Karnataka Times
Trending Stories, Viral News, Gossips & Everything in Kannada

Mutual Fund: ತಿಂಗಳಿಗೆ 250 ರೂ. ಹೂಡಿಕೆ ಮಾಡಿದ್ರೆ 1 ಕೋಟಿ ಗಳಿಸಬಹುದು, ಇಲ್ಲಿದೆ ಅದ್ಭುತ ಯೋಜನೆ!

advertisement

ಷೇರು ಮಾರುಕಟ್ಟೆಯಲ್ಲಿ ಮ್ಯೂಚುಯಲ್ ಫಂಡ್ (Mutual Fund) ಗಳ ಮೇಲೆ ಹೂಡಿಕೆ ಮಾಡಿ ಲಾಭಗಳಿಸಿದವರು ಹಲವರು ಇದ್ದಾರೆ. ಮ್ಯೂಚುಯಲ್ ಫಂಡ್ ಹೂಡಿಕೆಯ ವಿಚಾರದಲ್ಲಿ ಬೆಸ್ಟ್ ಎನ್ನಬಹುದು. ಕಡಿಮೆ ಹೂಡಿಕೆಯ ಮೊತ್ತದಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದಾದರೂ ಕೂಡ ಕೇವಲ 250 ರೂ ಮಾಸಿಕ ಹೂಡಿಕೆ (Monthly Investment) ಯಲ್ಲಿ ಕೋಟ್ಯಾಧಿಪತಿಗಳಾಗಬಹುದು. ಅದೇಗೆ ಅಂತೀರಾ, ಈ ಲೇಖನದಲ್ಲಿ ಕಂಪ್ಲೀಟ್ ಮಾಹಿತಿಯನ್ನು ಪಡೆಯಿರಿ.

ತಿಂಗಳಿಗೆ ಕನಿಷ್ಠ 500 ಹೂಡಿಕೆ ಮೊತ್ತ ಮತ್ತಷ್ಟು ಇಳಿಕೆ ಮಾಡುವ ಸಾಧ್ಯತೆ!

ಮುಂಬೈನಲ್ಲಿ ಬ್ಯುಸಿನೆಸ್ ಟುಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ (Securities And Exchange Board of India (SEBI) Chairman Madhabi Puri Buch) ಅವರು ಮಾತನಾಡಿದ್ದು, “ವ್ಯವಸ್ಥಿತ ಹೂಡಿಕೆ ಯೋಜನೆಗಳ (SIP) ಅಡಿಯಲ್ಲಿ ಕನಿಷ್ಠ ಹೂಡಿಕೆಯನ್ನು ಪರಿಚಯಿಸಲು ಮ್ಯೂಚುವಲ್ ಫಂಡ್ ಹೌಸ್‌ಗಳ ಜೊತೆಯಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಕಾರ್ಯನಿರ್ವಹಿಸುತ್ತಿದೆ. ಈ ಮ್ಯುಚುವಲ್ ಫಂಡ್​ನಲ್ಲಿ (Mutual Fund) ಎಸ್​ಐಪಿ ಯೋಜನೆ ಪಡೆಯುವುದಾದರೆ ತಿಂಗಳಿಗೆ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕು. ಆದರೆ ಈ ಮೊತ್ತವನ್ನು (Amount ) ಮತ್ತಷ್ಟು ಇಳಿಕೆ ಮಾಡುವ ಮೂಲಕ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ” ಎಂದಿದ್ದಾರೆ.

ತಿಂಗಳಿಗೆ 250 ರೂ ಎಸ್​ಐಪಿ ಸಾಧ್ಯವಾಗಿಸಲು ಚಿಂತನೆ

advertisement

ಮಾತು ಮುಂದುವರೆಸಿದ ಮಾಧಬಿ ಪುರಿ ಬುಚ್, “ಮ್ಯೂಚುವಲ್ ಫಂಡ್ ಉದ್ಯಮವು ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ತಿಂಗಳಿಗೆ ರೂ 500 ಹೂಡಿಕೆಗಳು ಕಾರ್ಯಸಾಧ್ಯವೆಂದು ಭಾವಿಸುತ್ತದೆ, ಆದರೆ ರೂ 250 ಅಲ್ಲ ಮತ್ತು ಅಂತಹ ಹೂಡಿಕೆಗಳನ್ನು ಲಾಭದಾಯಕವಾಗಿಸುವ ಮಾರ್ಗಗಳನ್ನು ನೋಡಲು ಪ್ರಯತ್ನಿಸುತ್ತದೆ. ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ನವೆಂಬರ್‌ನಲ್ಲಿ SIP ಗಳ ಮೂಲಕ 17,000 ಕೋಟಿ ರೂ.ಗಿಂತ ಹೆಚ್ಚಿನ ಮಾಸಿಕ ಹೂಡಿಕೆಗಳನ್ನು ವರದಿ ಮಾಡಿತ್ತುತ್ತು.

