Karnataka Times
Trending Stories, Viral News, Gossips & Everything in Kannada

PM Kisan Money: 16 ನೇ ಕಂತಿನ ಪಿಎಂ ಕಿಸಾನ್ ಹಣ ಸ್ಟೇಟಸ್ ಚೆಕ್ ಮಾಡುವ ಸುಲಭ ಮಾರ್ಗ ಇಲ್ಲಿದೆ!

advertisement

ರೈತರು ಈ ದೇಶದ ಅವಿಭಾಜ್ಯ ಅಂಗವಾಗಿದ್ದು ರೈತರ ಏಳಿಗೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ಅದೇ ರೀತಿ ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯನ್ನು ಆರಂಭ ಮಾಡಿದ್ದು, ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಿದೆ.

ಏನು ಈ ಯೋಜನೆ?

PM Kisan Samman Nidhi Yojana ಯ ಮೂಲಕ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2,000 ರೂ. ಅನ್ನು ಜಮೆ ಮಾಡಲಾಗುತ್ತದೆ. ಅಂದರೆ ವಾರ್ಷಿಕವಾಗಿ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಬಹುದು:

ಇದುವರೆಗೆ ಕೇಂದ್ರ ಸರ್ಕಾರ 15 ಕಂತುಗಳನ್ನು ರೈತರಿಗೆ ಬಿಡುಗಡೆ ಮಾಡಿದ್ದು ಹಲವಷ್ಟು ರೈತರು ಈ ಆರ್ಥಿಕ ಲಾಭ ವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಇನ್ನುಳಿದ ರೈತರು ನೊಂದಣಿ ಮಾಡುದಾದ್ರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ ಅರ್ಜಿ ಹಾಕಬಹುದು.

advertisement

16 ನೇ ಕಂತಿನ ಹಣ ಜಮೆ?

 

 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ 16ನೇ ಕಂತಿನ ಹಣವನ್ನು ಕೇಂದ್ರ ಸರಕಾರ ನೀಡಲು ಮುಂದಾಗಿದೆ. 16ನೇ ಕಂತಿಗಾಗಿ ಕಾತರದಿಂದ ಕಾಯುತ್ತಿರುವವರಿಗೆ ತಮ್ಮ ಹಣದ ಬಗ್ಗೆ ಪರಿಶೀಲಿಸಲು pmkisan.gov.in ಈ ಲಿಂಕ್ ಗೆ ಭೇಟಿ ‌ನೀಡಿ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಐಡಿ ಹಾಕಿ, ತದನಂತರ ಕೋಡ್ ಅನ್ನು ನಮೂದಿಸಿ ಟ್ಯಾಬ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಹಣದ ಬಗ್ಗೆ ಪರಿಶೀಲನೆ ಮಾಡಬಹುದು.

ಈ ಕೆಲಸ ಮೊದಲು ಮಾಡಿ:

PM Kisan Money ಖಾತೆಗೆ ಜಮೆ ಯಾಗಬೇಕಾದ್ರೆ ಮೊದಲಿಗೆ ರೈತರು KYC ಅನ್ನು ಪೂರ್ಣಗೊಳಿಸಬೇಕು. ಹಾಗಿದ್ದಲ್ಲಿ ಮಾತ್ರ ಪಿಎಂ ಕಿಸಾನ್‌ ಹಣ ದೊರೆ ಯುತ್ತದೆ. ನಿಮ್ಮ ಆದಾರ್ ಅನ್ನು ಬ್ಯಾಂಕ್ ಖಾತೆ, ಮೊಬೈಲ್ ನಂ ಲಿಂಕ್ ಮಾಡಿಸಲೇ ಬೇಕು. ಇದನ್ನು ಮಾಡದೇ ಇದ್ದರೆ ಹಣ ಸಿಗುವುದಿಲ್ಲ. ಹಾಗಾಗಿ ನೀವು ಇನ್ನೂ KYC ಮಾಡಿಲ್ಲದಿದ್ದರೆ, ಅದನ್ನು ತಕ್ಷಣವೇ ಅಪ್ಡೇಟ್‌ ಮಾಡಿ. ಕಿಸಾನ್‌ ಹಣಕ್ಕೆ ನೋಂದಣಿ ಯಾಗುವಾಗ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಒಂದು ದಾಖಲೆಯು ಸರಿ ಇಲ್ಲದೆ ಇದ್ದಲ್ಲಿ ಸಮಸ್ಯೆಯಾಗುತ್ತದೆ.

advertisement

Leave A Reply

Your email address will not be published.