Karnataka Times
Trending Stories, Viral News, Gossips & Everything in Kannada

SBI Annuity Deposit Scheme: ಎಸ್ ಬಿ ಐ ಬ್ಯಾಂಕ್ ನ ವಿಶೇಷ ಯೋಜನೆ, ಕನಿಷ್ಠ ಮೊತ್ತದ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿರಿ!

advertisement

ಇಂದು ಮುಂದಿನ ದಿನದ ಬದುಕಿಗಾಗಿ ಹೂಡಿಕೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಸ್ವಲ್ಪವಾದರೂ ಹೂಡಿಕೆ ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರನ್ನು ಸೆಳೆಯಲು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವರ್ಷಾಶನ ಠೇವಣಿ ಯೋಜನೆಯನ್ನು ಆರಂಭ ಮಾಡಿದ್ದು ಈ ಯೋಜನೆ‌ ಬಹಳಷ್ಟು ಸಹಕಾರಿ ಯಾಗಲಿದೆ.

ವರ್ಷಾಶನ ಠೇವಣಿ ಯೋಜನೆ:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವರ್ಷಾಶನ ಠೇವಣಿ ಯೋಜನೆಯನ್ನು ಆರಂಭ ಮಾಡಿದ್ದು ಈ ಯೋಜನೆ‌ ಬಹಳಷ್ಟು ಸಹಕಾರಿ ಯಾಗಲಿದೆ. ಈ ಯೋಜನೆಯ ಮೂಲಕ, ಯಾವುದೇ ವ್ಯಕ್ತಿಯು ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಗಳಿಸಲು ‌ಇಲ್ಲಿ ಅವಕಾಶ ಇದೆ.‌ ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆ (SBI Annuity Deposit Scheme) ಯಲ್ಲಿ, ನೀವು ಗರಿಷ್ಟ ಮೊತ್ತವನ್ನು ಹೂಡಿಕೆ ಮಾಡಬೇಕು. ಇದು ಠೇವಣಿದಾರರಿಗೆ ಪ್ರತಿ ತಿಂಗಳು ಅಸಲು ಮೊತ್ತದ ಒಂದು ಭಾಗದೊಂದಿಗೆ ಬಡ್ಡಿಯನ್ನು ನೀಡುತ್ತದೆ. ವರ್ಷಾಶನ ಠೇವಣಿ ಯೋಜನೆಯಲ್ಲಿ, ಹಣವನ್ನು 36, 60, 84 ಅಥವಾ 120 ತಿಂಗಳುಗಳಿಗೆ ಠೇವಣಿ ಮಾಡಲಾಗುತ್ತದೆ, ನೀವು ಮೊತ್ತವನ್ನು ಠೇವಣಿ ಮಾಡಿದ ಅವಧಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬಡ್ಡಿ ದರವು ಅನ್ವಯಿಸುತ್ತದೆಯೋ, ಅದೇ ವರ್ಷಾಶನ ಠೇವಣಿ ಯೋಜನೆಯಲ್ಲಿ ಅನ್ವಯವಾಗುತ್ತದೆ.‌

advertisement

ಎಷ್ಡು ವರ್ಷದ ವರೆಗೆ ಹೂಡಿಕೆ ಮಾಡಬಹುದು:

ನೀವು 3 ವರ್ಷದಿಂದ 10 ವರ್ಷದ ವರೆಗೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಅವಕಾಶ ಇದ್ದು ಇದರಲ್ಲಿ ಕನಿಷ್ಠ 25,000 ರೂ.ಗಳಿಂದ ಆರಂಭವಾಗಿ ನಿಮಗೆ ಬೇಕಾದಷ್ಟು ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ಇದೆ.

ಯಾರು ಖಾತೆ ತೆರೆಯಬಹುದು:

ಯಾರಾದರೂ ಕೂಡ ಈ SBI ವರ್ಷಾಶನ ಠೇವಣಿ ಯೋಜನೆ ಖಾತೆಯನ್ನು ತೆರೆಯಲು ಅವಕಾಶ ಇದೆ. ಈ ಖಾತೆಯನ್ನು ಏಕ ಅಥವಾ ಜಂಟಿಯಾಗಿ ತೆರೆಯಬಹುದು.ಪ್ರಸ್ತುತ ನಿಶ್ಚಿತ ಠೇವಣಿಗಳಿಗೆ ಶೇಕಡಾ 6.1 ಬಡ್ಡಿ ದೊರೆಯುತ್ತಿದೆ. ಹಿರಿಯ ನಾಗರಿಕರಿಗೆ ಶೇ.6.9 ರಷ್ಟು ಬಡ್ಡಿ ಸಿಗುತ್ತಿದೆ. ದೊಡ್ಡ ಮೊತ್ತದ ನಿವೃತ್ತಿ ಹಣವನ್ನು ಪಡೆಯುವವರು ದೊಡ್ಡ ಮೊತ್ತದ ಹಣವನ್ನು ಗಳಿಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

advertisement

Leave A Reply

Your email address will not be published.