Karnataka Times
Trending Stories, Viral News, Gossips & Everything in Kannada

Subsidy: ಡಿಸೆಂಬರ್ 28 ರ ಒಳಗೆ ಅರ್ಜಿ ಸಲ್ಲಿಸಿ ಪಡೆಯಿರಿ 4.40 ಲಕ್ಷ ರೂ ಗಳ ಸಹಾಯಧನ, ಯಾರೆಲ್ಲಾ ಅರ್ಹರು?

advertisement

ಸರ್ಕಾರಗಳು ಯಾವತ್ತಿಗೂ ಜನಪರ ಕೆಲಸಗಳನ್ನು ಬಹಳಶಷ್ಟು ರೀತಿಗಳಲ್ಲಿ ಮಾಡುತ್ತಿರುತ್ತಾರೆ. ಯಾವ ಕ್ಷೇತ್ರದಲ್ಲಿ ಯಾವ ಸಮಸ್ಯೆಗಳಿವೆ ಮತ್ತು ಯಾವ ರೀತಿ ಪ್ರೋತ್ಸಾಹ ಧನ ಅಥವಾ ಇತರ ಸಹಾಯದಿಂದ ಆ ಕ್ಷೇತ್ರವನ್ನು ಮೇಲೆ ತರಬಹುದು ಎನ್ನುವುದನ್ನು ಆಯಾ ಇಲಾಖೆಗಳು ಯೋಚಿಸುತ್ತಿರುತ್ತಾರೆ.

ಮೀನುಗಾರಿಕೆ ಇಲಾಖೆ (Department of Fisheries) ಈಗ ಅಂಥದೇ ಒಂದು ಯೋಜನೆಯಲ್ಲಿ ತೊಡಗಿದ್ದು ರಾಜ್ಯದಾದ್ಯಂತ ಜನರಿಗೆ ಹೊಸ ಯೋಜನೆಯ ಮೂಲಕ ಲಾಭವನ್ನು ನೀಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಆಯಾ ಜಿಲ್ಲಾವಾರು ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ತನಕ ಬಂದಿರುವ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ನಂತರ ಬಂದಿರುವ ಎಲ್ಲಾ ಅರ್ಜಿಗಳನ್ನು ನೋಡಿ ಈ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ.

ಒಳನಾಡು ಮೀನುಗಾರಿಕೆ ಯೋಜನೆಯ ಮೂಲಕ ಪರಿಶಿಶ್ಟ ಜಾತಿ ಮತ್ತು ಪಂಗಡದವರಿಗೆ ಸಹಾಯಧನ:

ಒಳನಾಡು ಮೀನುಗಾರಿಕೆ (Inland Fisheries) ಅಭಿವೃದ್ಧಿಗೆ ಸಹಾಯ ಮಾಡುವುದಕ್ಕಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಯೋಜನೆಗೆ ಅರ್ಹ ಫಲಾನುಭವಿಗಳು ಆದಷ್ಟು ಬೇಗನೆ ಅರ್ಜಿ ಹಾಕಿ, ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

advertisement

ಒಳನಾಡು ಮೀನುಗಾರಿಕೆ ಅಭಿವೃದ್ಧಿನ್ನು ಗಮನದಲ್ಲಿಟ್ಟು ಈ ಮೀನುಗಾರಿಕೆಗೆ ಸಹಾಯ ಮಾಡಬೇಕು ಮತ್ತು ಇದನ್ನು ಪಾಲಿಸಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದ ಜನರಿಗೆ ಅನುಕೂಲವಾಗಬೇಕು ಎನ್ನುವುದಕ್ಕಾಗಿ ಕೃಷಿಕೊಳ ನಿರ್ಮಾಣ ಮಾಡಲು 4.40 ಲಕ್ಷ ರೂಪಾಯಿಗಳ ಸಹಾಯಧನ (Subsidy) ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತರು ಹಾಗೂ ಅರ್ಹ ಫಲಾನುಭವಿಗಳು ಡಿಸೆಂಬರ್ 28ರ ಒಳಗೆ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಂದಿರುವ ಅರ್ಜಿಗಳನ್ನು ಇಲಾಖೆ ಪರಿಗಣಿಸಿ ಅರ್ಹ ಫಲಾನುಭವಿಗಳಿಗೆ ಈ 4.40 ಲಕ್ಷಗಳ ಸಹಾಯಧನ (Subsidy) ವನ್ನು ನೀಡಲಿದೆ.

ತಾಲೂಕುಗಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಲಾಭ ಪಡೆದುಕೊಳ್ಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ಆಯಾ ತಾಲೂಕುಗಳ ಮೀನುಗಾರಿಕೆಗೆ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ ಗೆ ಸಂಪರ್ಕಿಸಬಹುದು ಎಂದು ನೀನು ಗರಿಗೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಇದರ ಜೊತೆಗೆ ಜಲಾಶಯ ನದಿ ಭಾಗ ಕೆರೆ ಈ ಪ್ರದೇಶದಲ್ಲಿರುವ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಗ್ಲಾಸ್ (Fiber Glass) ಹರಿಗೋಲು ವಿತರಣೆ, ಜಲಾಶಯಗಳು ಮತ್ತು ಕೆರೆಗಳ ಅಂಚಿನ ಕೊಳಗಳಲ್ಲಿ ಮೀನು ಮರಿ ಪಾಲನೆಗೆ ಸಹಾಯ ಮುಂತಾದ ಯೋಜನೆಗಳು ಕೂಡ ಮೀನುಗಾರಿಕೆ ಇಲಾಖೆಯಲ್ಲಿ ನಡೆಯುತ್ತಿವೆ. ಈ ಎಲ್ಲಾ ಯೋಜೆನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯನ್ನು ಸಂಪರ್ಕಿಸಿ.

advertisement

Leave A Reply

Your email address will not be published.