Karnataka Times
Trending Stories, Viral News, Gossips & Everything in Kannada

WhatsApp: ಇನ್ಮುಂದೆ ಸರ್ಕಾರದ ಎಲ್ಲಾ ಯೋಜನೆಗಳು ಮತ್ತಷ್ಟು ಸುಲಭವಾಗಿ ಪಡೆಯಬಹುದು, ಸಿದ್ದರಾಮಯ್ಯ ಕೊಟ್ರು ಗುಡ್ ನ್ಯೂಸ್!

advertisement

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳು ಜನರನ್ನು ಹೆಚ್ಚು ಆಕರ್ಷಕವಾಗಿ ಸೆಳೆಯುವತ್ತ ಸಫಲವಾಗಿದೆ. ಅದರಲ್ಲೂ ಕೋವಿಡ್ ಬಂದ ಬಳಿಕ ಆನ್ಲೈನ್ ಕ್ಲಾಸ್ ಮಾಡುವ ಸಲುವಾಗಿ ಮಕ್ಕಳ ಕೈಯಲ್ಲೂ ಮೊಬೈಲ್ ನದ್ದೇ ಕಾರುಬಾರು ಈ ಮೂಲಕ ಮೊಬೈಲ್ ಕೆಲ ಅಪ್ಲೀಕೇಶನ್ ಬಹಳ ಪ್ರಾಮುಖ್ಯತೆ ಪಡೆಯುತ್ತಲಿದ್ದು ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ವಾಟ್ಸ್ ಆ್ಯಪ್ ಅಪಾರ ಜನ ಮೆಚ್ಚುಗೆ ಪಡೆಯುತ್ತಿದೆ.

ನಾವು ಹಿಂದೆ ನೋಡಿದ್ದ ವಾಟ್ಸ್ ಆ್ಯಪ್ (WhatsApp) ಫೀಚರ್ಸ್ ಈಗ ಮತ್ತಷ್ಟು ಬದಲಾಗುತ್ತಿದೆ. ಇಮೋಜಿ, ಡಿಲಿಟಿಂಗ್ ಎಂಬ ಫೀಚರ್ಸ್ ಬದಲಾಗುವ ಜೊತೆ ಹೊಸ ವೈಶಿಷ್ಟ್ಯ ಕೂಡ ತುಂಬಾ ಪಾಪ್ಯುಲರ್ ಪಡೆಯುತ್ತಲಿದೆ ಅದರಲ್ಲಿ ಒಂದಾಗಿ ವಾಟ್ಸ್ ಆ್ಯಪ್ ಚಾನೆಲ್ ಅನ್ನು ಕಾಣಬಹುದಾಗಿದ್ದು ಇಂದು ಸಮಾಜದ ಅನೇಕ ಗಣ್ಯರು, ಸೆಲೆಬ್ರಿಟಿಗಳು , ರಾಜಕಾರಣಿಗಳು ಪ್ರತ್ಯೇಕ ವಾಟ್ಸ್ ಆ್ಯಪ್ ಚಾನೆಲ್ ಹೊಂದಿದ್ದು ಅದರ ಮೂಲಕ ಜನರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.

ಹೊಸ ಚಾನೆಲ್

ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿಚಾರಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸಲುವಾಗಿ ಜನರ ಹಿತದೃಷ್ಟಿಯಿಂದ ಕರ್ನಾಟಕ ವಾರ್ತೆ ಎಂಬ ಅಧಿಕೃತ ವಾಟ್ಸ್ ಆ್ಯಪ್ ಚಾನೆಲ್ ಅನ್ನು ಸ್ಥಾಪಿಸಲಾಗಿದೆ. ಇದು ಕರ್ನಾಟಕದಲ್ಲಿ ಈಗ ಪ್ರಸ್ತುತ ಇರುವ ಕಾಂಗ್ರೆಸ್ ಸರಕಾರದಿಂದ ಸೃಷ್ಟಿ ಮಾಡಲಾಗಿದ್ದು ಸರಕಾರದ ಯೋಜನೆ, ಅರ್ಜಿ ವಿವರಣೆ ಸೇರಿದಂತೆ ವಿವಿಧ ಮಾಹಿತಿಯನ್ನು ಇಲ್ಲಿ ಶೇರ್ ಮಾಡಲಾಗುವುದು.

advertisement

ವೈರಲ್ ಆಯ್ತು ಸಿಎಂ ಪೋಸ್ಟ್

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಹೊಸ ವಾಟ್ಸ್ ಆ್ಯಪ್ ಚಾನೆಲ್ ಸ್ಥಾಪನೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಪೋಸ್ಟ್ ನಲ್ಲಿ ನಮ್ಮ ಸರಕಾರದ ಎಲ್ಲ ಇಲಾಖೆಯ ಜನಪರ ಯೋಜನೆ ಬಗ್ಗೆ ಸಾಧನೆ, ಫಲಾನುಭವಿಗಳು ಅನುಸರಿಸುವ ಕ್ರಮ, ಸಾರ್ವಜಿನಿಕ ಜಾಗೃತಿ ಇತರ ಮಾಹಿತಿ ಅಲ್ಲಿ ರವಾನಿಸಲಾಗುವುದು. ಇದನ್ನು ವಾಟ್ಸ್ ಆ್ಯಪ್ ಚಾನೆಲ್ ಹಾಗೂ ಇನ್ಸ್ಟಾಗ್ರಾಂ (Instagram) ಮೂಲಕ ನಿಯಮಿತವಾಗಿ ಎಲ್ಲ ಮಾಹಿತಿ ತಲುಪಿಸುತ್ತೇವೆ ಹಾಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಲು ತಿಳಿಸಿದ್ದಾರೆ.

 

ಈ ಒಂದು ಪೋಸ್ಟ್ ನಲ್ಲಿ ಸಿಎಂ ಭಾವಚಿತ್ರದ ಜೊತೆಗೆ ಯಾವೆಲ್ಲ ಮಾಹಿತಿ ನೀಡ್ತೇವೆ ಎಂದು ಸಹ ತಿಳಿಸಿದ್ದಾರೆ. ಅದರ ಜೊತೆಗೆ ಕ್ಯೂ ಆರ್ ಕೋಡ್ ಕೂಡ ಹಾಕಿದ್ದಾರೆ. ಅದೇ ರೀತಿ ಕರ್ನಾಟಕ ಸರಕಾರದ ಮುದ್ರೆ ಕೂಡ ಇದೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ‌. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.