹಿರಿಯ ನಾಗರಿಕರಿಗೆ (Senior Citizen) ಸಾಕಷ್ಟು ಸಹಾಯಕವಾಗಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ಮಾಡುತ್ತದೆ.‌ ಕೆಲವು ತಜ್ಞರ ಪ್ರಕಾರ ಈ ಬಾರಿಯ ಬಜೆಟ್ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಇನ್ನಷ್ಟು ನೆರವಾಗುವಂತೆ ಕೆಲವೊಂದು ಹೊಸ ರೂಪು ರೇಷೆಗಳನ್ನು ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ NPS ಮೂಲಕ ದೀರ್ಘಾವಧಿಯ ಉಳಿತಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ತೆರಿಗೆ ಹೊರೆಗಳನ್ನು ನಿವಾರಿಸಲು ಡೆಲಾಯ್ಟ್ ಇಂಡಿಯಾ ಸೂಚನೆ ಕೂಡ ನೀಡಿದೆ.

ಪಿಂಚಣಿ ಪ್ರಯೋಜನ ಹೆಚ್ಚಳ:

ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಹಣಕಾಸಿನ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಪಿಂಚಣಿ (Pension) ಪ್ರಯೋಜನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಈ ರೀತಿಯ ಬದಲಾವಣೆ ಕೈಗೊಳ್ಳಬಹುದು ಎನ್ನಲಾಗಿದೆ

advertisement

Leave A Reply

Your email address will not be published.