Karnataka Times
Trending Stories, Viral News, Gossips & Everything in Kannada

BSNL: 800 ರೂಪಾಯಿಗಿಂತಲೂ ಕಡಿಮೆಗೆ ಒಂದು ವರ್ಷದ ಮೊಬೈಲ್ ರೀಚಾರ್ಜ್ ; ಬಿಎಸ್ಎನ್ಎಲ್ ಹೊಸ ಆಫರ್!

advertisement

ದೇಶದಲ್ಲಿ ಇರುವ ಬೇರೆ ಬೇರೆ ಟೆಲಿಕಾಂ ಕಂಪನಿಗಳು ಬೇರೆ ಬೇರೆ ರೀತಿಯ ಗ್ರಾಹಕ ಸೇವೆಯನ್ನು ನೀಡುತ್ತವೆ. ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಂತಹ ಕಂಪನಿಗಳು ಇರಬಹುದು ಗ್ರಾಹಕರಿಗೆ ಅನುಕೂಲವಾಗುವಂತಹ ಒಂದಲ್ಲ ಒಂದು ಉತ್ತಮ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿವೆ. ಇದೀಗ ದೇಶದ ಹೆಸರುವಾಸಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಆಗಿರುವ ಬಿಎಸ್ಎನ್ಎಲ್ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಖಾಸಗಿ ಸ್ವಾಮ್ಯದ ಜಿಯೋ, ಏರ್ಟೆಲ್, ವಿಐ ಮೊದಲಾದ ಕಂಪನಿಗಳ ಸ್ಪರ್ಧಾತ್ಮಕ ಪ್ಲಾನ್ ಗಳಿಂದಾಗಿ ಗ್ರಾಹಕರು ಬಿಎಸ್ಎನ್ಎಲ್ ಅನ್ನು ಬಿಟ್ಟು ಇಂತಹ ಟೆಲಿಕಾಂ ಕಂಪನಿಗಳನ್ನು ಸೇರಿದ್ದರು. ಇದರಿಂದ ಬಿಎಸ್ಎನ್ಎಲ್ ಗೆ ಭಾರಿ ನಷ್ಟ ಆಗಿದ್ದು ಸುಳ್ಳಲ್ಲ. ಆದರೆ ಈಗ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಮತ್ತೆ ಹಿಂಪಡೆಯುವ ಸಲುವಾಗಿ ಅತಿ ಕಡಿಮೆ ಬೆಲೆಯ ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಇಂತಹ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಎಸ್ಎನ್ಎಲ್ ನ ಹೊಸ ಪ್ರಿಪೇಯ್ಡ್ ರಿಚಾರ್ಜ್ ಬೆಲೆ ಎಷ್ಟು?

advertisement

ಬಿಎಸ್ಎನ್ಎಲ್ (BSNL) ನ ಈ ಹೊಸ ರಿಚಾರ್ಜ್ ಪ್ಲಾನ್ ನೋಡುವುದಾದರೆ ಇದು ಒಂದು ವರ್ಷದ ಮಾನ್ಯತೆಯನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನ್ ಆಗಿದ್ದು 800 ರೂ. ಗಳಿಗಿಂತಲೂ ಕಡಿಮೆ ಬೆಲೆಗೆ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಹೌದು, ಬಿಎಸ್ಎನ್ಎಲ್ ನ ಈ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬೆಲೆ ಕೇವಲ 797 ರೂ.ಗಳು. ಒಂದು ವರ್ಷದ ಮಾನ್ಯತೆ ಹೊಂದಿರುವ ಈ ರಿಚಾರ್ಜ್ ಪ್ಲಾನ್ ಇನ್ನೂ ಅನೇಕ ಉಚಿತ ಪ್ರಯೋಜನಗಳನ್ನು ಕೂಡ ಹೊಂದಿದೆ.

797 ರೂಪಾಯಿಗಳ ಬಿಎಸ್ಎನ್ಎಲ್ ಪ್ರಿಪೇಯ್ಡ್ ರಿಚಾರ್ಜ್ ನಲ್ಲಿ ಅನಿಯಮಿತ ಡೇಟಾ, ಅನಿಯಮಿತ ಕರೆ ಸೌಲಭ್ಯ ಹಾಗೂ ಎಸ್ಎಂಎಸ್ ಸೌಲಭ್ಯ ಕೂಡ ಇದೆ. ಪ್ರತಿದಿನ ಎರಡು ಜಿಬಿ ಡಾಟಾ ನೀಡಲಾಗುತ್ತದೆ. ಒಂದು ವೇಳೆ ಹೈ ಸ್ಪೀಡ್ ಡಾಟಾ ಖಾಲಿಯಾದರೆ 40 ಕೆ ಬಿ ಪಿ ಎಸ್ (40kbps) ವೇಗದಲ್ಲಿ ಇಂಟರ್ನೆಟ್ ಪಡೆದುಕೊಳ್ಳಬಹುದು.

ಇನ್ನು ಎರಡನೆಯದಾಗಿ ಪ್ರತಿದಿನ 100 ಎಸ್ ಎಮ್ ಎಸ್ ಗಳು ಕೂಡ ಉಚಿತವಾಗಿ ಸಿಗುತ್ತವೆ ಹಾಗೆಯೇ ಗ್ರಾಹಕರು ಉಚಿತ ಕರೆ ಅಂದರೆ ಅನಿಯಮಿತ ಕರೆ ಮಾಡಲು ಕೂಡ ಅವಕಾಶವಿದೆ. ಎಸ್ಎಂಎಸ್ ಪ್ರಯೋಜನಗಳನ್ನು ಮೊದಲ ಎರಡು ತಿಂಗಳು ಪಡೆದುಕೊಳ್ಳಬಹುದು. 300 ದಿನಗಳ ವರೆಗೆ ಈ ಪ್ಲಾನ್ ಸಕ್ರಿಯವಾಗಿರುತ್ತದೆ. ಹಾಗಾದರೆ ಇನ್ಯಾಕೆ ತಡ ನೀವು ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಅನಿಯಮಿತ ಡಾಟಾ ಕರೆ ಹಾಗೂ ಎಸ್ಎಂಎಸ್ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತೆ ಮತ್ತೆ ರಿಚಾರ್ಜ್ ಮಾಡುವ ಅಗತ್ಯವಿಲ್ಲ. ವರ್ಷಕ್ಕೆ ಒಮ್ಮೆ 797 ರೂ. ರಿಚಾರ್ಜ್ ಮಾಡಿಸಿ ಬಿಎಸ್ಎನ್ಎಲ್ ನ ಹೊಸ ಪ್ಲಾನ್ ಆನಂದಿಸಿ.

advertisement

Leave A Reply

Your email address will not be published.