Karnataka Times
Trending Stories, Viral News, Gossips & Everything in Kannada

Arecanut: ಅಡಿಕೆ ಬೆಳೆಯುವ ಮಣ್ಣಿಗೆ ಹೀಗೆ ಮಾಡಿದ್ರೆ ಭರ್ಜರಿ ಇಳುವರಿ

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿ ಮಾಡಲು ಸರಕಾರ ಹಲವು ರೀತಿಯ ಸಹಾಯ ಹಸ್ತವನ್ನು ನೀಡುತ್ತಲೇ ಬಂದಿದೆ.ರೈತರು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣುವಂತೆ ಮಾಡಲು ಬೀಜಗಳ ವಿತರಣೆ, ಕೃಷಿ ಮಾರ್ಗದರ್ಶನ, ಕೃಷಿ ಸಲಕರಣೆಗಳ ವಿತರಣೆ ಇತ್ಯಾದಿ ಯನ್ನು ಸರಕಾರ ಆಯೋಜನೆ ಮಾಡುತ್ತಿದೆ.

ಅದೇ ರೀತಿ ಕೃಷಿಕರು ಕೂಡ ಕೃಷಿಯಲ್ಲಿ ಒಲವು ತೋರಿಸುವ ಮೂಲಕ ಅಭಿವೃದ್ಧಿ ಯನ್ನು ಕಾಣುತ್ತಿದ್ದಾರೆ‌. ಕೃಷಿ ಅಂದಾಗ ಮೊದಲಿಗೆ ನೆನಪಿಗೆ ಬರುವುದೇ ಅಡಿಕೆ ಕೃಷಿ (Arecanut Cultivation). ಇಲ್ಲಿ ಸರಿಯಾದ ಕೃಷಿ ಇಳುವರಿ ಬರಬೇಕಾದರೆ ಅಡಿಕೆ ಕೃಷಿಗೆ ಬೇಕಾದ ಮೂಲ ವಿಧಾನಗಳನ್ನು ಅಳವಡಿಸಬೇಕು. ಮುಖ್ಯವಾಗಿ ಮಣ್ಣು ಯಾವ ರೀತಿ ಇರಬೇಕು ಮಣ್ಣನ ಪೋಷಣೆ ಕಾಪಾಡುವುದು ಹೇಗೆ ಎಂಬುದನ್ನು ಮೊದಲು ಅರಿತಿರಬೇಕು.

ತೋಟಕ್ಕೆ ಮಣ್ಣು:

 

Image Source: YT-Discover Agriculture

 

ಹೆಚ್ಚಿನವರು ಅಡಿಕೆ ತೋಟ (Arecanut Plantation) ಗಳಿಗೆ ಮಣ್ಣನ್ನು ಸಹ ಹಾಕುತ್ತಾರೆ. ಮಣ್ಣು ಹಾಕುವ ಉದ್ದೇಶ ಒಳ್ಳೆಯದೇ ಅದರೂ ಬೇರುಗಳಿಗೆ ಅನುಕೂಲವಾಗಲಿ ಎಂದು. ತೋಟಗಾರಿಕಾ ಬೆಳೆಗಳಲ್ಲಿ ಅಡಿಕೆ (Arecanut), ತೆಂಗಿನ ತೋಟಕ್ಕೆ ಮಣ್ಣು ಹಾಕುವುದರಿಂದ ಪ್ರಯೋಜನ ಇದೆ. ಆದರೆ ಹಾಕಬೇಕಾದ ಮಣ್ಣು ಸಾರಯುಕ್ತ ಮಣ್ಣಾಗಿದ್ದರೆ ಮಾತ್ರ ತೋಟಕ್ಕೆ ಹಾಕಬೇಕು. ಅಡಿಕೆ, ತೆಂಗಿನ ತೋಟಕ್ಕೆ ಕನಿಷ್ಟ ಎರಡು ವರ್ಷಗಳಿಗೊಮ್ಮೆಯಾದರೂ ಮಣ್ಣು ಹಾಕುವುದು ಒಳ್ಳೆಯದು.