ಅದಲ್ಲದೇ ಈ ಮ್ಯೂಚುವಲ್ ಫಂಡ್ ಉದ್ಯಮದೊಂದಿಗೆ ನಾವು ಸಮಾಲೋಚಿಸುತ್ತಿದ್ದೇವೆ. ತಿಂಗಳಿಗೆ 250 ರೂ ಎಸ್​ಐಪಿ ಸಾಧ್ಯವಾಗಿಸಲು ಏನು ಮಾಡಬೇಕು ಎಂಬುದನ್ನು ಪರಾಮರ್ಶಿಸುತ್ತಿದ್ದೇವೆ. ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಕನಿಷ್ಠ ಹೂಡಿಕೆಯನ್ನು 250 ರೂಗೆ ಇಳಿಸುವುದು ಎಂದರೆ ಹಿಂದೂಸ್ತಾನ್ ಲಿವರ್ ಸಂಸ್ಥೆ ಈ ಹಿಂದೆ ಶಾಂಪೂ ಸ್ಯಾಚೆಟ್ ಬಿಡುಗಡೆ ಮಾಡಿದ ಹಾಗೇ. ಈ ಕಂಪನಿ ಸ್ಯಾಚೆಟ್ ಬಿಡುಗಡೆ ಮಾಡಿ ಉದ್ಯಮದಲ್ಲಿ ಕ್ರಾಂತಿ ಮಾಡಿತು, ನಮಗೂ ಇದು ಗೇಮ್‌ ಚೇಂಜರ್‌ ಆಗಬಹುದು. ಈ ರೀತಿಯಾಗಿ ಮಾಡುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಗುರಿ ತಲುಪಲು ಸಾಧ್ಯವಾಗುವುದಷ್ಟೇ ಅಲ್ಲದೇ ಭಾರತೀಯ ಬಂಡವಾಳ ಮಾರುಕಟ್ಟೆಗೂ ಸಹಾಯವಾಗುತ್ತದೆ ” ಎಂದಿದ್ದಾರೆ.

ತಿಂಗಳಿಗೆ 250 ರೂ ಹೂಡಿಕೆಯಂತೆ ಕೋಟಿ ಗಳಿಸುವುದು ಹೇಗೆ?

ಎಸ್‌ಐಪಿ ಯೋಜನೆ (SIP Scheme) ಯಲ್ಲಿ ಪ್ರತಿ ತಿಂಗಳು 250 ರೂ ಹೂಡಿಕೆ ಮಾಡುವುದು, ಅದು ಅನೇಕರ ಧೂಮಪಾನ ಅಥವಾ ದೈನಂದಿನ ಚಹಾ ವೆಚ್ಚಗಳಿಗೆ ಸಮನಾಗಿರುತ್ತದೆ. ಹೀಗಾಹಿ SIP ನಲ್ಲಿ ತಿಂಗಳಿಗೆ 250 ರೂಪಾಯಿಗಳಾಗೇ 50 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಸರಿಸುಮಾರು 1 ಕೋಟಿ ರೂಪಾಯಿಗಳನ್ನು ಗಳಿಸಬಹುದು. ಲೆಕ್ಕಾಚಾರ ಮಾಡಿದರೆ ಮಾಸಿಕವಾಗಿ SIP ನಲ್ಲಿ 250 ರೂ ಹೂಡಿಕೆಯಂತೆ 50 ವರ್ಷಗಳಲ್ಲಿ ರೂ 98.63 ಲಕ್ಷ (ಸುಮಾರು ರೂ 1 ಕೋಟಿ) ಗಳಿಸಬಹುದಾಗಿದ್ದು ಹೆಚ್ಚು ಆದಾಯವನ್ನು ನೀಡುತ್ತದೆ.

advertisement

Leave A Reply

Your email address will not be published.