Karnataka Times
Trending Stories, Viral News, Gossips & Everything in Kannada

New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರು ಈ ಮಾಹಿತಿ ತಿಳಿಯಿರಿ

advertisement

ಬಡ ವರ್ಗದ ಜನತೆಯ ಹಸಿವನ್ನು ನೀಗಿಸಲು ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ.ಅದೆ ರೀತಿ ಬಡವರ್ಗದ ಜನತೆಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಸರಕಾರವು ರೇಷನ್ ಕಾರ್ಡ್ ಮೂಲಕ ಆಹಾರ ಧಾನ್ಯಗಳ ವಿತರಣೆ ಮಾಡುತ್ತಿದೆ. ಈ ಸೌಲಭ್ಯ ಪಡೆಯಲು ಮುಖ್ಯವಾಗಿ ರೇಷನ್ ಕಾರ್ಡ್ (Ration Card) ಬೇಕಿದ್ದು ಈ ಕಾರ್ಡ್ ಅನ್ನು ಅಂತ್ಯೋದಯ, ಬಿಪಿಎಲ್, ಎಪಿಎಲ್ ಎಂಬುದಾಗಿ ಮೂರು ವಿಧಗಳಾಗಿ ವಿಂಗಡಣೆ ಮಾಡಲಾಗಿದೆ. ಇದೀಗ ಹೊಸ ಕಾರ್ಡ್ (New Ration Card) ಅರ್ಜಿ ಸಲ್ಲಿಕೆಗೂ ಅವಕಾಶ ‌ನೀಡಿದ್ದು ಈ ಬಗ್ಗೆ ಆಪ್ಡೆಟ್ ಮಾಹಿತಿ‌ ಇಲ್ಲಿದೆ.

ಅವಕಾಶ ನೀಡಲಿದೆ:

 

Image Source: Deccan Herald

 

ಇದೀಗ ಹೊಸ ರೇಷನ್‌ ಕಾರ್ಡ್‌ (New Ration Card) ಅರ್ಜಿ ಸಲ್ಲಿಸುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಯೊಂದನ್ನು ನೀಡಿದ್ದು ಅರ್ಜಿ ಸಲ್ಲಿಕೆ ದಾರರು ಈ ಮಾಹಿತಿ ತಿಳಿಯಲೇ ಬೇಕು.‌ ಎಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ನಂತರ ಚುನಾವಣೆ ಇರುವ ಕಾರಣ ಅರ್ಜಿ ಸ್ಥಗಿತ ಮಾಡಿತ್ತು. ಇನ್ನು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಹೊಸ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದೆ. ಹಾಗಾಗಿ ಜೂನ್ 5 ರ ಬಳಿಕ ಅವಕಾಶ ಇರಬಹುದು

ಈ ಅಗತ್ಯ ದಾಖಲೆಗಳು ಬೇಕು:

advertisement

  • Voter ID
  • Aadhaar card
  • Age certificate
  • Driving license
  • Photo
  • mobile no

ಅರ್ಜಿ ಸಲ್ಲಿಸಿ:

ಮೊದಲಿಗೆ kar.nic.in ಈ ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ ಇ-ಸೇವೆಗಳು ಎನ್ನುವ ಆಪ್ಚನ್ ಇರಲಿದ್ದು ಇಲ್ಲಿ ಹೊಸ ಪಡಿತರ ಚೀಟಿಗಾಗಿ (New Ration Card) ಅರ್ಜಿ ಸಲ್ಲಿಸೋ ಲಿಂಕ್ ಇರಲಿದೆ. ನಂತರ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಾಡಿ, ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿ, ಬೇಕಾದ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ.

ಇಲ್ಲಿ ಅರ್ಜಿ ಸಲ್ಲಿಸಿ:

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಪ್ರಕಟವಾದ ನಂತರ ನಿಮ್ಮ ಹತ್ತಿರದ ಯಾವುದೇ ಸಿಎಸ್‌ಸಿ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.