Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ‌ಯೋಜನೆ ಅಪ್ಡೇಟ್, ಇನ್ನು ಮುಂದೆ ಈ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿ ಹಣ

advertisement

ಇಂದು ಪುರುಷರಂತೆ ಮಹಿಳೆಯರು ಕೂಡ ಸಮನರಾಗಿದ್ದು ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಯನ್ನು ಕಾಣುತ್ತಿದ್ದಾರೆ.ಅದೇ ರೀತಿ ಸರಕಾರ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.ಈ ಭಾರಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದರಲ್ಲಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ಎರಡು ಯೋಜನೆಗಳು ಕೂಡ ಮಹಿಳಾ ಪರವಾದ ಯೋಜನೆಯಾಗಿದ್ದು ಮಹಿಳೆಯರಿಗೆ ಹೆಚ್ಚು ಈ ಯೋಜನೆಗಳು ಸಹಾಯಕವಾಗುತ್ತಿದೆ.

ಹಣ ಇಲ್ಲ ಯಾಕೆ?

 

Image Source: informalnewz

 

ಹೆಚ್ಚಿನ ಮಹಿಳೆಯರು ಈ ಯೋಜನೆಯ ಸದುಪಯೋಗ ವನ್ನು ಮಾಡಿಕೊಂಡಿದ್ದಾರೆ. ಆದರೆ ಇನ್ನುಮುಂದೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಜಮೆಯಾಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.ಯಾಕಂದರೆ ಇಂದು ರೇಷನ್ ಕಾರ್ಡ್ (Ration Card) ಅನ್ನು ದುರ್ಬಳಕೆ ಮಾಡಿ ಕೊಂಡು‌ ಗ್ಯಾರಂಟಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಒಂದೇ ಮನೆ ಮಾಡಿದ್ದರೂ 4-5 ರೇಷನ್ ಕಾರ್ಡ್ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

advertisement

ಈಗಾಗಲೇ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ರೇಷನ್ ಕಾರ್ಡ್ ಕೂಡ ರದ್ದು ಮಾಡಿದೆ. ಹಾಗಾಗಿ ರೇಷನ್ ಕಾರ್ಡ್ ರದ್ದು ಆದ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣ ಸಿಗುವುದಿಲ್ಲ.

ಕಠಿಣ ಕ್ರಮ:

ನಕಲಿ ರೇಷನ್ ಕಾರ್ಡನ್ನು (Fake Ration Card) ಬಳಸಿಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಹೀಗೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ನಕಲಿ ಕಾರ್ಡ್ ಸೃಷ್ಟಿ ಮಾಡಿ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭ ಪಾಡೆದುಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ.

11 ಮತ್ತು 12 ನೇ ಕಂತಿನ ಹಣ:

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಹತ್ತು ಕಂತಿನ ವರೆಗೆ ಹೆಚ್ಚಿನ ಮಹಿಳೆಯರಿಗೆ ಬಿಡುಗಡೆ ಯಾಗಿದ್ದು 11ನೇ ಕಂತಿನ ಹಣವೂ ಇದೇ ತಿಂಗಳ ಒಳಗೆ ಬಿಡುಗೆ ಯಾಗಬಹುದು.ಅದೇ ರೀತಿ 12ನೇ ಕಂತಿನ ಹಣವನ್ನು ಕೂಡ ಸರಕಾರ ಬಿಡುಗಡೆ ಮಾಡಿದ್ದು ಶೀಘ್ರವಾಗಿ ಮಹಿಳೆಯರ ಖಾತೆಗೆ ಹಣ ಜಮೆ ಯಾಗಲಿದೆ. ಒಟ್ಟಿನಲ್ಲಿ ದಾಖಲೆ ಸರಿ ಇಲ್ಲದ ಮಹಿಳೆಯರು ತಮ್ಮ ಅಗತ್ಯ ದಾಖಲೆಯನ್ನು ಸರಿ ಪಡಿಸುವ ಮೂಲಕ ಮತ್ತೆ ಅರ್ಜಿ ಸಲ್ಲಿಸಿದೆ ಹಣ ಜಮೆ ಯಾಗದೇ ಇರುವ ಮಹಿಳೆಯರಿಗೂ ಹಣ ಬರಲಿದೆ.

advertisement

Leave A Reply

Your email address will not be published.