Karnataka Times
Trending Stories, Viral News, Gossips & Everything in Kannada

Renault Triber: ಕೇವಲ 6 ಲಕ್ಷಕ್ಕೆ 20KM ಮೈಲೇಜ್ ಕೊಡುವ ರೆನಾಲ್ಟ್ ಕಂಪನಿಯ 7ಸೀಟರ್ ಕಾರು ಬಿಡುಗಡೆ!

advertisement

ಇಂದು ಪ್ರತಿಯೊಬ್ಬರೂ ಕೂಡ ವಾಹನ ಖರೀದಿ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ. ಯಾಕಂದ್ರೆ ಎಲ್ಲದ್ರೂ ತಕ್ಷಣ ಪ್ರಯಾಣ ಮಾಡಬೇಕು ಎಂದಾಗ ತಮ್ಮಲ್ಲಿಯೇ ಸ್ವಂತ ವಾಹನ ಇರಬೇಕಿತ್ತು ಎನ್ನುವ ಯೋಚನೆ ನಮ್ಮಲ್ಲಿ ಬರುತ್ತದೆ. ಹಾಗಾಗಿ ಪ್ರತಿಷ್ಠಿತ ಕಂಪನಿಯ ವಾಹನಗಳು ಕೂಡ ಇಂದು ಭರ್ಜರಿ ಆಫರ್ ಅನ್ನು ನೀಡುತ್ತಾ ವಾಹನ ಪ್ರೀಯರನ್ನು ಸೆಳೆಯುತ್ತಲೆ‌ ಬಂದಿದೆ. ಅದೇ ರೀತಿ ಉತ್ತಮ ವೈಶಿಷ್ಟ್ಯ ದ ಕಾರೊಂದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಯಾವ ಕಾರು?

ಇಂದು ಹೆಚ್ಚಾಗಿ ಫ್ಯಾಮಿಲಿ ಪ್ರಯಾಣ ಕ್ಕಾಗಿ ಪ್ರಯಾಣ ಮಾಡಲು ಆಯ್ದು ಕೊಳ್ಳುವ ಕಾರು 7 ಸೀಟರ್ ದ್ದೇ ಆಗಿದೆ. ಅವುಗಳಲ್ಲಿ, ರೆನಾಲ್ಟ್ ಟ್ರೈಬರ್ (Renault Triber) ಕೂಡ ಆಗಿದ್ದು ಇದರ ವೈಶಿಷ್ಟ್ಯ ಕೂಡ ಉತ್ತಮ ವಾಗಿದೆ. ಈ ರೆನಾಲ್ಟ್ ಟ್ರೈಬರ್ 4 ಟ್ರಿಮ್ ಮಾದರಿಗಳಲ್ಲಿ ಲಭ್ಯವಿದ್ದು RXE, RXL, RXT, ಮತ್ತು RXZ, ಒಟ್ಟು 8 ರೂಪಾಂತರಗಳನ್ನು ಇದು ಒಳಗೊಂಡಿದ್ದು ಕಡಿಮೆ ಬೆಲೆಯಲ್ಲಿ ಮದ್ಯಮ ವರ್ಗದವರು ಕೂಡ ಖರೀದಿ ‌ಮಾಡಬಹುದಾಗಿದೆ.

advertisement

Renault Triber ವೈಶಿಷ್ಟ್ಯ ಹೇಗಿದೆ?

  • ಈ ಟ್ರೈಬರ್ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಇರಲಿದ್ದು ಇದು 999 cc 100 ಪಿಎಸ್ ಪವರ್ ಮತ್ತು 160 ಎನ್‌ಎಂ ಟಾರ್ಕ್ ಅನ್ನು ನೀಡುವ ಸಾಮರ್ಥ್ಯ ಇದೆ.
  • ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ ಈ ಕಾರು ಲಭ್ಯವಿದ್ದು ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್ ಬಣ್ಣ ದಲ್ಲಿ ಖರೀದಿಗೆ ಲಭ್ಯವಿದೆ.
  • ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಇರಲಿದ್ದು ಟ್ರೈಬರ್‌ನೊಂದಿಗೆ ರೆನಾಲ್ಟ್ 5-ಸ್ಪೀಡ್ ಮ್ಯಾನ್ಯುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡಲಿದೆ.
  • ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸಹ ಹೊಂದಿದೆ.
  • ಇಂಧನ ದಕ್ಷತೆಯ ವಿಚಾರದಲ್ಲಿ ಈ ಕಾರು 18.2 kmpl ನಿಂದ 20 kmpl ವರೆಗಿನ ಮೈಲೇಜ್ ಅನ್ನು ನೀಡಲಿದೆ.
  • LED DRLs ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಕೂಡ‌ ಇರಲಿದೆ.

Renault Triber ಬೆಲೆ ಹೇಗಿದೆ?

ಈ ಕಾರು ಮಧ್ಯಮ ವರ್ಗದವರಿಗೆ ಸೂಕ್ತ ಆಯ್ಕೆ ಯಾಗಿದ್ದು ವಾಹನ ಪ್ರೀಯರು ಈ ಕಾರನ್ನು 6.33 ಲಕ್ಷ ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಸುರಕ್ಷತೆ ‌ವಿಚಾರದಲ್ಲಿಯು ಶ್ರೇಷ್ಠ ವೆನಿಸಿದ್ದು ರೆಟಿಂಗ್ ಕೂಡ ಉತ್ತಮ‌ವಾಗಿದೆ.

advertisement

Leave A Reply

Your email address will not be published.