Karnataka Times
Trending Stories, Viral News, Gossips & Everything in Kannada

Home Loan: ಗೃಹ ಸಾಲದ EMI ಸರಿಯಾದ ಸಮಯಕ್ಕೆ ಪಾವತಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಾದ್ರೆ ಆರ್‌ಬಿಐನ ಈ ನಿಯಮ ತಿಳಿದುಕೊಳ್ಳಿ!

advertisement

ಸಾಮಾನ್ಯವಾಗಿ ಉದ್ಯೋಗದಲ್ಲಿ ತೊಡಗಿಕೊಂಡಿರುವವರು, ಹಲವು ಕನಸುಗಳನ್ನು ಹೊತ್ತಿರುವವರು, ಹೇಗಾದರೂ ಮಾಡಿ ಆ ಕನಸು ನೆರವೇರಿಸಿಕೊಳ್ಳಲು ಬಯಸುವವರು ಬ್ಯಾಂಕ್ ಸಾಲದ ಮೊರೆ ಹೋಗುವುದು ಸಹಜ. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಜನ ಉದ್ಯೋಗ ಸಿಕ್ಕ ತಕ್ಷಣ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಈ ನಿಟ್ಟಿನಲ್ಲಿ ಬ್ಯಾಂಕ್ನಿಂದ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ.

ಬ್ಯಾಂಕ್ ನಲ್ಲಿ ಗೃಹ ಸಾಲ ತೆಗೆದುಕೊಂಡು ಮನೆ ಕಟ್ಟುವುದು ಹೆಚ್ಚು ಸೂಕ್ತ. ಯಾಕಂದ್ರೆ ನೀವು ಒಂದು ಮನೆಯನ್ನು ಕಟ್ಟಬೇಕು ಅಂದ್ರೆ ಲಕ್ಷಗಟ್ಟಲೆ ಹಣವನ್ನು ಕೂಡಿಸಬೇಕು. ದುಡಿಯುವ ಸಮಯದಲ್ಲಿಯೇ ಗೃಹ ಸಾಲ ತೆಗೆದುಕೊಂಡು ಇಎಂಐ ಮೂಲಕ ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಕಟ್ಟಿಕೊಂಡು ಹೋದರೆ ನಿಮ್ಮ ಬಳಿ ಮನೆಯೂ ಇರುತ್ತದೆ. ಸುಲಭವಾಗಿ ಸಾಲವನ್ನು ತೀರಿಸಬಹುದು.

ಆದರೆ ಎಲ್ಲಾ ವಿಚಾರದಲ್ಲಿಯೂ ಅನುಕೂಲತೆಗಳು ಹಾಗೂ ಅನಾನುಕೂಲತೆಗಳು ಇದ್ದೇ ಇರುತ್ತದೆ. ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ತೆಗೆದುಕೊಂಡ ನಂತರ ಅದನ್ನು ಪ್ರತಿ ತಿಂಗಳು ಒಂದಷ್ಟು ಮೊತ್ತವನ್ನು EMI ಪಾವತಿಸಬೇಕಾಗುತ್ತದೆ. ಒಂದು ವೇಳೆ ಆ ಮೊತ್ತವನ್ನು ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ ಸಾಲಗಾರನನ್ನು ಡೀಫಾಲ್ಟರ್ ಎಂದು ಪರಿಗಣಿಸುವ ಸಾಧ್ಯತೆ ಇರುತ್ತದೆ. ಗ್ರಾಹಕ ಒಮ್ಮೆ ಡೀಫಾಲ್ಟರ್ ಎಂದು ಗುರುತಿಸಿಕೊಂಡರೆ ಮತ್ತೆ ಆತನಿಗೆ ಎಲ್ಲಿಯೂ ಸಾಲ ಸೌಲಭ್ಯ ದೊರೆಯುವುದಿಲ್ಲ. ಹಾಗಾಗಿ ಯಾರು ಕೂಡ ಡೀಫಾಲ್ಟರ್ (Defaulter) ಎನಿಸಿಕೊಳ್ಳಲು ಸಿದ್ಧರಿರುವುದಿಲ್ಲ.

ಆರ್ ಬಿ ಐ ನಿಮ್ಮ ಏನು?

ಸಾಕಷ್ಟು ಸಂದರ್ಭದಲ್ಲಿ ಗೃಹ ಸಾಲದ ಇಎಮ್ಐ ತೀರಿಸಲು ಸಾಧ್ಯವಾಗದೆ ಕಷ್ಟಪಡುವ ಗ್ರಾಹಕರು ಇದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ನೀವು ಚಿಂತಿತರಾಗಿದ್ದರೆ ಆರ್‌ಬಿಐ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ಆರ್ ಬಿ ಐ ನ ಹೊಸ ನಿಯಮದ ಪ್ರಕಾರ ಯಾವುದೇ ಗ್ರಾಹಕ ಗೃಹ ಸಾಲವನ್ನು ತೆಗೆದುಕೊಂಡು ಅದನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲು ಸಾಧ್ಯವಾಗದೆ ಇದ್ದರೆ, ಆತನಿಗೆ ಆರ್ಥಿಕ ಸಮಸ್ಯೆ ಇದ್ದರೆ ಆ ಸಾಲವನ್ನು ಮರು ರಚನೆ ಮಾಡಲು ಬ್ಯಾಂಕ್ ಗಳು ಅವಕಾಶ ಮಾಡಿಕೊಡಬೇಕು. ಮರು ರಚನೆ ಮಾಡುವುದು ಅಂದ್ರೆ ಏನು? ಮರು ರಚನೆ ಅಥವಾ ಪುನರ್ ರಚನೆ ಅಂದ್ರೆ ನೀವು ನಿಮ್ಮ ಸಾಲದ ಅವಧಿಯನ್ನು ಸಾಲದ ಮೊತ್ತವನ್ನು ವಿಸ್ತರಿಸಿಕೊಳ್ಳಬಹುದು.

