Karnataka Times
Trending Stories, Viral News, Gossips & Everything in Kannada

Drought Relief: ರೈತರಿಗೆ ಗುಡ್ ನ್ಯೂಸ್; ಬರ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಿ.

advertisement

ರಾಜ್ಯದಲ್ಲಿ ಬೇರೆ ಬೇರೆ ರೀತಿಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಜನರ ಭರವಸೆ ಗಳಿಸಿಕೊಂಡಿದೆ. ಎಲ್ಲಾ ಗ್ಯಾರಂಟಿಯ ಯೋಜನೆಗಳನ್ನು ಕೂಡ ಜನರು ಸುಲಭವಾಗಿ ಪಡೆದುಕೊಳ್ಳಬಹುದು. ಇದರಿಂದ ಲಕ್ಷಾಂತರ ಕುಟುಂಬಕ್ಕೆ ಸಹಾಯವಾಗಿದೆ ಎನ್ನಬಹುದು ಪ್ರದೇಶದ ರೈತರಿಗೂ ಅನುಕೂಲವಾಗುವಂತೆ ಸಹಾಯಧನ ನೀಡುವ ಮೂಲಕ ರಾಜ್ಯ ಸರ್ಕಾರ ರೈತರ ಮುಖದಲ್ಲಿಯೂ ಮಂದಹಾಸ ಮೂಡಿಸಿದೆ.

ರಾಜ್ಯದ ಬರಪೀಡಿತ ಪ್ರದೇಶಕ್ಕೆ ಬರ ಪರಿಹಾರ (Drought Relief) ಬಿಡುಗಡೆ:

ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆ ಆಗಿಲ್ಲ. ಈ ಕಾರಣದಿಂದ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ರೈತರಿಗೆ ಫಸಲು ಬೆಳೆಯಲು ನೀರಿನ ಅಭಾವ ಉಂಟಾಗಿದೆ. ಹಾಗಾಗಿ ರಾಜ್ಯಾದ್ಯಂತ 24 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಗುರುತಿಸಿ ಅವುಗಳಲ್ಲಿ 106 ತಾಲೂಕುಗಳನ್ನು ಬರಪೀಡತ ತಾಲೂಕುಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ವಾಸಿಸುವ ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ.

 

 

advertisement

ಹೌದು, ಕೃಷಿಯನ್ನು ಲಾಭದಾಯಕ ಉದ್ಯಮಿಯನ್ನಾಗಿ ಮಾಡಬೇಕು ಎಂದು ಸರ್ಕಾರ ಪ್ರಯತ್ನಿಸುತ್ತಿದ್ದು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ಬರಪೀಡಿತ ಪ್ರದೇಶದ ರೈತರಿಗೆ ಬರ ಪರಿಹಾರ (Drought Relief) ನೀಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಅನುದಾನ ಬಿಡುಗಡೆ ಆಗುವುದಕ್ಕಿದೆ ಆದರೆ ಈ ಅನುದಾನಕ್ಕಾಗಿ ಕಾಯದೆ ರೈತರ ಹಿತ ದೃಷ್ಟಿಯಿಂದ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಖಾತೆಗೆ ಜಮಾ ಮಾಡಲಾಗಿದೆ.

ಬರಪೀಡಿತ ಪ್ರದೇಶದ ರೈತರಿಗೆ ಅಕ್ಕಿ ವಿತರಣೆ:

ರಾಜ್ಯದಲ್ಲಿ 106 ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಈಗ ಮೊದಲನೇ ಕಂತಿನಲ್ಲಿ ಬರ ಪರಿಹಾರವಾಗಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ. ಇದರ ಜೊತೆಗೆ ಇಲ್ಲಿಯವರೆಗೆ BPL Card ಹೊಂದಿರುವವರಿಗೆ ನೇರವಾಗಿ ಖಾತೆಗೆ ಜಮಾ ಆಗುತ್ತಿದ್ದ ಅಕ್ಕಿಯ ಹಣವನ್ನು ಸ್ಥಗಿತಗೊಳಿಸಿ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ಬರಪೀಡಿತ ಪ್ರದೇಶದ ರೈತರು ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುವಂತಾಗಿದೆ.

ಅಕ್ರಮ ಸಕ್ರಮ ಭೂ ಪತ್ರ ವಿತರಣೆ:

ಕಂದಾಯ ಇಲಾಖೆಯಲ್ಲಿಯೂ ಕೂಡ ರೈತರ ಜಮೀನಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಹೊಸ ನಿಯಮಗಳನ್ನು ತರಲಾಗಿದೆ. ವರ್ಷಗಳಿಂದ ಒಂದೇ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಬಗರ್ ಹುಕುಂ (Bagar Hukum) ಭೂ ಒಡೆತನದ ಹಕ್ಕನ್ನು ನೀಡಲು ನಿರ್ಧರಿಸಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಡಿಜಿಟಲ್ ಹಕ್ಕು ಪತ್ರ ವಿತರಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಹಕ್ಕುಪತ್ರ ವಿತರಣೆಯನ್ನು ಕೂಡ ರಾಷ್ಟ್ರೀಯ ರೈತರ ದಿನದ ವಿಶೇಷ ಸಂದರ್ಭದಲ್ಲಿ ವಿತರಣೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

advertisement

Leave A Reply

Your email address will not be published.