Karnataka Times
Trending Stories, Viral News, Gossips & Everything in Kannada

Gruha Lakshmi Money: ಈ ಮಹಿಳೆಯರಿಗೆ ಆರನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣ ಸಿಗಲ್ಲ, ಕಾರಣ ಹೀಗಿದೆ.

advertisement

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಇಂದು ಹೆಚ್ಚಿನ ಮಹೀಳೆಯರಿಗೆ ಸಹಾಯಕವಾಗುತ್ತಿದೆ.ಅದರಲ್ಲೂ ಬಡತನ ವರ್ಗದ ಮಹೀಳೆಯರು ಈ ಹಣ ದಿಂದಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.ಆದರೆ ನೊಂದಣಿ ಮಾಡಿದ ಕೆಲವೊಂದಿಷ್ಟು ಮಹೀಳೆಯರಿಗೆ ಈ ಗೃಹ ಲಕ್ಷ್ಮಿ ಸ್ಕೀಮ್‌ (Gruha Lakshmi Scheme) ನ ಹಣ ಬಂದಿಲ್ಲ. ಈ ಬಗ್ಗೆ ನೊಂದಣಿ ಕೇಂದ್ರಗಳಲ್ಲಿ‌ವಿಚಾರಣೆ ಮಾಡಿದ್ರೆ ನೋಂದಣಿ ಯಶಸ್ವಿಯಾಗಿದೆಯೇ ಇಲ್ಲವೇ ಎಂಬ ಮಾಹಿತಿ ದೊರಕುತ್ತದೆ. ಒಂದು ವೇಳೆ ನೊಂದಣಿ ಸರಿಯಾಗಿದ್ದರೆ ಗೃಹಲಕ್ಷ್ಮಿ ಯ 2 ಸಾವಿರ ರೂಪಾಯಿ ನಿಮಗೆ ದೊರಕುತ್ತದೆ.

ಇವರಿಗೆ ಆರನೇ ಕಂತಿನ ಹಣ ಇಲ್ಲ:

 

 

ಈಗಾಗಲೇ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ 5 ಕಂತಿನ ಹಣ ಮಹೀಳೆಯರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಯಾಗಿದ್ದು 6ನೇ ಕಂತಿನ ಹಣ ಕೆಲವು ಮಹೀಳೆಯರಿಗೆ ಅಷ್ಟೆ ಜಮೆಯಾಗಿದೆ. ಆದರೆ ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣ ಜಮೆ ಯಾಗಿಲ್ಲ.ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ನೊಂದಣಿ ಮಾಡುವಾಗ ಕೆಲವೊಂದು ನಿಯಮ ಗಳನ್ನು ಮಹೀಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ನೀಡಿತ್ತು‌ ಆದರೆ ಕೆಲವೊಂದು ಮಹೀಳೆಯರು ಈ ನಿಮಯಗಳನ್ನು ಉಲ್ಲಂಘಿಸಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನೆಲ್ಲಾ ಸರಕಾರ ಈಗ ಪರಿಶೀಲನೆ ಮಾಡಿದ್ದು ಗೃಹಲಕ್ಷ್ಮೀ ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿರುವ ಮಹಿಳೆಯರ ಖಾತೆಗೆ ಹಣ ಜಮಾ ಮಾಡದಿರಲು ಕ್ರಮ ಕೈಗೊಂಡಿದೆ.

ಕಡ್ಡಾಯ ಈ ಕೆಲಸ ಮಾಡಿ:

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಹಣ ಖಾತೆಗೆ ಬರಬೇಕಾದ್ರೆ ಫಲಾನುಭವಿಗಳು ಕಡ್ಡಾಯವಾಗಿ ಈಕೆವೈಸಿ ಮಾಡಿಸಬೇಕು. ಆಧಾರ್ ಕಾರ್ಡ್ ಗೆ ಹೋಲುವಂತೆ Ration Card, Bank Passbook ದಲ್ಲೂ ಹಾಗೆ ಮಾಹಿತಿ ಇರಬೇಕು. NPCI Mapping ಕೂಡ ಆಗಬೇಕು.

ಹೊಸ ಖಾತೆ ತೆರೆಯಿರಿ:

ಒಂದು ವೇಳೆ ದಾಖಲೆ‌ ಸರಿ ಇಲ್ಲದೆ ನಿಮಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇದ್ದರೆ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಹೊಸ ಖಾತೆಯನ್ನು ಆರಂಭಿಸುವ ಮೂಲಕ ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಿದರೆ ಸರಿ ಪಡಿಸಬಹುದು.

ವಿಶೇಷ ಶಿಬಿರ:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಲು ವಿಶೇಷ ಶಿಬಿರ ನಡೆಸಲಾಗುತ್ತಿದೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಶಿಬಿರಗಳಲ್ಲಿ ಫಲಾನುಭವಿಗಳು ಈ ಭಾಗವಹಿಸಬಹುದು.

advertisement

Leave A Reply

Your email address will not be published.