Karnataka Times
Trending Stories, Viral News, Gossips & Everything in Kannada

CM Siddaramaiah: ಗಣರಾಜ್ಯೋತ್ಸವ ದಿನದಂದು ರಾಜ್ಯದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ.

advertisement

ಇಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಮದ್ಯಮ ವರ್ಗದ ಜನತೆಗಾಗಿ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ರೈತರನ್ನು ಕೂಡ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಬೆಳೆ ಪರಿಹಾರ ನೀಡುವ ಬಗ್ಗೆ ಮಾಹಿತಿ ನೀಡಿದೆ.‌ ಈ ಸೌಲಭ್ಯ ಕ್ಕೆ ಈಗಾಗಲೇ ನಷ್ಟ ಉಂಟಾದ ರೈತರು ಅರ್ಜಿಸಲ್ಲಿಕೆ ಮಾಡಿದ್ದಾರೆ.

ಅಪ್ ಲೋಡ್ ಮಾಡಲಾಗಿದೆ:

ಈಗಾಗಲೇ ರೈತರ ನೋಂದಣಿ ಮತ್ತು ಫಲಾನುಭವಿಗಳ ಮಾಹಿತಿ ವ್ಯವಸ್ಥೆ ಫ್ರೂಟ್ಸ್ ಮೂಲಕ ಶೇ.75 ರಷ್ಟು ರೈತರ ಜಮೀನಿನ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ಅದೇ ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿದೆ.ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು https://landrecords.karnataka.gov.in/PariharaPayment/ ಇಲ್ಲಿ ತಿಳಿಯಬಹುದಾಗಿದೆ.

ಈ ವಾರದಲ್ಲೆ‌ಹಣ ಜಮೆ:

 

advertisement

 

ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದ್ದು ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹೌದು ರೈತರಿಗೆ ಈ ವಾರದಲ್ಲಿ ಬೆಳೆ ಪರಿಹಾರದ ಮೊದಲ ಕಂತು ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬೆಳೆ ಪರಿಹಾರ ಮೊತ್ತ (Crop Compensation Amount) 2000 ರೂಪಾಯಿ ಎನ್ನಲಾಗಿದ್ದು ಈಗಾಗಲೇ 550 ಕೋಟಿ ರೈತರ ಖಾತೆಗೆ ಹಣ ಜಮೆ ಆಗಿದೆ. ಈ ವಾರದಲ್ಲಿ ಹಣ ಬಿಡುಗಡೆಯಾಗಲಿದೆ ಎನ್ನುವ ಗುಡ್ ನ್ಯೂಸ್ ನೀಡಿದ್ದಾರೆ.

ಸಾಲದ ಬಡ್ಡಿ ಮನ್ನಾ ಮಾಡಲು ಆದೇಶ:

ಅದೇ ರೀತಿ ರೈತರ ಅಭಿವೃದ್ದಿಗಾಗಿ ಸಾಲ ನಿರ್ವಹಣೆ ಕುರಿತಾಗಿಯು ಗುಡ್ ನ್ಯೂಸ್ ನೀಡಿದ್ದು, ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಅಸಲುಗೆ ಬಡ್ಡಿ ಮನ್ನಾ ಮಾಡಲು ಕೂಡ ಸರ್ಕಾರ ಆದೇಶ ಪ್ರಕಟಣೆ ಮಾಡಲಿದೆ. ಈಗಾಗಲೇ ಕೆಲವೊಂದು‌ ಕೃಷಿಗಳಿಗೆ ಮಾರುಕಟ್ಟೆ ಯಲ್ಲಿ ಬೆಲೆ ಕಡಿಮೆ ಯಾಗಿದ್ದು ಕೊಬ್ಬರಿ ಬೆಲೆ ಕುಸಿತಗೊಂಡ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1500 ರೂಗಳ ನೆರವನ್ನು ನೀಡಲು ರಾಜ್ಯ ಸರಕಾರ ಮುಂದಾಗಿದೆ.

advertisement

Leave A Reply

Your email address will not be published.