advertisement

ಉದಾಹರಣೆಗೆ ಒಬ್ಬ ವ್ಯಕ್ತಿ ತಿಂಗಳಿಗೆ 50 ಸಾವಿರ ರೂಪಾಯಿಗಳನ್ನು EMI ಆಗಿ ಪಾವತಿಸುತ್ತಾನೆ ಎಂದು ಭಾವಿಸಿ. ಆತನಿಗೆ ಅಷ್ಟು ಹಣ ಪಾವತಿ ಮಾಡಲು ಸಾಧ್ಯವಾಗದೇ ಇದ್ದರೆ, ಅದನ್ನು 25,000ಗಳಿಗೆ ಇಳಿಸಿಕೊಳ್ಳಬಹುದು ಹಾಗೂ ಸಾಲದ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಲ್ಲಿ ತಿಂಗಳ ಮೊತ್ತ ನಿರ್ಧರಿಸಲಾಗುತ್ತದೆ. ದೊಡ್ಡ ಮೊತ್ತದ ಹಣವನ್ನು ಕಡಿಮೆ EMI ಆಗಿ ಪರಿವರ್ತಿಸಿಕೊಂಡು ಹೆಚ್ಚು ಸಮಯದವರೆಗೆ ಸಾಲ ತೀರಿಸಲು ಸಾಲಗಾರ ಅವಕಾಶ ಪಡೆದುಕೊಳ್ಳುತ್ತಾನೆ ಇದರಿಂದ ಪ್ರತಿ ತಿಂಗಳ ಇಎಂಐ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ಇರಬಹುದು ಒಬ್ಬ ವ್ಯಕ್ತಿಗೆ ಸಾಲ ನೀಡಬೇಕು ಅಂದ್ರೆ ಆತನ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL Score) ಅನ್ನು ಮೊದಲು ಚೆಕ್ ಮಾಡುತ್ತದೆ. 750 ಪಾಯಿಂಟ್ ಗಿಂತಲೂ ಕಡಿಮೆ ಇರುವ ಗ್ರಾಹಕರಿಗೆ ಬ್ಯಾಂಕ್ ಸಾಲ ಕೊಡಲು ಹಿಂದೇಟು ಹಾಕುತ್ತದೆ ಅಥವಾ ಸಾಲ ಕೊಟ್ಟರು ಸಾಕಷ್ಟು ಶರತ್ತುಗಳನ್ನು ವಿಧಿಸುತ್ತದೆ. ಕೆಲವೊಮ್ಮೆ ಸಾಲ ಮರುಪಾವತಿ ಮಾಡದೆ ಇರುವವರನ್ನು ಡೀಫಾಲ್ಟರ್ (ಸುಸ್ತಿದಾರ) ಎಂದು ಘೋಷಿಸಲಾಗುತ್ತದೆ ಈ ರೀತಿ ಡಿಫೋಲ್ಡರ್ ಎಂದು ಕರೆಸಿಕೊಂಡರೆ ಬ್ಯಾಂಕ್ ಅವರಿಗೆ ಸಾಲ ನೀಡಲು ಹಿಂದೇಟು ಹಾಕಬಹುದು.

ಒಬ್ಬ ವ್ಯಕ್ತಿ ಸಾಲವನ್ನ ತೆಗೆದುಕೊಂಡು ಅದನ್ನು ತೀರಿಸುವ ಅವಧಿ ಹಾಗೂ ತೀರಿಸುವ ಫ್ರೀಕ್ವೆನ್ಸಿ ಆಧಾರದ ಮೇಲೆ ಆತನ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡದೆ ಇದ್ದಾಗ ಆತನ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ ಬರುತ್ತದೆ. 300 ರಿಂದ 900 ವರೆಗೆ ಕ್ರೆಡಿಟ್ ಸ್ಕೋರ್ (Credit Score) ಲೆಕ್ಕಾಚಾರ ಮಾಡಲಾಗುತ್ತದೆ. 700ಕ್ಕಿಂತ ಕಡಿಮೆ ಸ್ಕೋರ್ ಇರುವವರಿಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ದೊರಕುವುದು ಕಷ್ಟ.

ಆರ್ ಬಿ ಐ (RBI) ನ ಹೊಸ ರೂಲ್ಸ್ ಪ್ರಕಾರ ಸಾಲವನ್ನು ಮರು ರಚನೆ ಮಾಡಿಕೊಂಡವರಿಗೆ ಡೀಫಾಲ್ಟರ್ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಇದು ಅವರ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ಸಾಲ ಮರುಪಾವತಿ ಮಾಡಲು ಸರಿಯಾದ ಸಮಯಕ್ಕೆ ಆಗದೆ ಇದ್ದರೆ ಅದನ್ನು ತಕ್ಷಣವೇ ಮರು ರಚನೆ ಮಾಡಿಕೊಂಡು ಅವಧಿಯನ್ನು ವಿಸ್ತರಿಸಿಕೊಳ್ಳಿ ಆಗ ಇಎಂಐ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.