ಗೊಬ್ಬರ ವಾಗಿ ಬಳಕೆ ಮಾಡಿ:

 

advertisement

Image Source: YouTube

 

ತೋಟದ ತ್ಯಾಜ್ಯಗಳಾದ ಅಡಿಕೆ, ತೆಂಗಿನ ಗರಿ ಇತ್ಯಾದಿಗಳನ್ನು ಇತರ ಕಡೆ ಎಸೆಯದೇ ತೋಟದಲ್ಲಿಯೇ ಗೊಬ್ಬರವಾಗಿ ಬಳಕೆ ಮಾಡಿ. ಅದರ ಮೇಲೆ ಹೆಚ್ಚೆಂದರೆ 4 ಇಂಚು ದಪ್ಪಕ್ಕೆ ಮಣ್ಣು ಕೂಡ ಹಾಕಬಹುದಾಗಿದೆ. ತೋಟಕ್ಕೆ ಹಾಕಬೇಕಾದ ಮಣ್ಣು ಯಾವಾಗಲೂ ಸಾವಯವ ವಸ್ತುಗಳನ್ನು ಹೊಂದಿದ ಮಣ್ಣಾಗಿರಬೇಕು. ಸಾವಯವ ವಸ್ತುಗಳನ್ನು ಹೊಂದಿದ ಮಣ್ಣು ಕೆಂಪು ಮಣ್ಣಾಗಿರುವುದಿಲ್ಲ. ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ.

ಈ ಪ್ರಕ್ರಿಯೆ ‌ಮುಖ್ಯ:

ಅಡಿಕೆ ಬೆಳೆಗಳಿಗೆ ಮುಖ್ಯ ವಾಗಿ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವುದು ಇಂಗಾಲ ಆಮ್ಲಜನಕ ಮತ್ತು ಜಲಜನಕ ಇತ್ಯಾದಿ ಗಳು ಸರಿಯಾದ ಪ್ರಮಾಣದಲ್ಲಿ ಗಿಡಗಳಿಗೆ ಸಿಗಬೇಕು. ಇದರಿಂದ ಗಿಡಗಳ ಫಸಲು ಉತ್ತಮವಾಗಲಿದೆ. ಇದಕ್ಕೆ ಕೃಷಿಕರು ಸಮರ್ಪಕ ಕಾಲುವೆ ಮಾಡಿ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲ ಮಾಡಿಕೊಟ್ಟರೆ ಉತ್ತಮ ಪೋಷಣೆ ಕೂಡ ಸಿಗಲಿದೆ.

ಹೀಗೆ ಮಾಡಿ:

ಇನ್ನು ಅಡಿಕೆ ಕೃಷಿ (Arecanut Cultivation) ಯಲ್ಲಿ ಹೆಚ್ಚಿನ ಪೋಷಣೆ ಸಿಗಬೇಕಾದರೆ ಮಣ್ಣು ಸಾವಯವ ಇರಬೇಕು. ಯಾವುದೇ ರಸಾಯನಿಕ ಗೊಬ್ಬರವನ್ನು ನಾವು ಬಳಕೆ ಮಾಡಬಾರದು. ನಾವೇ ದನದ ಕೊಟ್ಟಿಗೆ ಗೊಬ್ಬರ, ನೀರು ಉಪಯೋಗಿಸಿ ಜೀವಾಮೃತ ಮಾಡಿದರೆ ಉತ್ತಮ.ಇನ್ನು ಡಾ ಸಾಯಿಲ್ ಬಳಕೆ ಮಾಡಿದರೆ ಎರೆಹುಳು ಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ.ಹಾಗಾಗಿ ಡಾ ಸಾಯಿಲ್ ಬಳಕೆ ಮಾಡಿ. ಅದೇ ರೀತಿ ಮಣ್ಣು ಪರೀಕ್ಷೆ ಮಾಡಿ ಕೃಷಿ ಮಾಡಿದರೆ ಉತ್ತಮ.

advertisement

Leave A Reply

Your email address will not be published.