Karnataka Times
Trending Stories, Viral News, Gossips & Everything in Kannada

HSRP Number Plate: ಈ ರೀತಿ ಮಾಡಿದರೆ ಸಾಕು HSRP ನಂಬರ್ ಪ್ಲೇಟ್ ನ ಬಣ್ಣ ಕೂಡ ಇಳಿಯೋದಿಲ್ಲ ದಂಡ ಕೂಡ ಕಟ್ಟಬೇಕಾದ ಅಗತ್ಯ ಇಲ್ಲ!

advertisement

HSRP Number Plate ಅತಿಯಿಂದ ಸುರಕ್ಷಿತ ನಂಬರ್ ಪ್ಲೇಟ್ ಎಂಬುದಾಗಿ ತಿಳಿದು ಬಂದಿದೆ ಆದರೆ ಇದರಲ್ಲಿ ಇರುವಂತಹ ಸಂಖ್ಯೆಗಳ ನಂಬರ್ ನ ಬಣ್ಣ ಅಳಿಸಿ ಹೋಗುವುದರಿಂದಾಗಿ ಟ್ರಾಫಿಕ್ ಪೊಲೀಸ್ ನ ಕ್ಯಾಮೆರಾದಲ್ಲಿ ಕೂಡ ಇದು ಕಾಣದೆ ಇರುವುದರಿಂದಾಗಿ ಇವುಗಳ ಮೇಲೆ ದಂಡ ಬೀಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಬನ್ನಿ ಹಾಗಿದ್ರೆ ಇವತ್ತಿನ ಈ ಲೇಖನದ ಮೂಲಕ ಅದಕ್ಕಿರುವಂತಹ ಪರಿಹಾರ ಏನು ಎನ್ನುವಂತಹ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

HSRP ನಂಬರ್ ಪ್ಲೇಟ್ ಗಳಲ್ಲಿ ಸಂಖ್ಯೆಯ ಮೇಲೆ ಇರುವಂತಹ ಕಪ್ಪು ಬಣ್ಣ ಅಳಿಸಿ ಹೋಗುವುದು ಹೆಚ್ಚಾಗಿ ಕಂಡುಬರುತ್ತದೆ. ಸಾಕಷ್ಟು ಕಡೆಗಳಲ್ಲಿ ಇದರ ಬಣ್ಣ ಅಳಸಿ ಹೋಗಿ ಸಂಪೂರ್ಣ ಬಿಳಿಯಾಗುವುದು ಕೂಡ ಕಂಡುಬರುತ್ತದೆ. ಇದೇ ಕಾರಣಕ್ಕಾಗಿ ಸಾಕಷ್ಟು ಜನರು ಟ್ರಾಫಿಕ್ ಪೊಲೀಸರಿಗೆ ಹಣವನ್ನು ದಂಡ ರೂಪದಲ್ಲಿ ಕಟ್ಟಿರುವಂತಹ ಉದಾಹರಣೆಗಳು ಕೂಡ ನಮಗೆ ಸಿಗುತ್ತವೆ.

 

Image Source: ET Auto

 

advertisement

HSRP Number Plate ಮೊದಲಿಗೆ ಏನು ಅನ್ನೋದನ್ನ ತಿಳಿದುಕೊಳ್ಳುವುದಾದರೆ ಇದು ಅಲ್ಯೂಮಿನಿಯಂ ನಿಂದ ನಿರ್ಮಿತವಾಗಿರುವಂತಹ ಹೈ ಸೆಕ್ಯೂರಿಟಿ ನಂಬರ್ (HSRP Number Plate) ಬೇಕಾಗಿದೆ. ಇದರಲ್ಲಿ ನಟ್ ಬೋಲ್ಟ್ ಅಳವಡಿಸಬೇಕಾದ ಯಾವುದೇ ಅಗತ್ಯವಿರುವುದಿಲ್ಲ, Snap On Locks ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಮೊದಲಿಗೆ ದೇಶದ ರಾಜಧಾನಿಯಾಗಿರುವಂತಹ ದೆಹಲಿಯಲ್ಲಿ ಮಾತ್ರ ಇದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತಹ ನಿಯಮವನ್ನು ಜಾರಿಗೆ ಮಾಡಲಾಗಿತ್ತು ಆದರೆ ಈಗ 2019 ರ ನಂತರ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಕೂಡ ಈ ನಿಯಮವನ್ನು ಜಾರಿಗೊಳಿಸುವಂತಹ ನಿರ್ಧಾರವನ್ನು ಸರ್ಕಾರ ಮಾಡಿದೆ.

ಇನ್ನು ಈ ನಂಬರ್ ಪ್ಲೇಟ್ ನಲ್ಲಿ ಇರುವಂತಹ ಸಂಖ್ಯೆಗಳು ಅಳಿಸಿ ಹೋಗದೆ ಇರೋದಕ್ಕೆ ನೀವು ಕಾರನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ನಂಬರ್ ಪ್ಲೇಟ್ ಅನ್ನು ಮುಚ್ಚಿ ನಂತರ ಸ್ವಚ್ಛ ಮಾಡುವುದು ಉತ್ತಮ. ಇದಕ್ಕಿಂತಲೂ ಇನ್ನೊಂದು ಒಳ್ಳೆಯ ಉಪಾಯ ಅಂದ್ರೆ ಒಂದು ಕೋಟ್ ಪಿಪಿಎಫ್ ಅನ್ನು ಅಳವಡಿಸಿ. ಯಾವುದೇ ಸಮಯದಲ್ಲಿ ಗಾಡಿಯನ್ನು ತೊಳೆಯುವಾಗ ನೀರನ್ನು ಹೆಚ್ಚಿನ ಪ್ರೆಶರ್ ನಿಂದ ಬಳಸಬೇಡಿ. ಇಲ್ಲವಾದರೆ ಇದರಿಂದಾಗಿ ನಂಬರ್ ಪ್ಲೇಟ್ ಅಳಸಿ ಹೋಗುವ ಸಾಧ್ಯತೆ ಇರುತ್ತದೆ.

HSRP Number Plate ಅನ್ನು ಮೇ 31ರ ಒಳಗೆ ಕಡ್ಡಾಯವಾಗಿ ನಿಮ್ಮ ವಾಹನಗಳಲ್ಲಿ ಅಳವಡಿಸುವಂತಹ ನಿಯಮ ಈಗಾಗಲೇ ಜಾರಿಯಲ್ಲಿ ಇರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಈ ನಿಯಮವನ್ನು ನಿಗದಿತ ಸಮಯದ ಒಳಗೆ ಪರಿಪಾಲಿಸುವುದು ಕೂಡ ನಿಮ್ಮ ಕರ್ತವ್ಯವಾಗಿದೆ.

advertisement

Leave A Reply

Your email address will not be published.